ಎಸ್‌ ಮುರಳಿ ಮೋಹನ್ ಅವರು ಕನ್ನಡದ ನಿರ್ದೇಶಕರು, ನಟರು ಹಾಗೂ ಸಂಭಾಷಣೆಕಾರರು. ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿ, ನಟಿಸಿ, ಸಂಭಾಷಣೆ ಬರೆದು, ಸಿನಿಮಾವನ್ನೇ ಉಸಿರಾಗಿಸಿಕೊಂಡವರು. ಅದರೆ, ಈಗ ಇತ್ತೀಚೆಗೆ ಅದನ್ನು ಮಾಡುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಸಿನಿಮಾ ಕೆಲಸ ನಿಲ್ಲಿಸಿದ್ದರು.

ಕನ್ನಡದ ಹಿರಿಯ ನಿರ್ದೇಶಕ ಎಸ್ ಮುರಳಿ ಮೋಹನ್ (S Murali Mohan) ಅವರು ಇಂದು (13 ಆಗಸ್ಟ್ 2025) ನಿಧನರಾಗಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಸಂತ, ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಮಲ್ಲಿಕಾರ್ಜುನ, ರಿಯಲ್ ಸ್ಟಾರ್ ಉಪೇಂದ್ರ ನಟನೆಯ ನಾಗರಹಾವು ಸಿನಿಮಾಗಳು ಸಿನಿಪ್ರಿಯರಿಗೆ ಗೊತ್ತು. ಹೀಗೆ ಹಲವು ಸಿನಿಮಾಗಳನ್ನು ಕನ್ನಡ ಚಿತ್ರರಂಗ ಹಾಗೂ ಚಿತ್ರರಸಿಕರಿಗೆ ಕೊಟ್ಟಿರುವವರು ನಿರ್ದೇಶಕರಾದ ಎಸ್ ಮುರಳಿ ಮೋಹನ್ (S Murali Mohan) ಅವರು ಇಂದು ನಿಧನರಾಗಿದ್ದಾರೆ.

ಸತತ 36 ವರ್ಷಗಳು ಚಿತ್ರರಂಗದಲ್ಲಿ ಎಸ್ ಮುರಳಿ ಮೋಹನ್ ಸೇವೆ ಸಲ್ಲಿಸಿದ್ದಾರೆ. ಆದರೆ ಇತ್ತೀಚೆಗೆ ಅವರು ತಮ್ಮ ನಿರ್ದೇಶನ, ನಟನೆ ಹಾಗೂ ಸಂಭಾಷಣೆ ಬರೆಯುವ ವೃತ್ತಿಯಿಂದ ಸಾಕಷ್ಟು ದೂರವೇ ಉಳಿದಿದ್ದರು. ಕಾರಣ, ಅವರಿಗೆ ತೀವ್ರ ಅನಾರೋಗ್ಯ ಕಾಡುತ್ತಿತ್ತು. ಕಿಡ್ನಿ ಸಮಸ್ಯೆಯಿಂದ ಅವರು ಹಲವು ತಿಂಗಳಿಗಳಿಂದ ಬಳಲುತ್ತಿದ್ದರು.

ಹೌದು, ಎಸ್‌ ಮುರಳಿ ಮೋಹನ್ ಅವರು ಕನ್ನಡದ ನಿರ್ದೇಶಕರು, ನಟರು ಹಾಗೂ ಸಂಭಾಷಣೆಕಾರರು. ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿ, ನಟಿಸಿ, ಸಂಭಾಷಣೆ ಬರೆದು, ಸಿನಿಮಾವನ್ನೇ ಉಸಿರಾಗಿಸಿಕೊಂಡವರು. ಅದರೆ, ಈಗ ಇತ್ತೀಚೆಗೆ ಅದನ್ನು ಮಾಡುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಮುರಳಿ ಮೋಹನ್ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡು ನಿರ್ದೇಶನ ನಿಲ್ಲಿಸಿದ್ದರು. ಕೋವಿಡ್ ಸಮಯದಿಂದಲೇ, ಅಂದರೆ 5-6 ವರ್ಷದಿಂದ ಅವರಿಗೆ ಕಿಡ್ನಿ ಸಮಸ್ಯೆ ಇತ್ತು, ಡಯಾಲಿಸಿಸ್‌ನಲ್ಲಿ ಇದ್ದರು, ಆದರೆ ಈಗ ಅದು ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌ಗೆ ಬಂದಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಮರಣ ಹೊಂದಿದ್ದಾರೆ.

