ತೆರೆಯ ಮೇಲಷ್ಟೇ ನಾವು ಜೋಡಿ, ವಾಸ್ತವವಾಗಿ ಅಣ್ಣ-ತಂಗಿ ಸಂಬಂಧ: ಕಮಲ್‌

First Published 3, Mar 2018, 9:21 AM IST
Kamal Hassan Talk About Sridevi
Highlights

ನಟಿ ಶ್ರೀದೇವಿ ಮತ್ತು ಕಮಲ್‌ ಹಾಸನ್‌ ಹಲವು ಚಿತ್ರಗಳಲ್ಲಿ ಪ್ರೇಮಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚೆನ್ನೈ: ನಟಿ ಶ್ರೀದೇವಿ ಮತ್ತು ಕಮಲ್‌ ಹಾಸನ್‌ ಹಲವು ಚಿತ್ರಗಳಲ್ಲಿ ಪ್ರೇಮಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇಬ್ಬರೂ ಒಂದು ಕಾಲದಲ್ಲಿ ನಂ.1 ಜೋಡಿ ಎನಿಸಿಕೊಂಡಿದ್ದರು. ಆದರೆ ತಮ್ಮಿಬ್ಬರ ಮಧ್ಯೆ ನಿಜವಾಗಿಯೂ ಇದ್ದಿದ್ದು ಅಣ್ಣ ತಂಗಿಯ ಸಂಬಂಧ ಎಂದು ಕಮಲ್‌ ಹಾಸನ್‌ ಅವರೇ ಸ್ವತಃ ಹೇಳಿಕೊಂಡಿದ್ದಾರೆ.

ತಮಿಳು ನಿಯತಕಾಲಿಕೆ ‘ಆನಂದ ವಿಕಟನ್‌’ನಲ್ಲಿ ಲೇಖನವೊಂದನ್ನು ಬರೆದಿರುವ ಕಮಲ್‌ ಹಾಸನ್‌, ‘ಅಂದಿನ ದಿನಗಳಲ್ಲಿ ದಂಪತಿಗಳು ತಾವು ಕಮಲ್‌ ಹಾಸನ್‌ ಮತ್ತು ಶ್ರೀದೇವಿ ರೀತಿ ಕಾಣುತ್ತೇವೆ ಎಂದು ಹೋಲಿಸಿಕೊಳ್ಳುತ್ತಿದ್ದರು.

ಅವರು ನಮ್ಮನ್ನು ಜೋಡಿಯಾಗಿ ನೋಡಲು ಬಯಸಿದ್ದರು. ಅವರ ಕನಸನ್ನು ಭಗ್ನ ಮಾಡಲು ನನಗೆ ಮನಸ್ಸಿರಲಿಲ್ಲ. ಆದರೆ, ಈಗ ನಮ್ಮಿಬ್ಬರ ಸಂಬಂಧವನ್ನು ಬಹಿರಂಗ ಪಡಿಸುತ್ತಿದ್ದೇನೆ.

ನಮ್ಮಿಬ್ಬರ ಮಧ್ಯೆ ಅಣ್ಣ- ತಂಗಿಯ ಸಂಬಂಧ ಇತ್ತು. ಈಗ ಈ ಸಂಗತಿಯನ್ನು ಹೇಳುವುದರಿಂದ ನನ್ನ ಸಿನಿಮಾ ವೃತ್ತಿಗೆ ಯಾವುದೇ ತೊಂದರೆ ಇಲ್ಲ’ ಎಂದು ಹೇಳಿದ್ದಾರೆ.

loader