ಆರ್ಥಿಕ ಸಂಕಷ್ಟದಲ್ಲಿದ್ದಾರೆ ನಟಿ ವಿಜಯಲಕ್ಷ್ಮೀ | ವಿಜಯಲಕ್ಷ್ಮೀಗೆ ಹಣಕಾಸಿನ ನೆರವು ನೀಡಿದ ಕಿಚ್ಚ ಸುದೀಪ್ | ಮದಗಜ ಚಿತ್ರತಂಡವೂ ವಿಜಯಲಕ್ಷ್ಮಿಗೆ ನೆರವು ನೀಡಿದೆ
ಬೆಂಗಳೂರು (ಫೆ. 26): ನಾಗಮಂಡಲ, ಸೂರ್ಯವಂಶ ಖ್ಯಾತಿಯ ವಿಜಯಲಕ್ಷ್ಮೀ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ವಿಜಯಲಕ್ಷ್ಮೀ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆ ಖರ್ಚು ಭರಿಸಲು ಕಷ್ಟಪಡುತ್ತಿದ್ದಾರೆ. ನೆಲೆಸಲು ನೆಲೆಯಿಲ್ಲ. ಕೈಯಲ್ಲಿ ಹಣವಿಲ್ಲ ಎಂಬ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ಸಹಾಯ ಮಾಡಿ ಎಂದು ಇಂಡಸ್ಟ್ರಿಯವರ ಸಹಾಯ ಯಾಚಿಸಿದ್ದರು.
ಶ್ರೀಮುರಳಿ 'ಮದಗಜ' ಚಿತ್ರದಲ್ಲಿ ವಿಜಯಲಕ್ಷ್ಮಿ!
ವಿಷಯ ತಿಳಿದ ನಟ ಕಿಚ್ಚ ಸುದೀಪ್ ವಿಜಯಲಕ್ಷ್ಮಿಯವರಿಗೆ ಸಹಾಯ ಮಾಡಿದ್ದಾರೆ. ಒಂದು ಲಕ್ಷ ರೂಪಾಯಿ ಹಣ ಸಹಾಯ ಮಾಡಿದ್ದಾರೆ. ಈ ವಿಚಾರವನ್ನು ಸುದೀಪ್ ಆಪ್ತರು ಹೇಳಿದ್ದಾರೆ.
ಟ್ರೋಲ್‌ಗಳಿಗೆ ಉತ್ತರಿಸುವಷ್ಟು ಪುರುಸೊತ್ತಿಲ್ಲ: ರಶ್ಮಿಕಾ ಮಂದಣ್ಣ
ಶ್ರೀ ಮುರಳಿ ನಟಿಸುತ್ತಿರುವ ಮದಗಜ ಚಿತ್ರದಲ್ಲಿ ವಿಜಯಲಕ್ಷ್ಮಿಗೆ ಅವರಿಗೆ ಪಾತ್ರವೊಂದನ್ನು ನೀಡಲು ಚಿತ್ರತಂಡ ನಿರ್ಧರಿಸಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.