ನಾಗರಹಾವು, ಸಂತ, ಮಲ್ಲಿಕಾರ್ಜುನ್ ಚಿತ್ರಗಳ ನಿರ್ದೇಶಕ ಎಸ್.ಮುರುಳಿಮೋಹನ್ ಇನ್ನಿಲ್ಲ:

ಉಪೇಂದ್ರ ಜೊತೆಗೆ ಶ್, ಓಂ ಚಿತ್ರಗಳಲ್ಲಿ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದ ಮುರುಳಿ ಮೋಹನ್ ಇಂದು, ಅಂದರೆ 13 ಆಗಸ್ಟ್ 2025ರಂದು ನಿಧನರಾಗಿದ್ದಾರೆ. ಉಪೇಂದ್ರ ನಟನೆಯ ನಾಗರಹಾವು, ಶಿವರಾಜ್​ಕುಮಾರ್ ನಟನೆಯ ಸಂತ ಚಿತ್ರಗಳ ನಿರ್ದೇಶಕ ಎಸ್ ಮುರಳಿ ಮೋಹನ್ ಅವರಿಗೆ ಅಪಾರವಾದ ಸಿನಿಮಾ ಪ್ರೀತಿ ಇತ್ತು. ಸಾಯುವ ಸಮಯದಲ್ಲಿ ಕೂಡ ಅವರು ಸಿನಿಮಾ ಬಗ್ಗೆಯೇ ಮಾತನ್ನಾಡುತ್ತಿದ್ದರು ಎನ್ನಲಾಗಿದೆ.

ಎಸ್ ಮುರಳಿ ಮೋಹನ್ ಅವರು 'ರಾಜ್' ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ ಜೊತೆಗೆ ನಟನೆ ಕೂಡ ಮಾಡಿದ್ದರು. ನಟನೆ, ಗಾಯನ, ಬರವಣಿಗೆ ಜೊತೆಗೆ ನಿರ್ದೇಶನದಲ್ಲೂ ಹೆಸರು ಮಾಡಿದ್ದ ಬಹುಮುಖ ಪ್ರತಿಭೆ ಎಸ್ ಮುರಳಿ ಮೋಹನ್ ಅವರೀಗ ನಮ್ಮಿಂದ ದೂರವಾಗಿದ್ದಾರೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮುರುಳಿ ಮೋಹನ್​ಅವರಿಗೆ ಸುದೀಪ್, ಉಪೇಂದ್ರ ಧನಸಹಾಯ ಮಾಡಿದ್ದರು. ಕಿಡ್ನಿ ಕಸಿಗೆ ಸಜ್ಜಾಗಿದ್ದ ಮುರುಳಿ ಮೋಹನ್, ಇದೀಗ ಬಹುಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಎಲ್ಲವನ್ನೂ ಹೇಳಿಕೊಂಡಿದ್ದರು ಎಸ್ ಮುರಳಿ ಮೋಹನ್. 'ನನ್ನ ಆರೋಗ್ಯ ಸರಿಯಾಗಿಲ್ಲ. ಈ ಮೊದಲು ಡಯಾಲಿಸ್‌ ಮಾಡಿಸಿಕೊಳ್ಳುತ್ತ ಒಂದು ಹಂತದಲ್ಲಿ ಇದ್ದೆ ನಾನು. ಆದರೆ ಈಗ ಅದು ಟ್ರಾನ್ಸ್‌ಪ್ಲಾಂಟೇಶನ್ ಹಂತಕ್ಕೆ ಬಂದಿದೆ. ಈಗ ತಿಂಗಳಿಗೆ 30 ಸಾವಿರ ಖರ್ಚಾಗುತ್ತಿದೆ. ಹೊಸ ಕಿಡ್ನಿ ಹಾಕಿಸಿಕೊಳ್ಳಲು 30-35 ಲಕ್ಷ ಬೇಕು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನನ್ನಿಂದ ಅದು ಸಾಧ್ಯವಾಗುತ್ತಿಲ್ಲ. ಮೆಡಿಸನ್‌, ಡಯಾಲಿಸಿಸ್ ಖರ್ಚಿಗೇ ಒದ್ದಾಡುವ ಪರಿಸ್ಥಿತಿ ಇದೆ' ಎಂದಿದ್ದರು.

