Asianet Suvarna News Asianet Suvarna News

ಈ ತಿಂಗಳು ಭರಾಟೆ ಬಿಡುಗಡೆ ಇಲ್ಲ!

ಶ್ರೀಮುರಳಿ ಅಭಿಮಾನಿಗಳ ‘ಭರಾಟೆ’ ಸಂಭ್ರಮಕ್ಕೆ ಮತ್ತೊಂದು ತಿಂಗಳು ಕಾಯಬೇಕಿದೆ. ಸೆಪ್ಟೆಂಬರ್ ೨೭ಕ್ಕೆ ತೆರೆಗೆ ಬರಬೇಕಿದ್ದ ‘ಭರಾಟೆ’ ಬಿಡುಗಡೆ ದಿನಾಂಕವನ್ನು ಅಕ್ಟೋಬರ್ ತಿಂಗಳಿಗೆ ತೆಗೆದುಕೊಂಡು ಹೋಗಿದ್ದಾರೆ. ಇದ್ದಕ್ಕಿದ್ದಂತೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ನಿರ್ದೇಶಕ ಚೇತನ್ ಕುಮಾರ್ ಹೇಳುವ ಮಾಹಿತಿ ಇದು. 

Kannada film Bharaate release date postponed to October
Author
Bangalore, First Published Sep 4, 2019, 9:28 AM IST

1. ಅಕ್ಟೋಬರ್‌ನಲ್ಲಿ ನಟ ಚಿರಂಜೀವಿ ಅಭಿನಯದ ‘ಸೈರಾ’ ಹಾಗೂ ಬಾಲಿವುಡ್‌ನ ‘ವಾರ್’ ಚಿತ್ರಗಳು ತೆರೆಗೆ ಬರುತ್ತಿವೆ.. ಈ ಮೊದಲೇ ಅಂದುಕೊಂಡಂತೆ ಸೆ.27ರಂದು ‘ಭರಾಟೆ’ ಬಂದಿದ್ದರೆ, ಕೇವಲ ನಮಗೆ ಒಂದೇ ವಾರ ಗ್ಯಾಪ್. ಯಾಕೆಂದರೆ ಅಕ್ಟೋಬರ್ 2ರಂದೇ ಸೈರಾ ಹಾಗೂ ವಾರ್ ತೆರೆಗೆ ಬರುತ್ತಿವೆ. ಥಿಯೇಟರ್ ಸಮಸ್ಯೆ ಶುರುವಾಗುತ್ತದೆ.

2. ಪರಭಾಷೆ ಚಿತ್ರಗಳು ಒಂದು ಒಪ್ಪಂದದ ಮೇರೆಗೆ ಚಿತ್ರಗಳನ್ನು ಬಿಡುಗಡೆ ಮಾಡುತ್ತಾರೆ. ಇಂತಿಷ್ಟು ವಾರ, ತಿಂಗಳು ತಮಗೆ ಥಿಯೇಟರ್‌ಗಳು ಬೇಕು ಎನ್ನುವ ಕರಾರು ಮಾಡಿಕೊಳ್ಳುತ್ತಾರೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಕನಿಷ್ಠ ಎರಡ್ಮೂರು ವಾರ ಈ ಸಿನಿಮಾಗಳದ್ದೇ ಸದ್ದು. ಆದರೆ, ಕನ್ನಡ ಚಿತ್ರಗಳ ಥಿಯೇಟರ್‌ಗಳ ಸೆಟಪ್ ಬೇರೆ ರೀತಿಯಲ್ಲಿರುತ್ತವೆ. ಹೀಗಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದೇವೆ.

