ಲಂಡನ್‌ನಲ್ಲಿ Hollywood ಸ್ಟಂಟ್ ಡೈರೆಕ್ಟರ್ ಜೊತೆ ರಾಕಿಭಾಯ್: Yash 19 ಸಿನಿಮಾಗೆ ಭರ್ಜರಿ ತಯಾರಿ!
ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ಸಿನಿಮಾದ ನಟ ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ಯಶ್ ಅವರ ಹೊಸ ಸಿನಿಮಾ ಶುರುವಾಗುವ ಮುಂಚೆ ಹಾಲಿವುಡ್‌ನ ಹಲವಾರು ನಿರ್ದೇಶಕರನ್ನು ಮತ್ತು ತಂತ್ರಜ್ಞರನ್ನು ಭೇಟಿ ಮಾಡುತ್ತಿದ್ದಾರೆ

ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ಸಿನಿಮಾದ ನಟ ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ಯಶ್ ಅವರ ಹೊಸ ಸಿನಿಮಾ ಶುರುವಾಗುವ ಮುಂಚೆ ಹಾಲಿವುಡ್‌ನ ಹಲವಾರು ನಿರ್ದೇಶಕರನ್ನು ಮತ್ತು ತಂತ್ರಜ್ಞರನ್ನು ಭೇಟಿ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಲಂಡನ್‌ನಲ್ಲಿ ಹಾಲಿವುಡ್ ನ ಖ್ಯಾತ ಸ್ಟಂಟ್ ಡೈರೆಕ್ಟರ್ ಜೆ.ಜೆ.ಪೆರ್ರಿ ಭೇಟಿ ಮಾಡಿದ್ದರು. ಆ ಫೋಟೋ ಮತ್ತು ಯಶ್ ಲುಕ್ ಇದೀಗ ವೈರಲ್ ಆಗಿದೆ. 'ಕೆಜಿಎಫ್ 2' ಚಿತ್ರದ ಸಕ್ಸಸ್ ನಂತರ ಯಶ್ ಮುಂದಿನ ಚಿತ್ರಕ್ಕಾಗಿ ಭರ್ಜರಿ ತಯಾರಿ ಮಾಡ್ತಿದ್ದಾರೆ. ಅದಕ್ಕಾಗಿ ಅಮೆರಿಕಾದಲ್ಲಿ ಸದ್ಯ ಯಶ್ ನೆಲೆಸಿದ್ದಾರೆ.
ಹಾಲಿವುಡ್ ನಿರ್ದೇಶಕ ಜೆಜೆ ಪೆರ್ರಿ ಜೊತೆ ಕಾಣಿಸಿಕೊಂಡಿದ್ದ ಯಶ್, ನಂತರ ಕಾರ್ ರೇಸರ್ ಲೇವಿಸ್ ಹ್ಯಾಮಿಲ್ಟನ್ ಅವರನ್ನ ಭೇಟಿ ಮಾಡಿದ್ದರು. ನ್ಯಾಷನಲ್ ಸ್ಟಾರ್ ಆಗಿ ದಶದಿಕ್ಕುಗಳಲ್ಲೂ ಯಶ್ ಮಿಂಚ್ತಿದ್ದಾರೆ. 'ಕೆಜಿಎಫ್ 2' ಸೂಪರ್ ಸಕ್ಸಸ್ ನಂತರ ಯಶ್ ಮುಂದಿನ ನಡೆ ಮೇಲೆ ಎಲ್ಲರಿಗೂ ಕಣ್ಣಿದೆ. ಯಶ್ ಮುಂದಿನ ಪ್ರಾಜೆಕ್ಟ್ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ಇತ್ತೀಚೆಗೆ ಹಾಲಿವುಡ್ ನಿರ್ದೇಶಕರನ್ನ ಭೇಟಿ ಮಾಡಿದ್ದ ಯಶ್ ಈಗ ಫಾರ್ಮುಲಾ ಕಾರು ರೇಸರ್ ಲೇವಿಸ್ ಹ್ಯಾಮಿಲ್ಟನ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಇದೀಗ ಸಖತ್ ವೈರಲ್ ಆಗುತ್ತಿದೆ.
