ಆತ್ಮಭೂಷಣ್ ಕನ್ನಡಪ್ರಭ

 ಮಂಗಳೂರು (ಆ.29) ಕೇರಳ ಗಡಿನಾಡು ಕಾಸರಗೋಡಿನ ಮಲಯಾಳಿ ನೆಲದಲ್ಲಿ ಕನ್ನಡ ಭಾಷೆಯನ್ನು ಮೇಲಿನ ದಬ್ಬಾಳಿಕೆಯನ್ನು ತೆರೆಯ ಮೇಲೆ ತಂದಿರುವ ರಿಷಬ್ ಶೆಟ್ಟಿ ನಿರ್ದೇಶನದ ‘ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಕನ್ನಡ ಚಿತ್ರಕ್ಕೆ ಕಾಸರಗೋಡಿನಲ್ಲಿ ಭರ್ಜರಿ ಬೆಂಬಲ ಸಿಕ್ಕಿದೆ.

ಅಲ್ಲಿನ 2 ಟಾಕೀಸ್ ಗಳಲ್ಲಿ ಕಳೆದ 3 ದಿನಗಳಿಂದ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಷ್ಟು ಮಾತ್ರವಲ್ಲ ಕಾಸರಗೋಡಿನ ಮೂವಿ ಮ್ಯಾಕ್ಸ್ ಚಿತ್ರಮಂದಿರದ 3 ಸ್ಕ್ರೀನ್ ಗಳಲ್ಲಿ ಪ್ರತಿದಿನ 3 ಶೋ ಹಾಗೂ ಇನ್ನೊಂದು ಟಾಕೀಸ್ ಮೊಹಬೂಬ್‌ನಲ್ಲೂ ದಿನದಲ್ಲಿ4 ಹೌಸ್‌ಫುಲ್ ಆಗಿ ಪ್ರದರ್ಶನವಾಗುತ್ತಿದೆ.

ಚಿತ್ರ ವಿಮರ್ಶೆ:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಹಲವು ದಶಕಗಳ ಬಳಿಕ ಗಡಿನಾಡಿನ ಕನ್ನಡಿಗರ ದಂಡೇ ಸಿನಿಮಾ ಮಂದಿರದತ್ತ ಹರಿದುಬರುತ್ತಿದೆ. ಈ ಹಿಂದೆ ವರನಟ ಡಾ. ರಾಜ್‌ಕುಮಾರ್ ಅಭಿನಯದ ಕನ್ನಡ ಚಿತ್ರಗಳು ಕಾಸರಗೋಡಿನಲ್ಲಿ ಸಕ್ಸಸ್ ಆಗಿದ್ದವು. ಬಳಿಕ ವಿಷ್ಣುವರ್ಧನ್ ಅಭಿನಯದ ಯಜಮಾನ, ರಮೇಶ್ ಅಭಿಯನದ ಅಮೃತವರ್ಷಿಣಿ ಸಿನಿಮಾ ಒಂದು ವಾರಗಳ ಪ್ರದರ್ಶನ ಕಂಡಿತ್ತು. ನಂತರ ಕನ್ನಡ ಸಿನಿಮಾಗಳು ಬಂದರೂ ಒಂದೆರಡು ದಿನ ಓಡಿದ್ದೇ ಹೆಚ್ಚು. ಅಂತಹದ್ದರಲ್ಲಿ ‘ಕಾಸರಗೋಡು’ ಹೆಸರಿನ ಸಿನಿಮಾ ಕಾಸರಗೋಡಿನಲ್ಲೇ ಬಾಕ್ಸಾಫೀಸ್ ಬಾಚುವ ಸಿದ್ಧತೆಯಲ್ಲಿದೆ.


