ಬಿಗ್‌ಬಾಸ್ ಸೀಸನ್-5ರಲ್ಲಿ ವಿನ್ ಆದಾಗಲೇ ಕನ್ನಡದ ರ‍್ಯಾಂಪರ್ ಚಂದನ್ ‌ಶೆಟ್ಟಿಗೆ ಅದೃಷ್ಟದ ಬಾಗಿಲು ತೆರೆಯಿತು. ಇದೀಗ ತಮ್ಮ ಅದೃಷ್ಟ ಹಾಗೂ ಪ್ರತಿಭೆಯಿಂದ ಚಂದನ್ ಮತ್ತಷ್ಟು ಬೆಳೆಯುತ್ತಿದ್ದು, ಲಕ್ಷ್ಮಿಯೇ ಇವರ ಬಳಿ ಓಡಿ ಬರುತ್ತಿದ್ದಾಳೆ! ಎಂಥವರನ್ನೂ ಎದ್ದು ಕುಣಿಯುವಂತೆ ಮಾಡಿದ '3 PEG' ಎಲ್ಲೆಡೆ ವೈರಲ್ ಆಗಿದ್ದು, ಆ ಹಾಡಿನ ಸಾಲಿಗೇ ಮತ್ತೈದು ಹಾಡುಗಳು ಸೇರುವ ನಿರೀಕ್ಷೆ ಇದೆ.

ಕೈಯಲ್ಲೊಂದು ಡಬ್ಬ ಹಿಡಿದು ಸ್ಯಾಂಡಲ್‌ವುಡ್‌ ಚಿತ್ರಗಳಿಗೆ ರ‍್ಯಾಂಪ್ ಮೂಸಿಕ್ ನೀಡಿ, ಸಂಚಲನ ಮೂಡಿಸುತ್ತಿರುವ ಚಂದನ್ ಶೆಟ್ಟಿಗೆ ಬಂಪರ್ ಆಫರ್‌ವೊಂದು ಇದೀಗ ಬಂದಿದ್ದು, ಕೋಟಿಗಟ್ಟಲೆ ಆಫರ್ ಸಿಕ್ಕಿದೆ!

ಫೇಮ್ಸ್ ಲಹರಿ ಆಡಿಯೋ ಸಂಸ್ಥೆ ಚಂದನ್ ಜೊತೆ ಒಪ್ಪಂದಕ್ಕೆ ಮುಂದಾಗಿದೆ. ಐದು ಹಾಡುಗಳಿರುವ ಒಂದು ಅಲ್ಬಂನನ್ನು 6 ತಿಂಗಳಲ್ಲಿ ನೀಡಬೇಕೆಂದು, ಕೋರಿದೆ. ಇದಕ್ಕೆ ಚಂದನ್ ಶೆಟ್ಟಿ ಜೈ ಎಂದಿದ್ದಾರೆ.

ಚಂದನ್ ಶೆಟ್ಟಿಗೆ ಸ್ಪೆಷಲ್ ಗಿಫ್ಟ್ ಕಳಿಸಿ ಮನಸಿನ ಮಾತು ಹೇಳಿದ ನಿವೇದಿತಾ

ಬರೊಬ್ಬರಿ 1 ಕೋಟಿ ರು. ತಮ್ಮದಾಗಿಸಿಕೊಳ್ಳಲ್ಲಿದ್ದಾರೆ ಕನ್ನಡದ ಪ್ರತಿಭೆ ಚಂದನ್. ಚಂದನ್ ಅವರ ಪ್ರತಿಯೊಂದೂ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡ್ ಸೃಷ್ಟಿಸುತ್ತದೆ. ಲಹರಿ ಆಡಿಯೋ ಸಂಸ್ಥೆಗೆ ಮೂಡಿ ಬರುವ ಹಾಡುಗಳು ಎಷ್ಟು ಹಿಟ್ ಆಗುತ್ತೋ ಕಾದು ನೋಡಬೇಕು.