'ಯಶ್-19' ಸಮರ ತಯಾರಿ ಫೈನಲ್: ಗೋವಾ ಡ್ರಗ್ಸ್ ಮಾಫಿಯಾ ಕಥೆಯಲ್ಲಿ ರಾಕಿಭಾಯ್
ಹ್ಯಾಮಿಲ್ಟನ್ ಅವರನ್ನ ಯಶ್ ಅಮೆರಿಕದ ಲಾಸ್ ಏಂಜಲ್ಸ್‌ನಲ್ಲಿ ಭೇಟಿ ಮಾಡಿದ್ದಾರೆ. ಜಗತ್ತಿನ ಅತ್ತುತ್ತಮ ಕಾರ್ ರೇಸರ್‌ನಲ್ಲಿ ಹ್ಯಾಮಿಲ್ಟನ್ ಕೂಡ ಒಬ್ಬರು. ಹಾಗಾಗಿ ಇವರಿಬ್ಬರ ಭೇಟಿ ಇದೀಗ ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ. ಯಶ್ ಮುಂದಿನ ಚಿತ್ರದಲ್ಲಿ ಕಾರ್ ರೇಸರ್ ಆಗಿ ಕಾಣಿಸಿಕೊಳ್ಳಲಿದ್ದಾರಾ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಹಾಲಿವುಡ್ ನಿರ್ದೇಶಕ ಜೆಜೆ ಪೆರ್ರಿ ಡೈರೆಕ್ಷನ್‌ನಲ್ಲಿ ಯಶ್ ಕಾರ್ ರೇಸರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅದಕ್ಕಾಗಿ ಯಶ್ ಕಾರ್ ರೇಸಿಂಗ್ ತರಬೇತಿ ಪಡೆಯುತ್ತಿದ್ದಾರಾ ಎಂಬುದು ಯಶ್ ಅಭಿಮಾನಿಗಳ ಅಚ್ಚರಿ. ಎಲ್ಲದಕ್ಕೂ ಉತ್ತರ ರಾಕಿಭಾಯ್ ಕಡೆಯಿಂದಲೇ ಅಧಿಕೃತ ಅಪ್‌ಡೇಟ್ ಬರುವವರೆಗೂ ಕಾದುನೋಡಬೇಕಿದೆ.
ಅಕ್ಟೋಬರ್‌ನಲ್ಲಿ ಹೊಸ ಚಿತ್ರ ಘೋಷಣೆ?: ಮಾಹಿತಿಗಳ ಪ್ರಕಾರ ಯಶ್ ತಮ್ಮ 19ನೇ ಚಿತ್ರವನ್ನು ಮುಂದಿನ ಅಕ್ಟೋಬರ್‌ನಲ್ಲಿ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಖ್ಯಾತ ಸಿನಿಮಾ ವಿಮರ್ಶಕ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ. ಸುಂಟರಗಾಳಿಯ ಗ್ರಾಫಿಕ್ ಚಿತ್ರದೊಂದಿಗೆ ರಾಕಿಂಗ್ ಸ್ಟಾರ್ ಯಶ್, ಬಿಗ್ ಅನೌನ್ಸ್‌ಮೆಂಟ್ ಇನ್ ಅಕ್ಟೋಬರ್ ಎನ್ನುವ ಪೋಸ್ಟರ್‌ಅನ್ನು ಅವರು ಹಂಚಿಕೊಂಡಿದ್ದಾರೆ. ಇದರೊಂದಿಗೆ ಬಹುನಿರೀಕ್ಷಿತ ಯಶ್ 19 ಸಿನಿಮಾದ ಅನೌನ್ಸ್‌ಮೆಂಟ್ ಸುದ್ದಿ ಅಕ್ಟೋಬರ್‌ನಲ್ಲಿ ಬಿತ್ತರವಾಗುವ ಸಾಧ್ಯತೆ ಇದೆ ಎಂದು ಅವರು ಬರೆದುಕೊಂಡಿದ್ದಾರೆ.
ಒಂದೇ ತರ ಇದೆ ಶಾರುಖ್-ಯಶ್ ಲೈಫ್ ಜರ್ನಿ: ಇವರಿಬ್ಬರಿಗೆ ಲೈಫ್ ಕೊಟ್ಟಿದ್ದೇ ಸ್ಮಾಲ್ ಸ್ಕ್ರೀನ್!
ಮೂಲಗಳ ವರದಿಯ ಪ್ರಕಾರ, ರಾಕಿಂಗ್ ಸ್ಟಾರ್ ಯಶ್ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದ್ದು, ಇದೇ ಯಶ್ 19 ಸಿನಿಮಾ ಅಗಿ ಘೋಷಣೆಯಾಗುವ ಸಾಧ್ಯತೆ ಇದೆ. ದೊಡ್ಡ ಚಿತ್ರವೊಂದರಲ್ಲಿ ಇವರಿಬ್ಬರೂ ಜೊತೆಯಾಗಲಿದ್ದಾರೆ ಎಂದು ಸಿನಿಮಾ ರಂಗದ ಮೂಲಗಳು ತಿಳಿಸಿವೆ. ಕೆಜಿಎಫ್2 ಬಳಿಕ ಯಶ್ ಯಾವ ರೀತಿಯ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಯೋಚನೆಗಳಿಗೆ ಉತ್ತರ ಎನ್ನುವಂತೆ ಈ ಸಿನಿಮಾ ಇರಲಿದೆ ಎನ್ಉವ ಮಾಹಿತಿಗಳಿವೆ. ಯೋಜನೆಗೆ ಹತ್ತಿರವಿರುವ ಮೂಲಗಳ ಪ್ರಕಾರ, ಯಶ್ ಅಂತಿಮವಾಗಿ ಗೀತು ಮೋಹನ್‌ದಾಸ್ ಅವರೊಂದಿಗೆ ಕೆಲಸ ಮಾಡಲು ಬದ್ಧರಾಗಿದ್ದಾರೆ ಮತ್ತು ಚಿತ್ರವು ಈ ವರ್ಷದ ಕೊನೆಯಲ್ಲಿ, ಡಿಸೆಂಬರ್‌ನಲ್ಲಿ ಶೂಟಿಂಗ್‌ಗೆ ಹೋಗಲಿದೆ.