ಬೆಂಗಳೂರು(ಅ.5): ಕಿಚ್ಚ ಸುದೀಪ್ ವಿರುದ್ಧ ಕರ್ನಾಟಕ ವಾಣಿಜ್ಯ ಮಂಡಳಿ ತಿರುಗಿ ಬಿದ್ದಿದೆ. ಸುದೀಪ್ ನಡೆಸಿಕೊಡುವ ರಿಯಾಲಿಟಿ ಶೋ ಬಿಗ್​ಬಾಸ್'ನಿಂದಾಗಿ ಚಲನಚಿತ್ರಗಳಿಗೆ ದೊಡ್ಡ ಪೆಟ್ಟು ಬೀಳಲಿದೆ. ‘ಸುದೀಪ್​​ ಅವರೇ ದಯವಿಟ್ಟು ಚಿತ್ರೋದ್ಯಮ ಉಳಿಸಿಕೊಳ್ಳಿ’ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಕನ್ನಡ ನಿರ್ಮಾಪಕರ ಸಂಘದ ಪರವಾಗಿ ಒಕ್ಕೊರಲ ಮನವಿ ಮಾಡಿದ್ದಾರೆ.

ಬಿಗ್​ಬಾಸ್​​ ಪ್ರಸಾರ ತಡೆ ಕೋರಿ ಪ್ರತಿಭಟನೆ ನಡೆಸಲು ನಿರ್ಮಾಪಕರ ಸಂಘ ನಿರ್ಧರಿಸಿದ್ದು, ಅ. 8ರಂದು ಬಿಡದಿಯ ಬಿಗ್​ಬಾಸ್ ಹೌಸ್ ಬಳಿ ಪ್ರತಿಭಟನೆ ನಡೆಸಲಿದ್ದಾರಂತೆ. 'ನಟರು ಟಿವಿಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರರಂಗಕ್ಕೆ ಪೆಟ್ಟು

ನಟ, ನಿರೂಪಕರ ಮನೆ ಬಾಗಿಲಿಗೆ ಹೋಗಿ ಮನವಿ ಮಾಡುತ್ತೇವೆ. ಹಿರಿಯ ನಟ ಅಂಬರೀಷ್ ಅವರು ಮಧ್ಯ ಪ್ರವೇಶಿಸಿ ಕನ್ನಡ ಚಿತ್ರರಂಗವನ್ನು ಉಳಿಸಬೇಕು ಎಂದು ಮನವಿ ಮಾಡಿದ್ದಾರೆ. ಹಾಗಾದರೆ ಬಿಗ್ ಬಾಸ್ ನಿಷೇಧವಾಗುತ್ತ ? ಕಾದು ನೋಡಬೇಕು.