ಈ ನಡುವೆ ‘ಬಿಗ್‌ಬಾಸ್’ ಮನೆಯಲ್ಲಿದ್ದ ಕಾಲಕ್ಕೇ ಜಗಳ ಮಾಡಿಕೊಂಡು ಖ್ಯಾತರಾಗಿದ್ದ ಕಿರಿಕ್ ಕೀರ್ತಿ ಮತ್ತು ಪ್ರಥಮ್ ಒಂದು ಶೋನಲ್ಲಿ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ.

ಸೂಪರ್ ಟಾಕ್‌ಟೈಮ್‌ನಲ್ಲಿ ಕಿರಿಕ್ ಜೊತೆ ಪ್ರಥಮ್ ಸದ್ಯ ಬಹಳ ಚರ್ಚೆಗೆ ಗ್ರಾಸವಾಗುತ್ತಿರುವ ‘ಬಿಗ್ ಬಾಸ್’ ಭುವನ್- ಪ್ರಥಮ್ ‘ಕಚ್ಚಾಟ’ಕ್ಕೆ ಹಲವು ತಿರುವುಗಳು ಸಿಗುತ್ತಿವೆ. ಈ ನಡುವೆ ‘ಬಿಗ್‌ಬಾಸ್’ ಮನೆಯಲ್ಲಿದ್ದ ಕಾಲಕ್ಕೇ ಜಗಳ ಮಾಡಿಕೊಂಡು ಖ್ಯಾತರಾಗಿದ್ದ ಕಿರಿಕ್ ಕೀರ್ತಿ ಮತ್ತು ಪ್ರಥಮ್ ಒಂದು ಶೋನಲ್ಲಿ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಕಲರ್ಸ್ ಸೂಪರ್‌ನಲ್ಲಿ ಪ್ರಸಾರವಾಗಲಿರುವ ಅಕುಲ್ ಬಾಲಾಜಿ ನಡೆಸಿಕೊಡುವ ‘ಸೂಪರ್ ಟಾಕ್‌ಟೈಮ್’ ಶೋನಲ್ಲಿ ಇವರಿಬ್ಬರೂ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ.