ಬರೋಬ್ಬರಿ ಆರು ತಿಂಗಳ ನಂತರ ಕಂಗನಾ ರಾಣಾವತ್ ಅಂದುಕೊಂಡಿದ್ದು ಆಗಿದೆ. ಈ ಮೂಲಕ ಈಗ ಆಕೆ ಬಾಲಿವುಡ್‌'ನ ದೊಡ್ಡ ನಿರ್ಮಾಪಕರ ಸಾಲಿಗೆ ಸೇರುತ್ತಿದ್ದಾಳೆ. ವಿಷಯ ಏನಪ್ಪಾ ಅಂತಂದ್ರೆ, ಕಂಗನಾ ಮುಂಬೈನ ಬಾಂದ್ರಾ ಬಳಿ 20 ಕೋಟಿ ರುಪಾಯಿ ಮೌಲ್ಯದ ಬಂಗಲೆಯೊಂದನ್ನು ಕೊಂಡಿರುವುದು. ಆದರೆ ಇದು ತನ್ನ ವಾಸಕ್ಕೆ ಕೊಂಡಿದ್ದಲ್ಲ. ಆದರೆ ಆಕೆಯೇ ತಿಳಿಸಿರುವಂತೆ ಇದು ಮುಂದೆ ಕಂಗನಾ ಹಿಡಿತದಲ್ಲಿ ಇರುವ ‘ಮಣಿಕರ್ಣಿಕಾ ಫಿಲಂಸ್’ ಪ್ರೊಡಕ್ಷನ್‌'ನ ಆಫೀಸ್ ಆಗಿರಲಿದೆ.
ಬರೋಬ್ಬರಿ ಆರು ತಿಂಗಳ ನಂತರ ಕಂಗನಾ ರಾಣಾವತ್ ಅಂದುಕೊಂಡಿದ್ದು ಆಗಿದೆ. ಈ ಮೂಲಕ ಈಗ ಆಕೆ ಬಾಲಿವುಡ್'ನ ದೊಡ್ಡ ನಿರ್ಮಾಪಕರ ಸಾಲಿಗೆ ಸೇರುತ್ತಿದ್ದಾಳೆ. ವಿಷಯ ಏನಪ್ಪಾ ಅಂತಂದ್ರೆ, ಕಂಗನಾ ಮುಂಬೈನ ಬಾಂದ್ರಾ ಬಳಿ 20 ಕೋಟಿ ರುಪಾಯಿ ಮೌಲ್ಯದ ಬಂಗಲೆಯೊಂದನ್ನು ಕೊಂಡಿರುವುದು. ಆದರೆ ಇದು ತನ್ನ ವಾಸಕ್ಕೆ ಕೊಂಡಿದ್ದಲ್ಲ. ಆದರೆ ಆಕೆಯೇ ತಿಳಿಸಿರುವಂತೆ ಇದು ಮುಂದೆ ಕಂಗನಾ ಹಿಡಿತದಲ್ಲಿ ಇರುವ ‘ಮಣಿಕರ್ಣಿಕಾ ಫಿಲಂಸ್’ ಪ್ರೊಡಕ್ಷನ್'ನ ಆಫೀಸ್ ಆಗಿರಲಿದೆ.
ಇನ್ನು ಮುಂದೆ ಈ ಬ್ಯಾನರ್'ನಲ್ಲಿ ತಯಾರಾಗುವ ಎಲ್ಲಾ ಚಿತ್ರಗಳಿಗೂ ಇದೇ ಶಕ್ತಿಕೇಂದ್ರ. ಮುಂದೆ ಕಂಗನಾಳ ‘ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರವೂ ಇಲ್ಲಿಂದಲೇ ಶುರುವಾಗಲಿದೆ ಎಂದು ಆಪ್ತ ಮೂಲಗಳು ಈಗಾಗಲೇ ಹೇಳಿವೆ.
ತನ್ನ ಪ್ರೊಡಕ್ಷನ್ಗೆ ವ್ಯವಸ್ಥಿತವಾದ ನೆಲೆ ಮಾಡಿಕೊಳ್ಳಬೇಕು ಎನ್ನುವುದು ಕಂಗನಾಳ ಬಹು ವರ್ಷಗಳ ಕನಸು. ಅದಕ್ಕೆ ಆರು ತಿಂಗಳ ಹಿಂದೆ ಒಂದು ರೂಪ ಸಿಕ್ಕಿತ್ತು. ಆದರೆ ಕಂಗನಾ ಫುಲ್ ಬ್ಯುಸಿ ಇದ್ದ ಕಾರಣಕ್ಕಾಗಿ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಲು ಸಾ‘ಧ್ಯವಾಗಿರಲಿಲ್ಲ. ಈಗ ಈ ಬಿಗ್ ಡೀಲ್ ಕಂಪ್ಲೀಟ್ ಮಾಡಿಕೊಂಡಿದ್ದಾಳೆ. ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್ ಅಂಗಳಕ್ಕೆ ಹೊಸ ಬಂಗಲೆಯೊಂದು ಸೇರಿತು ಎಂದು ಹಲವರು ಸಂಭ್ರಮಿಸಿದರೆ, ಮುಂದೆ ಇದೇ ಬಂಗಲೆಯಿಂದ ಬಾಲಿವುಡ್ ಗೆ ಯಾವೆಲ್ಲಾ ಸಿನಿಮಾಗಳು ಲಗ್ಗೆ ಇಡಲಿವೆ ಎನ್ನುವ ನಿರೀಕ್ಷೆ ಪ್ರೇಕ್ಷಕನದ್ದಾಗಿದೆ.
