ಜೋಗಿ ಪ್ರೇಮ್ ನಿರ್ದೇಶನದಲ್ಲಿ ಹಾಗೂ ನಟಿ ರಕ್ಷಿತಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಏಕ್ ಲವ್ ಯಾ' ಈ ಚಿತ್ರಕ್ಕೆ ರಕ್ಷಿತಾ ಸಹೋದರ ಅಭಿಷೇಕ್ ನಾಯಕ.

ಅಕ್ಕ-ಭಾವನ ಸಿನಿಮಾ ಬ್ಯಾನರ್‌ನಲ್ಲಿ ಲಾಂಚ್ ಆಗುತ್ತಿರುವ ‘ಅಭಿರಾಣಾ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾಸ್ ಆಂಡ್ ಲವ್ ಸೆಂಟಿಮೆಂಟ್ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಪ್ರೇಮ್ ಭಾಮೈದುನ ಸಿನಿಮಾಗೆ ವಿಭಿನ್ನ ಕಥೆ ತಯಾರಿ ಮಾಡಿಕೊಂಡಿದ್ದಾರೆ.

ಭಾಮೈದನ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರ ಪ್ರೇಮ್?

ಚಿತ್ರದ ಮುಹೂರ್ತದಲ್ಲಿ ಮೊದಲ ಕ್ಲಾಪ್ ಮಾಡಿದ್ದು ನಟಿ ರಕ್ಷಿತಾ ಅಷ್ಟೇ ಅಲ್ಲದೆ ರಾಣಾ ಪಾತ್ರವನ್ನು ಜನರಿಗೆ ವಿಡಿಯೋ ಮೂಲಕ ಪರಿಚಯಿಸಿದ್ದಾರೆ. ರಕ್ಷಿತಾ, ಪ್ರೇಮ್ ಹಾಗೂ ರಾಣಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಚಿತ್ರೀಕರಣ ಇಂದಿನಿಂದ ಆರಂಭವಾಗಿದೆ.