ನಿರ್ದೇಶಕ ಜೋಗಿ ಪ್ರೇಮ್‌ ಅವರ ‘ಏಕ್‌ಲವ್‌ಯಾ’ ಚಿತ್ರಕ್ಕೆ ಕೆಲವು ವಾರಗಳಿಂದ ಸತತವಾಗಿ ಚಿತ್ರೀಕರಣ ನಡೆಯುತ್ತಿದೆ. ರಕ್ಷಿತಾ ಸೋದರ ರಾಣಾ ನಾಯಕನಾಗಿ ಲಾಂಚ್‌ ಆಗುತ್ತಿರುವ ಈ ಚಿತ್ರಕ್ಕೆ ಇತ್ತೀಚೆಗಷ್ಟೆರೋಚಕವಾದ ಸಾಹಸ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ಸದ್ಯಕ್ಕೆ ಸಾಹಸ ದೃಶ್ಯಗಳು ಚಿತ್ರೀಕರಣ ಮಾಡುತ್ತಿದ್ದು, ನಟ ರಾಣಾ ಯಾವುದೇ ರೀತಿಯ ಡ್ಯೂಪ್‌ಗಳನ್ನು ಬಳಸದೆ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಖ್ಯಾತ ಸಾಹಸ ನಿರ್ದೇಶಕ ಕಾಲಿವುಡ್‌ನ ಸ್ಟಂಟ್‌ ಸಿಲ್ವ, ಮೊದಲ ಬಾರಿಗೆ ಕನ್ನಡಕ್ಕೆ ಬಂದಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ 'ಏಕ್ ಲವ್ ಯಾ' ಎಂದ ಖ್ಯಾತ ನಟಿಯ ತಮ್ಮ!

‘ಏಕಲವ್ಯ’ನಿಗೆ ವಿಶೇಷವಾದ ಸ್ಟಂಟ್‌ಗಳನ್ನು ಕಂಪೋಸ್‌ ಮಾಡುತ್ತಿದ್ದಾರಂತೆ. ಸ್ಟಂಟ್‌ ಸಿಲ್ವನ ಪ್ರತಿಭೆಗೆ ಫಿದಾ ಆಗಿರೋ ನಿರ್ದೇಶಕ ಪ್ರೇಮ್‌, ಟ್ವೀಟರ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮಿಳಿನ ಅಜಿತ್‌, ಧನುಷ್‌, ವಿಜಯ… ಸೇರಿದಂತೆ ಹಲವು ದೊಡ್ಡ ಸ್ಟಾರ್‌ ಹೀರೋಗಳಿಗೆ ಸಾಹಸ ಸಂಯೋಜನೆ ಮಾಡಿದವರು ಸಿಲ್ವ. ಈಗ ಕನ್ನಡದಲ್ಲಿ ಹೊಸ ನಟ ರಾಣಾಗೆ ಸಾಹಸ ಮಾಡುತ್ತಿದ್ದಾರೆ. ಇವರ ಸಾಹಸಗಳು ಚಿತ್ರದ ಹೈಲೈಟ್‌ ಆಗಲಿವೆ ಎಂಬುದು ನಿರ್ದೇಶಕ ಪ್ರೇಮ್‌ ಅವರ ಮಾತು. ಚಿತ್ರಕ್ಕೆ ಶೂಟಿಂಗ್‌ ಶುರುವಾಗಿದ್ದರೂ ಇನ್ನೂ ನಾಯಕಿ ಆಯ್ಕೆ ಆಗಿಲ್ಲ. ಹೀಗಾಗಿ ಶೂಟಿಂಗ್‌ ನಡುವೆಯೇ ನಿರ್ದೇಶಕ ಪ್ರೇಮ್‌ ನಾಯಕಿ ಹುಡುಕಾಟ ನಡೆಸುತ್ತಿದ್ದಾರೆ.