ಮಂಗಳೂರಿನ ಭಾರತ್‌ ಸಿನಿಮಾಸ್‌ನಲ್ಲಿ ತಮ್ಮ ನಿರ್ದೇಶನದ ಪಂಚತಂತ್ರ ಚಲನಚಿತ್ರದ ಟ್ರೇಲರ್‌ ಬಿಡುಗಡೆ ಸಂದರ್ಭ ಅವರು ಮಾತನಾಡಿದರು. ತುಳುವಿನಲ್ಲಿ ಒಂದು ಚಿತ್ರ ಮಾಡಬೇಕು ಎಂದು ಪ್ರಯತ್ನಪಟ್ಟಿದ್ದೆ. ಆದರೆ ಅದು ಸಾಧ್ಯವಾಗಿರಲಿಲ್ಲ. ಮುಂದೆ ಕನ್ನಡ- ತುಳು ಸಿನಿಮಾವೊಂದನ್ನು ಮಾಡುವ ಉದ್ದೇಶವಿದೆ ಎಂದು ಇದೇ ಸಂದರ್ಭ ಅವರು ಹೇಳಿದರು.

ಮಾಚ್‌ರ್‍ನಲ್ಲಿ ಪಂಚತಂತ್ರ ಬಿಡುಗಡೆ: ಮಧ್ಯಮ ವರ್ಗದ ತಮಾಷೆ, ಯುವಕರ ಪ್ರೇಮ, ಜತೆಗೆ ಎರಡು ಗುಂಪುಗಳ ನಡುವಿನ ಭೂ ವಿವಾದವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರದ ಮೂರು ಹಾಡುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮಾಚ್‌ರ್‍ ಅಂತ್ಯದ ವೇಳೆಗೆ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ. ಆಟೋ ಚಾಲಕರಾದ ಕಾಂತಪ್ಪ ಹಾಗೂ ಮಾಸ್ತಿ ಮಂಜು ಎಂಬವರು ಹೇಳಿದ ಕಥೆಯ ಎಳೆಯೊಂದನ್ನು ಆಧರಿಸಿ ಚಿತ್ರಕತೆ ಸಿದ್ಧಪಡಿಸಲಾಗಿದೆ ಎಂದರು.

ಪಂಚತಂತ್ರದ ಆಮೆ ಮತ್ತು ಮೊಲದ ಕಥೆ ಚಿತ್ರಕ್ಕೆ ಮೂಲ ಪ್ರೇರಣೆ. ಸ್ಪೋಟ್ಸ್‌ರ್‍ ಆ್ಯಕ್ಷನ್‌ ಚಿತ್ರವಾಗಿದ್ದು, ಭಾರತೀಯ ಚಿತ್ರರಂಗದಲ್ಲಿ ಮೊದಲ ಬಾರಿಗೆ ಕಾರ್‌ ರೇಸ್‌ ಕುರಿತ ಸಿನಿಮಾ ಮಾಡಲಾಗಿದೆ ಎಂದು ಭಟ್‌ ತಿಳಿಸಿದರು.

ಪಂಚತಂತ್ರದ ‘ಹೊಂಗೆ ಮರ’ ಸಾಂಗ್ ಮುಟ್ಟಿತು ಲಕ್ಷಗಳ ಹಿಟ್ಸ್!

ನಾಯಕಿ ಸೋನಲ… ಮೊಂತೇರೊ ಮಾತನಾಡಿದರು. ನಟರಾದ ಸಾಗರ್‌, ನಂದಕುಮಾರ್‌, ನಿರ್ಮಾಪಕರಾದ ಹರಿಪ್ರಸಾದ್‌ ಜಯಣ್ಣ, ಹೇಮಂತ್‌ ಪರಾಡ್ಕರ್‌, ಪ್ರೊಡಕ್ಷನ್‌ ಮ್ಯಾನೇಜರ್‌ ಹೇಮಂತ್‌ ಇದ್ದರು.