ಪ್ರೇಮ ಕವಿಯಾಗಿದ್ದಾರೆ ಕಂಗನಾ ರಾಣಾವತ್

First Published 21, Feb 2018, 9:37 AM IST
Kangana Ranaut writes a Poem Also
Highlights

ಕಂಗನಾ ರಾಣಾವತ್ ಈಗ ಕವಿಯಾಗಿದ್ದಾರೆ. ಪ್ರೇಮ ಕತೆ, ಪ್ರೇಮ ಕವಿತೆಗಳನ್ನು ಬರೆಯುವ ನಿರ್ಧಾರಕ್ಕೆ ಬಂದಿದ್ದು ಅವೆಲ್ಲವೂ ಅಧಿಕೃತವಾಗಿ ಪ್ರಕಟವಾದ ನಂತರ  ನಟಿ ಕಂಗನಾ ಜೊತೆಗೆ ಕವಿ ಕಂಗನಾ
ಎಂದೂ ಕೂಡ ಸಂಬೋಧಿಸಬಹುದೇನೋ. ಅಷ್ಟಕ್ಕೂ ಈ ಕಂಗನಾಗೆ ಕವಿಯಾಗಲು ಪ್ರೇರಣೆ ನೀಡಿರುವುದೇ ಪ್ರೇಮ.

ಬೆಂಗಳೂರು (21): ಕಂಗನಾ ರಾಣಾವತ್ ಈಗ ಕವಿಯಾಗಿದ್ದಾರೆ. ಪ್ರೇಮ ಕತೆ, ಪ್ರೇಮ ಕವಿತೆಗಳನ್ನು ಬರೆಯುವ ನಿರ್ಧಾರಕ್ಕೆ ಬಂದಿದ್ದು ಅವೆಲ್ಲವೂ ಅಧಿಕೃತವಾಗಿ ಪ್ರಕಟವಾದ ನಂತರ  ನಟಿ ಕಂಗನಾ ಜೊತೆಗೆ ಕವಿ ಕಂಗನಾ
ಎಂದೂ ಕೂಡ ಸಂಬೋಧಿಸಬಹುದೇನೋ. ಅಷ್ಟಕ್ಕೂ ಈ ಕಂಗನಾಗೆ ಕವಿಯಾಗಲು ಪ್ರೇರಣೆ ನೀಡಿರುವುದೇ ಪ್ರೇಮ.

‘ನನ್ನ  ಪ್ರೀತಿಯ ಬಗ್ಗೆ ಕತೆಯೊಂದನ್ನು  ಬರೆದುಕೊಂಡಿದ್ದೇನೆ. ಇದನ್ನು  ಸದ್ಯದಲ್ಲಿಯೇ ಯಾವುದಾದರೂ  ನ್ಯೂಸ್ ಪೇಪರ್‌ನಲ್ಲಿ ಪ್ರಕಟ  ಮಾಡುತ್ತೇನೆ’ ಎಂದು  ಹೇಳಿಕೊಂಡಿದ್ದಾರೆ. ಇದರ ಜೊತೆಗೆ ನನ್ನಲ್ಲಿ ಒಂದಷ್ಟು ಪ್ರೇಮ ಕವಿತೆಗಳೂ ಇವೆ’ ಎನ್ನುವ ಮೂಲಕ ನಾನು ಕತೆ, ಕವಿತೆ ಎರಡನ್ನೂ ಬರೆಯಬಲ್ಲೆ ಎಂದು ತೋರಿಸಿದ್ದಾರೆ. ‘ಮಣಿಕರ್ಣಿಕಾ’ ಚಿತ್ರದ ಶೂಟಿಂಗಲ್ಲಿ  ಬ್ಯುಸಿಯಾಗಿರುವ ಕಂಗನಾ ಈಗ  ಇದ್ದಕ್ಕಿದ್ದ ಹಾಗೆ ಪ್ರೇಮ ಕವನ  ಬರೆಯುತ್ತೇನೆ ಎಂದಿದ್ದು ನೋಡಿ ಬಾಲಿವುಡ್ ಕುತೂಹಲಗೊಂಡಿದೆ.
ಈಕೆ ಹೃತಿಕ್ ರೋಷನ್ ಬಗ್ಗೆ ಕವನ ಬರೆಯಬಹುದಾ ಅನ್ನುವ ಗುಮಾನಿ ಹಲವರನ್ನು ಕಾಡುತ್ತಿದೆ. ಎಲ್ಲಕ್ಕೂ ಕಾಲವೇ ಉತ್ತರ ನೀಡಬೇಕು. 

loader