ಇನ್ನು, ಯಾರಾದ್ರೂ ಸಹಾಯ ಹಸ್ತ ಚಾಚಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತ 'ನಾವು ವ್ಯಕ್ತಿಗತವಾಗಿ ಯಾರನ್ನೂ ಕೇಳುವುದು ಸರಿಯಲ್ಲ. ಆದರೂ ಕೂಡ ನಟ ಸುದೀಪ್ ಸೇರಿದಂತೆ ಕೆಲವರನ್ನು ಸಂಪರ್ಕಿಸಿದ್ದೇನೆ. ನಟ ಉಪೇಂದ್ರ, ನಟ ಸುದೀಪ್ ಹಾಗೂ ನಾನು ಒಂದು ಕಾಲದಲ್ಲಿ ಜೊತೆಯಲ್ಲಿ ಓಡಾಡಿಕೊಂಡಿದ್ದವರು.

ಉಪೇಂದ್ರ ಅವರನ್ನು ಸಂಪರ್ಕಿಸಿ ಸ್ವಲ್ಪ ಸಹಾಯ ಪಡೆದುಕೊಂಡಿದ್ದೇನೆ. ಸದ್ಯ ಸುದೀಪ್ ಸಂಪರ್ಕಿಸುವ ಕೆಲಸ ಮಾಡುತ್ತಿದ್ದೇನೆ. ಆದರೆ, ಈ ಬಗ್ಗೆ ಯಾರನ್ನೂ ದೂಷಿಸುವುದು ಸರಿಯಲ್ಲ. ಏಕೆಂದರೆ, ಇದು ನನ್ನ ಕೆಟ್ಟ ಪರಸ್ಥಿತಿ ಅಷ್ಟೇ. ಅವರು ಸಹಾಯ ಮಾಡಲಿ, ಇವರು ಸಹಾಯ ಮಾಡಲಿ ಎಂದು ಹೇಳುವದು ತಪ್ಪು' ಎಂದಿದ್ದರು.

ಆದಾಗ್ಯೂ, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮುರುಳಿ ಮೋಹನ್​ಅವರಿಗೆ ನಟ ಕಿಚ್ಚ ಸುದೀಪ್, ಉಪೇಂದ್ರ ಧನಸಹಾಯ ಮಾಡಿದ್ದರು ಎಂಬಸಂಗತಿ ಈಗ ಬೆಳಕಿಗೆ ಬಂದಿದೆ. ಆದರೆ, ಕಿಡ್ನಿ ಕಸಿಗೆ ಸಜ್ಜಾಗಿದ್ದ ಮುರುಳಿ ಮೋಹನ್ ಅವರು ಈಗ ಬಹುಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗ ಪ್ರತಿಭಾನ್ವಿತ ಹಿರಿಯ ನಿರ್ದೇಶಕರೊಬ್ಬರನ್ನು ಕಳೆದುಕೊಂಡಿದೆ.