ಬೆಂಗಳೂರು (ಡಿ. 28): ಶಾರೂಕ್ ಖಾನ್, ಅನುಷ್ಕಾ ಶರ್ಮಾ ಹಾಗೂ ಕತ್ರಿನಾ ಅಭಿನಯದ ಜೀರೋ ಚಿತ್ರ ಕಳೆದ ವಾರ ಬಿಡುಗಡೆಯಾಗಿದೆ.   ಆದರೆ ಬಾಕ್ಸಾಫೀಸ್ ಲೆಕ್ಕದಲ್ಲಿ ನೋಡಿದ್ರೆ ಹೇಳಿಕೊಳ್ಳುವ ಹಾಗಿಲ್ಲ. ಕೆಜಿಎಫ್ ಹವಾ ಮುಂದೆ ಜೀರೋ ಮಂಕಾಗಿದೆ. 

ಕೆಜಿಎಫ್ ಮುಂದೆ ಹೇಗಿದೆ ’ಜೀರೋ’ ? ಇಲ್ಲಿದೆ ವಿಮರ್ಶೆ

ಆದರೆ ಮ್ಯಾಟ್ರು ಇದಲ್ಲ. ಕತ್ರಿನಾ ಕೈಪ್- ರಣಬೀರ್ ಕಪೂರ್ ಡೇಟಿಂಗ್ ನಡೆಸಿದ್ದು ಗೊತ್ತೇ ಇದೆ. ಆಮೇಲೆ ಅದೇನಾಯ್ತೋ ಏನೋ ಇಬ್ಬರು ಸೈಲೆಂಟಾಗಿ ದೂರವಾದರು. ಈಗ ಜೀರೋ ಸಿನಿಮಾದಲ್ಲಿ ಕತ್ರಿನಾ ಕೈಫ್ ಪಾತ್ರ ಕೂಡಾ ಅವರ ರಿಯಲ್ ಲೈಫ್ ಗೆ ಹೋಲುವಂತಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಚಿತ್ರದಲ್ಲಿ ಆಕೆಯ ಬಾಯ್ ಫ್ರೆಂಡಾಗಿ ನಟಿಸಿದವನ ಹೆಸರು ಆದಿತ್ಯ ಕಪೂರ್. ಇಲ್ಲೇ ಎಲ್ಲೋ ಸಿಂಕ್ ಆಗುತ್ತೆ ಅಂತ ಕತ್ರಿನಾ ಕಾಲೆಳೆಯಲಾಗಿದೆ. ಇದೇ ಕಾರಣಕ್ಕೆ ರಣಬೀರ್ ಕಪೂರ್ ಜೀರೋ ನೋಡಿಲ್ಲವಂತೆ! 

ಪತ್ನಿ ನಟನೆ ಹೊಗಳಿದ ವಿರಾಟ್ ಕೊಹ್ಲಿ ಫುಲ್ ಟ್ರೋಲ್!

ಈ ಬಗ್ಗೆ ಪ್ರತಿಕ್ರಿಯಿಸಿರುವ ಕತ್ರಿನಾ, "ನನಗೆ ಗೊತ್ತು, ದೂರ ದೂರ ಇರುವ ಚುಕ್ಕಿಗಳನ್ನು ಸೇರಿಸಲು ಜನ ಪ್ರಯತ್ನಿಸುತ್ತಾರೆ. ನನ್ನ ಬ್ರೇಕ್ ಅಪ್ ಬಗ್ಗೆ ಮಾತನಾಡುತ್ತಾರೆ. ಆದರೆ ಜೀರೋ ಚಿತ್ರ ನೋಡಿದ ಬಳಿಕ ಹಾಗೆ ಹೇಳಲು ಸಾಧ್ಯವಿಲ್ಲ. ನನ್ನ ನಿಜ ಜೀವನವೇ ಬೇರೆ. ಚಿತ್ರವೇ ಬೇರೆ. ಎರಡೂ ಬೇರೆ ಬೇರೆ ಪಾತ್ರಗಳು‘ ಎಂದು ಎಂದು ಹೇಳಿದ್ದಾರೆ. 

ಚಿತ್ರದ ಪಾತ್ರ ನನಗೆ ಹೋಲುವುದಿಲ್ಲ ಎಂದು ಒತ್ತಿ ಒತ್ತಿ ಹೇಳಿದ್ದಾರೆ.