ಕಳೆದ ವರ್ಷ ಪತ್ನಿ ಜೊತೆ ಏಪ್ರಿಲ್​ನಲ್ಲಿ ವಿದೇಶಕ್ಕೆ ತೆರಳಿದ್ದರು ನಟ ದರ್ಶನ್. ಆದರೆ, ಆ ಬಳಿಕ ನಟ ದರ್ಶನ್ ಲೈಫ್ ಬಿರುಗಾಳಿಗೆ ಸಿಲುಕಿತ್ತು. ಕೊಲೆ ಆರೋಪ ಹೊತ್ತು ಜೈಲು ಸೇರಿದ್ದ ಸ್ಟಾರ್ ಹೀರೋ ದರ್ಶನ್, ಈಗ ಮತ್ತೆ ಸಿನಿಮಾ ಶೂಟಿಂಗ್​​​​​ಗಾಗಿ ಪತ್ನಿ ವಿಜಯಲಕ್ಷ್ಮೀ ವಿದೇಶ ಪ್ರಯಾಣ ಹೊರಟಂತಾಗಿದೆ.

ನಟ, 'ದಿ ಡೆವಿಲ್' ಹೀರೋ' ಸಿನಿಮಾ ಹೀರೋ ನಟ ದರ್ಶನ್ ತೂಗುದೀಪ (DarshanThoogudeepa) ಕೊನೆಗೂ ವಿದೇಶಿ ಫ್ಲೈಟ್​ ಹತ್ತಿದ್ದಾರೆ. ಹಲವು ಸಮಯದ ಬಳಿಕ ನಟ ದರ್ಶನ್ ಅವರು ಶೂಟಿಂಗ್‌ಗೆ ವಿದೇಶದ ನೆಲಕ್ಕೆ ಕಾಲಿಡಲಿದ್ದಾರೆ. ಥೈಲ್ಯಾಂಡ್‌ಗೆ ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮೀ ಜೊತೆಗೆ ಶೂಟಿಂಗ್‌ಗೆ ತೆರಳಿದ್ದಾರೆ. ಕೆಲವು ದೇಶಗಳು ಕೊಲೆ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ವೀಸಾ ನೀಡಿದ ಹಿನ್ನೆಲೆಯಲ್ಲಿ ಇದೀಗ ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಫಿಕ್ಸ್ ಮಾಡಲಾಗಿದೆ ಎನ್ನಲಾಗಿದೆ. ಚಿತ್ರಕಥೆಯಲ್ಲೇ ಥೈಲ್ಯಾಂಡ್‌ ಶೂಟಿಂಗ್‌ ಕೂಡ ಅಗತ್ಯ ಇರಬಹುದು, ಆ ಕಾರಣಕ್ಕೆ ಕೂಡ ಹೋಗಿರಬಹುದು. ಒಟ್ಟಿನಲ್ಲಿ ನಟ ದರ್ಶನ್ ಅವರು ದೇಶ ಬಿಟ್ಟು ಈ ಮೂಲಕ ವಿದೇಶಕ್ಕೆ ಕಾಲಿಟ್ಟಂತಾಗಿದೆ.

ಥೈಲ್ಯಾಂಡ್‌ಗೆ ಹಾರಿದ ನಟ ದರ್ಶನ್: ಹೌದು, ಮಿಲನ ಪ್ರಕಾಶ್ ನಿರ್ದೇಶನದ 'ದಿ ಡೆವಿಲ್' ಸಿನಿಮಾದ ಶೂಟಿಂಗ್‌ಗೆ ನಟ ದರ್ಶನ್ ಅವರು ಥೈಲ್ಯಾಂಡ್‌ಗೆ ತೆರಳಿದ್ದಾರೆ. ನಿನ್ನೆ ರಾತ್ರಿ 1 ಗಂಟೆಗೆ ಫ್ಲೈಟ್‌ಗೆ ನಟ ದರ್ಶನ್ ಅವರು ಡೆವಿಲ್ ಟೀಂ ಹಾಗೂ ಪತ್ನಿ ವಿಜಯಲಕ್ಷ್ಮೀ ಜೊತೆ ಹೋಗಿದ್ದಾರೆ. ಏಳು ದಿನ ತೈಲ್ಯಾಂಡ್​​ನಲ್ಲೇ ನಡೆಯಲಿದೆ ಡೆವಿಲ್ ಚಿತ್ರೀಕರಣ ಎನ್ನಲಾಗಿದೆ. ವಿದೇಶದಲ್ಲಿ ನಾಳೆಯಿಂದ, ಅಂದರೆ 17 ಜುಲೈ 2025ರಿಂದ ಡೆವಿಲ್ ಚಿತ್ರೀಕರಣ ಆರಂಭ ಆಗಲಿದೆ.

