ಕೆಜಿಎಫ್ ಹಾಗೂ ಜೀರೋ ಒಂದೇ ದಿನ ಬಿಡುಗಡೆಯಾಗಿದೆ. ಎರಡೂ ಕೂಡಾ ಸೂಪರ್ ಸ್ಟಾರ್ ಸಿನಿಮಾಗಳು. ಆದರೂ ಕೆಜಿಎಫ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಜೀರೋ ಸಿನಿಮಾ ಹೇಗಿದೆ?ಶಾರೂಕ್ ಏನು ಮೋಡಿ ಮಾಡಿದ್ದಾರೆ ಇಲ್ಲಿದೆ ಜೀರೋ ಸಿನಿಮಾ ವಿಮರ್ಶೆ. 

ಬೆಂಗಳೂರು (ಡಿ. 21): ಕೆಜಿಎಫ್ ಜೊತೆ ಜೊತೆಗೆ ಇಂದು ಶಾರೂಕ್ ಖಾನ್ ಅಭಿನಯದ ಜೀರೋ ಸಿನಿಮಾ ಕೂಡಾ ತೆರೆಗೆ ಬಂದಿದೆ. ಶಾರೂಕ್ ಖಾನ್, ಅನುಷ್ಕಾ ಶರ್ಮಾ ಹಾಗೂ ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 

Add Asianetnews Kannada as a Preferred SourcegooglePreferred

ಹೇಗಿದೆ ಕೆಜಿಎಫ್ ? ಇಲ್ಲಿದೆ ಚಿತ್ರ ವಿಮರ್ಶೆ

ಶಾರೂಕ್ ಖಾನ್ ಕುಬ್ಜ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಸೈಂಟಿಸ್ಟ್ ಆಗಿರುವ ಅನುಷ್ಕಾ ಜೊತೆ ಲವ್ವಲ್ಲಿ ಬೀಳುತ್ತಾರೆ. ಹೀಗೆ ಕಥೆ ಮುಂದುವರೆಯುತ್ತಾ ಹೋಗುತ್ತದೆ. ಇವರಿಬ್ಬರೂ ಭಾರತದಿಂದ ಯುಎಸ್ ಗೆ ಹಾರುತ್ತಾರೆ. ದಾರಿಯುದ್ದಕ್ಕೂ ಇವರಿಬ್ಬರ ಪ್ರೇಮ ಪ್ರಣಯ ನಡೆಯುತ್ತದೆ. 

ಯಶ್ ಫ್ಯಾನ್ಸ್‌ಗೆ ಧಮಾಕಾ ಸುದ್ದಿ! ಬಂತು KGF ಗೇಮ್!

ಜೀರೋ ಚಿತ್ರ ಅನೇಕ ಹೊಸ ಹೊಸ ವಿಚಾರವನ್ನು, ಆಯಾಮವನ್ನು ಹೊಂದಿದ್ದರೂ ನ್ಯಾಯ ಕೊಡುವಲ್ಲಿ ವಿಫಲವಾಗಿದೆ. ಶಾರೂಕ್ ಖಾನ್ ರ ಕಾಮಿಡಿ ಮಧ್ಯೆ ಮಧ್ಯೆ ನಗು ತರಿಸುತ್ತದೆ. ದ್ವಿತಿಯಾರ್ಧದಲ್ಲಿ ಕತ್ರಿನಾ ಎಂಟ್ರಿಯಾಗುತ್ತದೆ. ಅಲ್ಲಿಂದ ಕಥೆ ತಿರುವು ಪಡೆದುಕೊಳ್ಳುತ್ತದೆ. ಶಾರೂಕ್ ಲವ್ ಯಶಸ್ವಿಯಾಗುತ್ತಾ? ಕ್ಲೈಮ್ಯಾಕ್ಸ್ ಏನಾಗುತ್ತದೆ ತಿಳಿದುಕೊಳ್ಳಲು ಒಮ್ಮೆ ಹೋಗಿ ಸಿನಿಮಾವನ್ನು ನೋಡಿಕೊಂಡು ಬನ್ನಿ.