ಈಗ ನಿರ್ದೇಶಕರು ಸೇಲ್ಸ್‌ಮ್ಯಾನ್‌ಗಳೂ ಆಗಿರಬೇಕು: ಚೇತನ್‌ ಕುಮಾರ್‌

3. ಅಕ್ಟೋಬರ್ 11 ಅಥವಾ 18ಕ್ಕೆ ತೆರೆಗೆ ಬರುತ್ತೇವೆ. ಅಷ್ಟರಲ್ಲಿ ಸೈರಾ, ವಾರ್, ಪೈಲ್ವಾನ್, ಗೀತಾ ಸಿನಿಮಾಗಳು ಬಂದು ಹೋಗಿರುತ್ತವೆ. ವಿತರಣೆಗೂ ಯಾವ ಸಮಸ್ಯೆಯೂ ಇರಲ್ಲ. ನಮ್ಮ ನಿರ್ಮಾಪಕ ಸುಪ್ರಿತ್ ಅವರೇ ವಿತರಕರಾಗಿರುವುದರಿಂದ ಬೇರೆ ವಿತರಕರ ಜತೆ ಸ್ಪರ್ಧೆಗಿಳಿಯುವುದು ಬೇಡ ಅಂತಲೇ ಈ ನಿರ್ಧಾರ ತೆಗೆದುಕೊಂಡಿದ್ದೇವೆ.

4. ರಾಜಸ್ಥಾನದಲ್ಲಿ ಮುಹೂರ್ತ ಮಾಡಿಕೊಂಡು ಅಲ್ಲೇ ಫೋಟೋಶೂಟ್ ಹಾಗೂ ಟೀಸರ್ ಶೂಟ್ ಮಾಡಿಕೊಂಡ ಮೊದಲ ಕನ್ನಡ ಚಿತ್ರ. ಮರುಳುಗಾಡಿನ ನಾಡಿನಲ್ಲಿ 20 ದಿನ ಚಿತ್ರೀಕರಣ ಮಾಡಿದ್ದೇವೆ. ಉಳಿದಂತೆ ಬೆಂಗಳೂರು, ಉತ್ತರ  ಕರ್ನಾಟಕ ಭಾಗಗಳಲ್ಲಿ ಒಟ್ಟು 92 ದಿನ ಶೂಟಿಂಗ್ ಮಾಡಿದ್ದೇವೆ.

‘ರಥಾವರ’ನಿಗೆ ಜೋಡಿ ಆದ ಡಿಂಪಲ್ ಕ್ವೀನ್ ?

5. ನಾನು, ಅರ್ಜುನ್ ಜನ್ಯಾ, ವಿಜಯ್ ಪ್ರಕಾಶ್ ಕಾಂಬಿನೇಷನ್‌ನಲ್ಲಿ ಈಗಾಗಲೇ ‘ಅಯೋಗ್ಯ’ ಚಿತ್ರದಲ್ಲಿ ‘ಏನಮ್ಮಿ ಏನಮ್ಮಿ’ ಹಾಗೂ ‘ಸಿಂಗ’ ಚಿತ್ರದ ‘ಶ್ಯಾನೆ ಟಾಪಾಗವ್ಳೆ’ ಹಾಡುಗಳು ಬಂದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿವೆ. ಈ ಕಾರಣಕ್ಕೆ ‘ಯೋ ಯೋ’ ಹಾಡು ಕೂಡ ಸೂಪರ್ ಹಿಟ್ ಆಗುತ್ತದೆಂಬ ನಂಬಿಕೆ ಇದೆ.

6. ಟಿಕ್‌ಟಾಕ್ ಪ್ರಿಯರನ್ನೇ ಗಮನದಲ್ಲಿಟ್ಟುಕೊಂಡು ಮಾಡಿರುವ ಹಾಡು ‘ಯೋ ಯೋ’. ಯಾಕೆಂದರೆ ಈ ಹಿಂದೆ ನಾನು ಬರೆದ ಹಲವು ಹಾಡುಗಳು ಟಿಕ್‌ಟಾಕ್ನಲ್ಲಿ ದೊಡ್ಡ ಹಿಟ್ ಆಗಿವೆ. ಹೀಗಾಗಿ ಇದು ಕೂಡ ಸಿನಿಮಾ ಬಿಡುಗಡೆಗೂ ಮುನ್ನವೇ ಡಿಜಿಟಲ್ ಮಾಧ್ಯಮದಲ್ಲಿ ಸದ್ದು ಮಾಡಲಿ ಎನ್ನುವ ಗುರಿಯೊಂದಿಗೆ ಈ ಹಾಡು ಬರೆದಿದ್ದೇ.

ಅಬ್ಬಾ...! ರೋರಿಂಗ್ ಸ್ಟಾರ್ ಶೇಷಾದ್ರಿಪುರಂ ಕಾಲೇಜ್ ಲವ್ ಸ್ಟೋರಿ ಕೇಳಿದ್ದೀರಾ ?

Follow Us:
Download App:
  • android
  • ios