ಬಿಗ್ ಬಾಸ್ ಶೋ ಅಂದ್ಮೇಲೆ ಏನಾದ್ರೂ ಒಂದು ಲವ್ ಸ್ಟೋರಿ, ಒಂದು ಕಿರಿಕ್ ಪಾರ್ಟಿ, ಇನ್ನೊಂದು ಗ್ರೂಪಿಸಂ ಇರಲೇಬೇಕು ಆದರೆ ಕಿರಿಕ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನ ಮಾಡಿರುವುದು ಮಾಧ್ಯಮದಲ್ಲಿ ಇದೇ ಮೊದಲ ಬಾರಿ.
ಎಲ್ಲಾ ಭಾಷೆಯಲ್ಲೂ ಹಂತ ಹಂತ ಮುಗಿಸಿಕೊಂಡು ಯಶಸ್ವಿ ಕಾರ್ಯಕ್ರಮವಾಗಿರುವ ಬಿಗ್ ಬಾಸ್‌ಗೆ ಇದೇ ಮೊದಲನೇ ಸಲ ಬಾರೀ ಕಳಂಕ ತಂದು ಕೊಡುವಂತಹ ಕೆಲಸ ಮಾಡಿದ್ದಾರೆ ಖ್ಯಾತ ನಟಿ.
ಚಿಕ್ಕ ವಯಸ್ಸಿಗೆ ಕ್ಯಾಮೆರಾ ಎದುರಿಸಿದ ನಟಿಗೆ ಸಿಕ್ತು Bigg Boss, DKD ಅವಕಾಶ!
ತಮಿಳು ಬಿಗ್ ಬಾಸ್ ಮೂರನೇ ಸೀಸನ್ ಸ್ಪರ್ಧಿಯಾಗಿರುವ ನಟಿ ಮಧುಮಿತಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಿಂದ ಶೋಗೆ ಕೆಟ್ಟ ಹೆಸರು ಬರುತ್ತದೆ ಎಂದು ಮನೆಯಿಂದ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೇ ಆಯೋಜಕರು ನಟಿ ಮೇಲೆ ಪೊಲೀಸ್ ಕೇಸ್ ಹಾಕಿದ್ದಾರೆ.
ಇನ್ನು ಆತ್ಮಹತ್ಯೆಗೆ ನಟಿ ಕೊಟ್ಟ ಕಾರಣ ಬಿಗ್ ಬಾಸ್ ಮನೆಗೆ ಹೋಗುವ ಮೊದಲು ನಿಗದಿಪಡಿಸಿದ ಹಣವನ್ನು ನೀಡಿಲ್ಲ ಹಾಗೂ ಮತ್ತಷ್ಟು ಹಣ ಕೊಡುವುದು ಬಾಕಿಯಿದೆ. ಇದನ್ನು ಕೇಳಿದರೆ ಆಯೋಜಕರು ಕಿರಿಕಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಗ್‌ಬಾಸ್ ಭುವನ್‌ಗೆ ತೊಡೆ ಕಚ್ಚಿದ ಪ್ರಕರಣ; ಕ್ಷಮೆಯಾಚಿಸಿದ ಪ್ರಥಮ್
ಬಿಗ್ ಬಾಸ್ ಮನೆಯಿಂದ ಹೊರಬಿದ್ದ ನಂತರ ನಿರೂಪಕ ಕಮಲ್ ಹಾಸನ್ ಮೊರೆ ಹೋಗಿದ್ದಾರೆ. ಹಣ ಸಿಗಲು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆನ್ನಲಾಗಿದೆ.