ಸರ್ಕಾರಿ ಶಾಲೆ.... ರೆಸ್ಪಾನ್ಸ್ ನೋಡಿ ಅನಂತ್‌ನಾಗ್ ಫುಲ್ ಖುಷ್

ಪ್ರತಿ ಶೋ ಭರ್ತಿ: ಕಾಸರಗೋಡಿನ ಮೆಹಬೂಬ್ ಕಾರ್ನಿವಲ್ ಸಿನಿಮಾ ಟಾಕೀಸ್‌ನಲ್ಲಿ ಶುಕ್ರವಾರದಿಂದ ಪ್ರತಿದಿನ 4 ಶೋ ಇದೆ. ಬೆಳಗ್ಗೆೆ 10.30, ಮಧ್ಯಾಾಹ್ನ 1.30, ಸಂಜೆ 4.30 ಹಾಗೂ ರಾತ್ರಿಿ 7.30 ಕ್ಕೆೆ ಶೋ ಇಡಲಾಗಿದೆ. ಅದೇ ರೀತಿ ಮೂವಿ ಮ್ಯಾಕ್‌ ದಿನದಲ್ಲಿ 2 ಸ್ಕ್ರೀನ್‌ಗಳಲ್ಲಿ 3 ಶೋ, ಮಧ್ಯಾಾಹ್ನ 12.45 ಸಂಜೆ 3.30 ಹಾಗೂ 6.30 ಕ್ಕೆೆ ಶೋ ಇದೆ. ಈ ಎಲ್ಲ ಶೋಗಳಲ್ಲೂ ಪ್ರೇಕ್ಷಕರು ತುಂಬಿ ತುಳುಕುತ್ತಿದ್ದಾಾರೆ. ಆನ್‌ಲೈನ್ ಟಿಕೆಟ್‌ಗೂ ಪ್ರೇಕ್ಷಕರು ಮುಗಿಬೀಳುತ್ತಿಿದ್ದಾಾರೆ ಎನ್ನುತ್ತಾರೆ ಕನ್ನಡ ಹೋರಾಟಗಾರ ಡಾ.ನರೇಶ್ ಮುಳ್ಳೇರಿಯಾ.

ಒಂದೇ ಕನ್ನಡ ಸಿನಿಮಾ 2 ಟಾಕೀಸ್‌ಗಳಲ್ಲಿ ತೆರೆ ಕಾಣುತ್ತಿರುವುದು ಇದೇ ಮೊದಲು. ಅದು ಕೂಡ ಕರ್ನಾಟಕ ಮಾತ್ರವಲ್ಲ ಕೇರಳ ಗಡಿಭಾಗದಲ್ಲೂ ಏಕಕಾಲದಲ್ಲಿ ಬಿಡುಗಡೆಯಾಗಿರುವುದು ಮಹತ್ವದ ಸಂಗತಿ. ಕಾಸರಗೋಡಿನ ಕನ್ನಡ, ಕನ್ನಡಿಗರ ಸಮಸ್ಯೆೆಯ ಬಗ್ಗೆ ಗಡಿನಾಡು ನೆಲದಲ್ಲೇ ಸಿನಿಮಾ ಮೂಲಕ ಪ್ರತಿಧ್ವನಿಸುತ್ತಿರುವುದು ಇನ್ನೊೊಂದು ಸೋಜಿಗದ ಸಂಗತಿ ಎನ್ನುತ್ತಾಾರೆ ಉಪನ್ಯಾಾಸಕ ಡಾ.ರತ್ನಾಾಕರ ಮಲ್ಲಮೂಲೆ.

ಕಾಸರಗೋಡಿನಲ್ಲೇ ಸ್ಕೆಚ್: ಕಾಸರಗೋಡು ಸಿನಿಮಾದ ಕತೆ ಸಿದ್ಧಗೊಂಡದ್ದು 2 ವರ್ಷ ಹಿಂದೆ ಕಾಸರಗೋಡಿನಲ್ಲೇ ಎಂಬುದು ಹೆಚ್ಚಿಿನವರಿಗೆ ಗೊತ್ತಿಿಲ್ಲ. ಕಾಸರಗೋಡಿನ ಉಪನ್ಯಾಾಸಕರೊಬ್ಬರ ಮನೆಗೆ ಆಗಮಿಸಿದ ನಿರ್ದೇಶಕ ರಿಷಬ್ ಶೆಟ್ಟಿ ಅವರು ಕಾಸರಗೋಡಿನಲ್ಲಿ ಕನ್ನಡಿಗರು ಅನುಭವಿಸುತ್ತಿರುವ ಮಲಯಾಳಿ ದೌರ್ಜನ್ಯದ ಬಗ್ಗೆ ತಿಳಿದುಕೊಂಡಿದ್ದರು. ಸುಮಾರು ಮೂರು ದಿನ ಈ ಬಗ್ಗೆೆ ವಿಸ್ತೃತವಾದ ಮಾಹಿತಿಯನ್ನು ಕಲೆಹಾಕಿದ್ದರು. ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದರು. ನಂತರ ಗಡಿನಾಡಿನಲ್ಲಿ ಕನ್ನಡ ಉಳಿಸುವ ಬಗ್ಗೆೆ ಹಾಗೂ ಮಕ್ಕಳನ್ನು ಒಳಗೊಂಡಂತೆ ಪಕ್ಕಾ ಕಮರ್ಶಿಯಲ್ ಆಗುವಂತೆ ಈ ಸಿನಿಮಾವನ್ನು ರೂಪಿಸಿದರು ಎನ್ನುತ್ತಾಾರೆ ರಂಗಕರ್ಮಿ ಉಮೇಶ್ ಸಾಲಿಯಾನ್.