ತೆರೆ ಕಾಣಲಿರುವ ಕರಣ್ ಜೋಹರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಯೇ ದಿಲ್ ಹೇ ಮುಷ್ಕಿಲ್ ನಲ್ಲಿ ಪಾಕ್ ಖ್ಯಾತ ನಟ ಫಾವದ್ ಖಾನ್ ನಟಿಸಿದ್ದು ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಭಾರತೀಯ ಚಲನಚಿತ್ರ ಮಂಡಳಿ ಮಾಲಿಕರು ತಾಕೀತು ಮಾಡಿದ್ದಾರೆ.

ಮುಂಬೈ (ಅ.14): ತೆರೆ ಕಾಣಲಿರುವ ಕರಣ್ ಜೋಹರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಯೇ ದಿಲ್ ಹೇ ಮುಷ್ಕಿಲ್ ನಲ್ಲಿ ಪಾಕ್ ಖ್ಯಾತ ನಟ ಫಾವದ್ ಖಾನ್ ನಟಿಸಿದ್ದು ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಭಾರತೀಯ ಚಲನಚಿತ್ರ ಮಂಡಳಿ ಮಾಲಿಕರು ತಾಕೀತು ಮಾಡಿದ್ದಾರೆ.

ಯೇ ದಿಲ್ ಹೇ ಮುಷ್ಕಿಲ್ ಚಿತ್ರ ಸಾರ್ವಜನಿಕ ಭಾವನೆಗಳನ್ನು ಒಳಗೊಂಡ ಚಿತ್ರವಾಗಿದ್ದು ಇದರಲ್ಲಿ ಪಾಕ್ ನ ಖ್ಯಾತ ನಟ ಫಾವದ್ ಖಾನ್ ಅಭಿನಯಿಸಿದ್ದಾರೆ. ಇವರು ಭಾರತದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

ಕಳೆದ ತಿಂಗಳು ನಡೆದ ಉರಿ ದಾಳಿಯನ್ನು ಖಂಡಿಸಿ ಪಾಕ್ ನಟರಿಗೆ ಬಾಲಿವುಡ್ ನಲ್ಲಿ ನಟಿಸಲು ಅವಕಾಶ ನೀಡಬಾರದು ಎನ್ನುವ ವಾದ ಕೇಳಿ ಬಂದಿತ್ತು.

ನಾವು ಪಾಕ್ ನಟರು ಅಭಿನಯಿಸಿರುವ ಚಿತ್ರವನ್ನು ಬಿಡುಗಡೆ ಮಾಡುವುದಿಲ್ಲ. ದೇಶದ ಹಿತಾಸಕ್ತಿ ಮತ್ತು ದೇಶಭಕ್ತಿ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಯೇ ದಿಲ್ ಹೇ ಮುಷ್ಕಿಲ್ ಚಿತ್ರವನ್ನು ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಗೋವಾದಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದೇವೆ ಎಂದು ಭಾರತೀಯ ಚಲನಚಿತ್ರ ಮಂಡಳಿ ಮಾಲಿಕರು ಹೇಳಿದ್ದಾರೆ.