ಯಾಕಂದ್ರೆ, ಕನ್ನಡ ಚಿತ್ರರಂಗದ ಮಟ್ಟಿಗೆ ಬಹಳಷ್ಟು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ಖ್ಯಾತಿ ದ್ವಾರಕೀಶ್ ಚಿತ್ರ ಸಂಸ್ಥೆಗೆ ಸಲ್ಲುತ್ತದೆ. ಹೆಸರಾಂತ ನಟ-ನಟಿಯರ ಸಿನಿಮಾ ಮಾಡಿದ ಹೆಗ್ಗಳಿಕೆಯೂ ಇದಕ್ಕಿದೆ. ಇಂತಹ ಸಂಸ್ಥೆಗೀಗ 50 ವರ್ಷ ತುಂಬಿದೆ. ಕನ್ನಡಕ್ಕಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಇದೊಂದು ಮೈಲು ಗಲ್ಲು.

ಚಿತ್ರ ನಿರ್ಮಾಣ ಸುಲಭದ ಕೆಲಸ ಅಲ್ಲ. ಆಸಕ್ತಿ,ಅಭಿರುಚಿ, ವೃತ್ತಿಪರತೆಯ ಮೂಲಕವೇ ಚಿತ್ರ ನಿರ್ಮಾಣಕ್ಕೆ ಬಂದ ಪ್ರತಿಷ್ಟಿತ ಸಂಸ್ಥೆಗಳೇ ಸೋಲು-ಗೆಲುವುಗಳ ನಡುವೆ ಉಳಿದುಕೊಳ್ಳುವುದು ಕಷ್ಟವಾಗಿ, ತೆರೆಗೆ ಸರಿದು ಹೋದ ದೊಡ್ಡ ಇತಿಹಾಸವೇ ಭಾರತೀಯ ಚಿತ್ರರಂಗದಲ್ಲಿದೆ. ಅಂತಹದರಲ್ಲಿ 1969ರಲ್ಲಿ ಶುರುವಾದ ‘ದ್ವಾರಕೀಶ್ ಚಿತ್ರ’ ಸಂಸ್ಥೆ ಈಗಲೂ ತನ್ನ ಆಸ್ತಿತ್ವವನ್ನು ಉಳಿಸಿಕೊಂಡು ಬಂದಿರುವುದು ಸಾಹಸದ ಕೆಲಸ.

ಬಿಗ್ ಬಾಸ್ ಮನೆ ಎಂಟ್ರಿ ಲೆಟೆಸ್ಟ್ ಲಿಸ್ಟ್, ಹನುಮಂತನ ಜತೆ ಟಿಕ್ ಟಾಕ್ ಶೂರರು!

ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಪ್ರಕಾರ ಅದು ಹಲವು ಏರಿಳಿತಗಳ ನಡುವಿನ ಸಾಹಸದ ಪಯಣ. ‘ನನಗೆ ಗೊತ್ತಿರುವ ಹಾಗೆ ಭಾರತೀಯ ಚಿತ್ರರಂಗದಲ್ಲೀಗ ಇಷ್ಟು ವರ್ಷ ನಿರಂತರವಾಗಿ ಚಿತ್ರ ನಿರ್ಮಾಣದಲ್ಲಿ ಉಳಿದುಕೊಂಡು ಬಂದಿರುವುದು ಬೆರಳೆಣಿಕೆಯಷ್ಟು ಸಂಸ್ಥೆಗಳು ಮಾತ್ರ. ಹಿಂದಿಯಲ್ಲಿ ರಾಜ್‌ಕಪೂರ್ ಚಿತ್ರ ಸಂಸ್ಥೆ, ತೆಲುಗಿನಲ್ಲಿ ರಾಮನಾಯ್ಡು ಚಿತ್ರ ಸಂಸ್ಥೆ , ಅದು ಬಿಟ್ಟರೆ ಕನ್ನಡದಲ್ಲಿ ದ್ವಾರಕೀಶ್ ಚಿತ್ರ ಸಂಸ್ಥೆ. ಇದು ಸಾಧ್ಯವಾಗಿದ್ದು ನನ್ನೊಬ್ಬನಿಂದ ಮಾತ್ರವಲ್ಲ, ಅದಕ್ಕೆ ಬಹಳಷ್ಟು ಜನರ ಬೆಂಬಲವಿದೆ. ರಾಘವೇಂದ್ರ ಸ್ವಾಮಿಯ ಆಶೀರ್ವಾ ದವಿದೆ’ ಎಂದು ದ್ವಾರಕೀಶ್ ಹೇಳಿಕೊಳ್ಳು ವಾಗ ಅವರ ಇಳಿವಯಸ್ಸಿನ ಮುಖದಲ್ಲೂ ತಾರು ಣ್ಯದ ಉತ್ಸಾಹ ಚಿಮ್ಮುತ್ತದೆ.

ಅಂಬಾನಿ ಕಾರ್ ಡ್ರೈವರ್ ಸಂಬಳ ಎಷ್ಟು ಕೇಳಿದ್ರೆ ಹೌಹಾರ್ತೀರಿ!

ದ್ವಾರಕೀಶ್ ಚಿತ್ರ ಸಂಸ್ಥೆಗೂ ರಾಜ್‌ಕುಮಾರ್ ಕುಟುಂಬಕ್ಕೂ ಅವಿನಾಭ ಸಂಬಂಧ. 1969 ರಲ್ಲಿ ನಟ ದ್ವಾರಕೀಶ್ ಚಿತ್ರ ಸಂಸ್ಥೆ ಶುರು ಮಾಡಿದ್ದೇ ‘ಮೇಯರ್ ಮುತ್ತಣ್ಣ’ ಚಿತ್ರದ ಮೂಲಕ. ಇದು ರಾಜ್ ಕುಮಾರ್ ಅಭಿನಯದ ಚಿತ್ರ. ಇವತ್ತು ದ್ವಾರಕೀಶ್ ಸಂಸ್ಥೆ ಗೆ 50 ವರ್ಷ ತುಂಬಿದೆ. ಈ ಹೊತ್ತಿಗೆ ಅದರ ನಿರ್ಮಾಣದ ‘ಆಯುಷ್ಮಾನ್ ಭವ’ ಚಿತ್ರಕ್ಕೂ ಶಿವರಾಜ್ ಕುಮಾರ್ ನಾಯಕ ನಟ. ಆ ಬಗ್ಗೆ ಹೇಳಿಕೊಳ್ಳುವ ದ್ವಾರಕೀಶ್ ಹಳೇ ದಿನಗಳಿಗೆ ಜಾರಿ ಭಾವುಕರಾಗುತ್ತಾರೆ. ಹಾಗೇ ಡಾ. ವಿಷ್ಣುವರ್ಧನ್, ಶಂಕರ್‌ನಾಗ್, ರಜನಿಕಾಂತ್, ಅಂಬರೀಷ್ ಬೆಂಬಲವನ್ನು ಸ್ಮರಿಸಿಕೊಳ್ಳುತ್ತಾರೆ.