ಹೊಸ ರೂಪದಲ್ಲಿ ಬರುತ್ತಿದೆ ’ನಾಗರ ಹಾವು’ ಸಿನಿಮಾ

Kannada Hit movie Nagarahavu is making come back
Highlights

ವಿಷ್ಣು ವರ್ಧನ್ ಅಭಿನಯದ ನಾಗರಹಾವು ಚಿತ್ರ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅದರಲ್ಲಿ ವಿಷ್ಣುವರ್ಧನ್ ನಟನೆಯಂತೂ ಅದ್ಭುತ. ಸ್ಯಾಂಡಲ್’ವುಡ್’ನಲ್ಲಿ ಸಖತ್ ಸದ್ದು ಮಾಡಿತ್ತು ಈ ಚಿತ್ರ. ಈಗ ಇದೇ ಚಿತ್ರ ಮತ್ತೊಮ್ಮೆ  ತೆರೆಗೆ ಬರಲು ಸಿದ್ದವಾಗಿದೆ. ಯಾರು ಮಾಡ್ತಾ ಇದಾರೆ? ಹೇಗಿದೆ ಹೊಸ ನಾಗರಹಾವು? ಇಲ್ಲಿದೆ ಸಂಪೂರ್ಣ ಮಾಹಿತಿ. 

ಬೆಂಗಳೂರು (ಜು. 13): ಕನ್ನಡದ ಹಳೇ ಚಿತ್ರಗಳು ಹೊಸ ಬಣ್ಣ, ಹೊಸ ರೂಪ ಪಡೆದಿದ್ದು ಇದೇ ಮೊದಲಲ್ಲ. ಡಾ. ರಾಜ್ ಕುಮಾರ್ ಅಭಿನಯದ ‘ಕಸ್ತೂರಿ ನಿವಾಸ’, ‘ಬಬ್ರುವಾಹನ’ ಹೊಸ ರೂಪದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಬಂದಿವೆ.

ಈಗ ಈಶ್ವರಿ ಪ್ರೊಡಕ್ಷನ್ ಇದೇ ಮೊದಲು ‘ನಾಗರಹಾವು ’ಚಿತ್ರವನ್ನು ಹೊಸ ರೂಪದಲ್ಲಿ ತರುತ್ತಿದೆ. ರವಿಚಂದ್ರನ್ ಮಾರ್ಗದರ್ಶನದಲ್ಲಿ ನಟ ಬಾಲಾಜಿ ಇದರ ಜವಾಬ್ದಾರಿ ತೆಗೆದುಕೊಂಡು ಹೊಸ ರೂಪದಲ್ಲಿ ತರುತ್ತಿದ್ದಾರೆ. ಚೆನ್ನೈ ಸೇರಿದಂತೆ ವಿವಿಧೆಡೆ ಎರಡು ವರ್ಷಗಳ ಕಾಲ ಈ ಚಿತ್ರಕ್ಕೆ ಕಲರ್ ಹಾಗೂ ಮ್ಯೂಸಿಕ್ ಸಂಯೋಜಿಸುವ ಕೆಲಸ ನಡೆದಿದೆ. ಸಂಗೀತ ನಿರ್ದೇಶಕ ಗೌತಮ್ ನೇತೃತ್ವದಲ್ಲಿ ಸಂಗೀತ ಸಂಯೋಜನೆ ನಡೆದಿದೆ. ಕರಿಸುಬ್ಬು ಸ್ಟುಡಿಯೋದಲ್ಲೂ ಅದರ ಪ್ರೊಡಕ್ಷನ್ ಕೆಲಸ ನಡೆದಿದೆ. 

loader