ಬೆಂಗಳೂರು[ಅ.12]: ಎಲ್ಲೆಡೆ ಸುದ್ದಿಯಲ್ಲಿರುವ #Metoo ಅಭಿಯಾನದ ಬಗ್ಗೆ ಕನ್ನಡದ ಗಾಯಕಿಯರು ತಮ್ಮ ಮೌನ ಮುರಿದಿದ್ದಾರೆ. 

ಗಾಯಕಿ ಸೌಮ್ಯರಾವ್ ಈ ಬಗ್ಗೆ ಮಾತನಾಡಿ, ಸಣ್ಣ ವಯಸ್ಸಿನಲ್ಲೇ ನನಗೂ ಇಂತಹ ಅನುಭವ ಆಗಿದೆ. ಆಗ ನನಗೆ ಏನೂ ಗೊತ್ತಾಗುತ್ತಿರಲಿಲ್ಲ. ಹಾಗಾಗಿ ತಮ್ಮ ಪೋಷಕರೊಂದಿಗೆ ಈ ಬಗ್ಗೆ ಹೇಳಿಕೊಂಡಿಲ್ಲ. ನಮ್ಮ ಕ್ಷೇತ್ರದಲ್ಲಿಯೂ ಲೈಂಗಿಕ ಕಿರುಕುಳ ಇದೆ. ಮನುಷ್ಯರು ಇರುವ ಕ್ಷೇತ್ರದಲ್ಲಿ ಇದ್ದೇ ಇರುತ್ತದೆ . ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಓದಿ: ರಘು ದೀಕ್ಷಿತ್‌ಗೂ ತಟ್ಟಿದ ’ಮೀ ಟೂ’ ಬಿಸಿ
 
ನಾವು ಎಂದಿಗೂ ಶೋಷಣೆಗೆ ಒಳಗಾದವರ ಪರವಾಗಿ ನಿಲ್ಲುತ್ತೇವೆ. ಲೈಂಗಿಕ ಕಿರುಕುಳವಾದ ಸಂದರ್ಭದಲ್ಲೇ ಈ ಬಗ್ಗೆ ಮಾತನಾಡಬೇಕು. ಇಂತಹ ವಿಚಾರದಲ್ಲಿ ಎಲ್ಲರೂ ನಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ನಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಇದ್ದಾಗ ಲೈಂಗಿಕ ಕಿರುಕುಳ ಶೋಷಣೆ ತಡೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಗಾಯಕ ರಘು ದೀಕ್ಷಿತ್ ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದರು ಎಂದು ದಕ್ಷಿಣ ಭಾರತದ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ್ #Metoo ಅಭಿಯಾನದಲ್ಲಿ ಹೇಳಿಕೊಂಡಿದ್ದರು.ಈ ಘಟನೆ ಆದದ್ದು ನಿಜ ಎಂದೇ ತಮ್ಮ ತಪ್ಪನ್ನು ಒಪ್ಪಿಕೊಂಡು  ಕ್ಷಮೆ ಕೇಳಿರುವುದಾಗಿ ರಘು ದೀಕ್ಷಿತ್ ಸ್ಪಷ್ಟೀಕರಣ ಕೂಡ ನೀಡಿದ್ದರು. ಈ ನಡುವೆ ಚಿನ್ಮಯಿ ಅವರಿಗೆ ರಘು ದೀಕ್ಷಿತ್ ಪತ್ನಿ ಮಯೂರಿ ಉಪಾಧ್ಯ ಬೆಂಬಲ ನೀಡಿದ್ದರು. 

ಈ ಸುದ್ದಿಯನ್ನು ಓದಿ: #MeToo ರಘು ದೀಕ್ಷಿತ್: ಸಂತ್ರಸ್ತೆ ಪರ ನಿಂತ ಪತ್ನಿ ಮಯೂರಿ