ಅಲ್ಲಿ, ಥೈಲ್ಯಾಂಡ್‌ನಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ರಚನಾ ರೈ ನಾಯಕಿ ಆಗಿರೋ ಸಿನಿಮಾದ ಚಿತ್ರೀಕರಣ ಇದೀಗ ವಿದೇಶಕ್ಕೂ ಕಾಲಿಟ್ಟಿದೆ. ಈ ಚಿತ್ರದಲ್ಲಿ ನಟ ದರ್ಶನ್ ಅವರು 'ಫಾರಿನ್​​ನಲ್ಲೇ ಇರೋ ಹೀರೋ' ಕ್ಯಾರೆಕ್ಟರ್​ ಮಾಡಿದ್ದಾರೆ. ಅಲ್ಲಿನ ಶೂಟಿಂಗ್‌ಗೆ ಫ್ಯಾಮಿಲಿ ಸಮೇತ ನಟ ದರ್ಶನ್ ಹೊರಟಿದ್ದಾರೆ. ಅಂದರೆ, ಪತ್ನಿ ವಿಜಯಲಕ್ಷ್ಮೀ ಕೂಡ ದರ್ಶನ್ ಜೊತೆ ವಿದೇಶಕ್ಕೆ ಪ್ರಯಾಣ ಮಾಡಿದ್ದಾರೆ. ಈ ತಿಂಗಳು 11ನೇ ತಾರೀಖಿನಿಂದ 30ನೇ ತಾರೀಖಿನ ವರೆಗೂ ವಿದೇಶದಲ್ಲಿರೋದಕ್ಕೆ ಅನುಮತಿ ಇದೆ.

ಅಂದಹಾಗೆ, ಕಳೆದ ವರ್ಷ ಪತ್ನಿ ಜೊತೆ ಏಪ್ರಿಲ್​ನಲ್ಲಿ ವಿದೇಶಕ್ಕೆ ತೆರಳಿದ್ದರು ನಟ ದರ್ಶನ್. ಆದರೆ, ಆ ಬಳಿಕ ನಟ ದರ್ಶನ್ ಲೈಫ್ ಬಿರುಗಾಳಿಗೆ ಸಿಲುಕಿತ್ತು. ಕೊಲೆ ಆರೋಪ ಹೊತ್ತು ಜೈಲು ಸೇರಿದ್ದ ಸ್ಟಾರ್ ಹೀರೋ ದರ್ಶನ್, ಈಗ ಮತ್ತೆ ಸಿನಿಮಾ ಶೂಟಿಂಗ್​​​​​ಗಾಗಿ ಪತ್ನಿ ವಿಜಯಲಕ್ಷ್ಮೀ ವಿದೇಶ ಪ್ರಯಾಣ ಹೊರಟಂತಾಗಿದೆ. ಯುರೋಪ್‌ಗೆ ವೀಸಾ ಸಿಗದ ಹಿನ್ನೆಲೆಯಲ್ಲಿ ಇದೀಗ ಥೈಲ್ಯಾಂಡ್‌ಗೆ ನಟ ದರ್ಶನ್ ಹೋಗಿದ್ದಾರೆ ಎನ್ನಲಾಗಿದೆ.