ದಿ ವಿಲನ್’ಗೆ ಐಸ್’ಕ್ರೀಮ್ ಬ್ರಾಂಡ್!

Kannada Movie The Villain promotion by Ice Cream
Highlights

’ದಿ ವಿಲನ್’  ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಶಿವಣ್ಣ-ಸುದೀಪ್ ಕಾಂಬಿನೇಶನ್ ಭಾರೀ ಕುತೂಹಲ ಮೂಡಿಸಿದೆ. ನಿರ್ದೇಶಕ ಪ್ರೇಮ್ ಈ ಚಿತ್ರದ ಪ್ರಮೋಶನ್’ನನ್ನು ಸಕತ್ತಾಗಿ ಮಾಡ್ತಾ ಇದ್ದಾರೆ. ಈಗ ಹೊಸ ರೀತಿಯಲ್ಲಿ ಪ್ರಮೋಶನ್ ಮಾಡಲು ಮುಂದಾಗಿದ್ದಾರೆ. ಐಸ್ ಕ್ರೀಮ್ ಬ್ರಾಂಡ್ ಮೂಲಕ ದಿ ವಿಲನ್ ಪ್ರಚಾರಕ್ಕೆ ಮುಂದಾಗಿದ್ದಾರೆ. 

ಬೆಂಗಳೂರು (ಜು. 14): ಈಗಾಗಲೇ ಕನ್ನಡ ಸಿನಿಮಾಗಳಿಗೆ ವಿಶೇಷವಾದ ಪ್ರಚಾರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ದಿನಿ ಸಿನಿ ಕ್ರಿಯೇಷನ್ಸ್ ದಿ ವಿಲನ್ ಚಿತ್ರದ ಪ್ರಚಾರಕ್ಕಾಗಿ ಹೊಸ ರೀತಿಯ ಐಸ್ ಕ್ರೀಮ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ.

ಐಸ್‌ಕ್ರೀಮ್ ಮೂಲಕ ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅಭಿನಯದ ಈ ಚಿತ್ರವನ್ನು ಜನರ ಬಳಿಗೆ ವಿಶಿಷ್ಠ ರೀತಿಯಲ್ಲಿ ತೆಗೆದುಕೊಂಡು ಹೋಗುತ್ತಿದೆ.  ಐಸ್‌ಕ್ರೀಮ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಡೈರಿಡೇ ಐಸ್‌ಕ್ರೀಮ್ ಸಂಸ್ಥೆಯೂ ಇದಕ್ಕೆ ಕೈ ಜೋಡಿಸಿದೆ. ಹೀಗಾಗಿ ಡೈರಿಡೇ ಬ್ರಾಂಚ್‌ಗಳಲ್ಲಿ ದಿ ವಿಲನ್ ಹೆಸರಿನ ಐಸ್‌ಕ್ರೀಮ್ ದೊರೆಯಲಿದೆ. ಈ ಚಿತ್ರದ ಪ್ರಚಾರಕ್ಕಾಗಿಯೇ ‘ದಿ’ ಆಕಾರದಲ್ಲಿ ಐಸ್‌ಕ್ರೀಮ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ.

ಒಂದು ಆಹಾರ ತಯಾರಿಕಾ ಕಂಪೆನಿ ಚಿತ್ರವೊಂದರ ಪ್ರಚಾರಕ್ಕಾಗಿಯೇ ಪ್ರತ್ಯೇಕವಾಗಿ ಪ್ರಾಡಕ್ಟ್ ಬಿಡುಗಡೆ ಮಾಡುತ್ತಿರುವುದು ಭಾರತದಲ್ಲಿ ಇದೇ ಮೊದಲು.  ವಿಶೇಷ ಅಂದರೆ ‘ದಿ ವಿಲನ್ 2 ಇನ್ 1 ಚಾಕೋ ಆರೆಂಜ್ ಐಸ್‌ಕ್ರೀಮ್’ನ ಪ್ರತಿ ಪ್ಯಾಕಿನ ಮಾರಾಟದಿಂದ ಬರುವ ಹಣದಲ್ಲಿ ಒಂದು ರುಪಾಯಿಯನ್ನು ಕನ್ನಡಚಿತ್ರರಂಗದಲ್ಲಿ ದುಡಿದ ತಂತ್ರಜ್ಞರ ಕ್ಷೇಮಾಭಿವೃದ್ಧಿಗೆ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ‘ದಿ’ ಹೆಸರಿನ ಐಸ್‌ಕ್ರೀಮ್ ಸೋಷಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದ್ದು, ಅದರ ಜತೆಗೆ ಚಿತ್ರದ ಹೆಸರು ಕೂಡ ಜನಕ್ಕೆ ತಲುಪುತ್ತಿದೆ.  

loader