ಈವರೆಗೆ ತಮ್ಮ ಶೋನ ಪ್ರಮುಖ ಕಲಾವಿದರನ್ನು ಕಳೆದುಕೊಂಡು ಚಿಂತೆಯಲ್ಲಿದ್ದ ಕಪಿಲ್ ಶರ್ಮಾಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸದ್ಯ ಶೋ ನಡೆಯುವುದೇ ಡೌಟ್!. ವಾಸ್ತವವಾಗಿ ಸೋನಿ ವಾಹಿನಿ 2017-18ನೇ ಸಾಲಿನ ಕಪಿಲ್ ಶರ್ಮಾ ಕಾರ್ಯಕ್ರಮದ ಕಾಂಟ್ರ್ಯಾಕ್ಟ್ ನವೀಕರಣದ ವಿಚಾರವಾಗಿ ಹೊಸ ಹೆಜ್ಜೆ ಇಟ್ಟಿದೆ.
ಮುಂಬೈ(ಎ.03): ಈವರೆಗೆ ತಮ್ಮ ಶೋನ ಪ್ರಮುಖ ಕಲಾವಿದರನ್ನು ಕಳೆದುಕೊಂಡು ಚಿಂತೆಯಲ್ಲಿದ್ದ ಕಪಿಲ್ ಶರ್ಮಾಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸದ್ಯ ಶೋ ನಡೆಯುವುದೇ ಡೌಟ್!. ವಾಸ್ತವವಾಗಿ ಸೋನಿ ವಾಹಿನಿ 2017-18ನೇ ಸಾಲಿನ ಕಪಿಲ್ ಶರ್ಮಾ ಕಾರ್ಯಕ್ರಮದ ಕಾಂಟ್ರ್ಯಾಕ್ಟ್ ನವೀಕರಣದ ವಿಚಾರವಾಗಿ ಹೊಸ ಹೆಜ್ಜೆ ಇಟ್ಟಿದೆ.
ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಸೋನಿ ವಾಹಿನಿ ಕಪಿಲ್ ಶರ್ಮಾಗೆ ತನ್ನ ಕಾರ್ಯಕ್ರಮ ನಡೆಸಿಕೊಡಲು ಕೇವಲ ಒಂದು ತಿಂಗಳ ಗಡುವು ನೀಡಿರುವುದಾಗಿ ಒತಿಳಿದು ಬಂದಿದೆ. 2016ರ ಎಪ್ರಿಲ್ 24ರಂದು ಸೋನಿ ವಾಹಿನಿಯಲ್ಲಿ ಆರಂಭವಾಗಿದ್ದ ಈ ಕಾರ್ಯಕ್ರಮದ ಕಾಂಟ್ರ್ಯಾಕ್ಟ್ ಮುಗಿಯಲು ಇನ್ನು ಕೇವಲ ಎರಡು ವಾರಗಳಷ್ಟೇ ಬಾಕಿ ಉಳಿದಿದೆ.
ಈ ಕಾರ್ಯಕ್ರಮವನ್ನು ಕಪಿಲ್ ಶರ್ಮಾ ನಿರೂಪಿಸುತ್ತಿದ್ದು, ಆರಂಭದಲ್ಲೇ ಪ್ರಖ್ಯಾತಿ ಗಳಿಸಿತ್ತು. ಇನ್ನು ದಿನಗಳೆದಂತೆ ಹೆಚ್ಚುತ್ತಿದ್ದ ಟಿಆರ್'ಪಿ ಕಂಡ ವಾಹಿನಿ ಮುಂದಿನ ವರ್ಷ ಡೀಲ್ ಹಣವನ್ನು 106 ಕೋಟಿಗೆ ಹೆಚ್ಚಿಸುವುದಾಗಿ ಹೇಳಿಕೊಂಡಿತ್ತು. ಆದರೆ ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಪ್ರವಾಸದಿಂದ ವಾಪಾಸಾಗುತ್ತಿದ್ದಾಗ ತನ್ನ ತಂಡದ ಇತರ ಕಲಾವಿದರೊಂದಿಗೆ ನಡೆದ ಜಗಳ ಈ ಶೂಪರ್ ಹಿಟ್ ಕಾರ್ಯಕ್ರಮಕ್ಕೆ ಸಮಸ್ಯೆ ತಂದಿಟ್ಟಿದೆ. ಈ ಜಗಳದ ಬಳಿಕ ಸುನೀಲ್ ಗ್ರೋವರ್, ಅಲಿ ಅಜರ್, ಚಂದನ್ ಪ್ರಭಾಕರ್ ಹಾಗೂ ಸುಗಂಧ ಮಿಶ್ರಾರಂತಹ ಅತ್ಯುತ್ತಮ ಕಲಾವಿದರು ಈ ಕಾರ್ಯಕ್ರಮದಿಂದ ಹೊರಹೋಗಿದ್ದರು.
ಇದರಿಂದ ವಾಹಿನಿಯ ಟಿಆರ್'ಪಿ ,ಮೇಲೆ ಭಾರೀ ಹೊಡೆತ ಬಿದ್ದಿದ್ದು, ವಾಹಿನಿಯ ಅಧಿಕಾರಿಗಳ ಮುನಿಸಿಗೆ ಕಾರಣವಾಗಿದೆ. ಹೀಗಾಗಿ ಕಾರ್ಯಕ್ರಮವನ್ನು ಬಹಿಷ್ಕರಿಸಿ ಹೋಗಿರುವ ಕಲಾವಿದರನ್ನು ಹಿಂದೆ ಕರೆತರುವುದರೊಂದಿಗೆ ಟಿಆರ್'ಪಿ ಹೆಚ್ಚಿಸಿದರೆ ಮಾತ್ರ ಈ ಕಾರ್ಯಕ್ರಮ ನಡೆಸಿಕೊಂಡುವ ಅವಕಾಶ ಕಪಿಲ್ ಶರ್ಮಾರಿಗೆ ಮುಂದಿನ ವರ್ಷವೂ ಕಪಿಲ್'ಗೆ ಸಿಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸದ್ಯ ಬಹಿಷ್ಕರಿಸಿ ತೆರಳಿರುವ ಕಲಾವಿದರ ಬದಲಿಗೆ ಬೇರೆ ಹಾಸ್ಯಗಾರರನ್ನು ಶೋ ತರಿಸುವ ಪ್ರಯತ್ನದಲ್ಲಿ ಕಪಿಲ್ ವ್ಯಸ್ತವಾಗಿದ್ದಾರೆ ಎಂದು ತಿಳಿದು ಬಂದಿದೆ.
