Asianet Suvarna News Asianet Suvarna News

ಮತ್ತೆ ಫೋಟೋಗ್ರಾಪರ್‌ಗಳ ಮೇಲೆ ರೇಗಿದ ಜಯಾ ಬಚ್ಚನ್‌: ಇವರನ್ನ ಐಶ್ ರೈ ಅದ್ಹೇಗೆ ಸಹಿಸಿಕೊಂಡಿದ್ಲೋ ಎಂದ ಜನ

ಅಮಿತಾಭ್ ಬಚ್ಚನ್ ಪತ್ನಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅತ್ತೆ  ಬಾಲಿವುಡ್‌ ಹಿರಿಯ ನಟಿ ಜಯಾ ಬಚ್ಚನ್ ಅವರು ಪಪಾರಾಜಿಗಳ ಮೇಲೆ ರೇಗುವ ಕಾರಣಕ್ಕೆ ಈ ಹಿಂದೆಯೂ ಸುದ್ದಿಯಾಗಿದ್ದರು.  ಈಗ ಮತ್ತೆ ಇದೇ ಕಾರಣಕ್ಕೆ ಟ್ರೋಲ್ ಆಗಿದ್ದಾರೆ. ಜಯಾ ಬಚ್ಚನ್

Jaya Bachchan lashed out at photographers again People wonder how Daughter in Law Aishwarya Rai tolerated Her akb
Author
First Published Jan 15, 2024, 1:31 PM IST

ಅಮಿತಾಭ್ ಬಚ್ಚನ್ ಪತ್ನಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅತ್ತೆ  ಬಾಲಿವುಡ್‌ ಹಿರಿಯ ನಟಿ ಜಯಾ ಬಚ್ಚನ್ ಅವರು ಪಪಾರಾಜಿಗಳ ಮೇಲೆ ರೇಗುವ ಕಾರಣಕ್ಕೆ ಈ ಹಿಂದೆಯೂ ಸುದ್ದಿಯಾಗಿದ್ದರು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಕೂಡ ಆಗಿದ್ದರು. ಸೆಲೆಬ್ರಿಟಿಗಳನ್ನು ಕಂಡರೆ ಜೀ ಜೀ ಎಂದು ಕರೆದು ಫೋಟೋಗೆ ಮುಗಿಬೀಳುವ ಪಪಾರಾಜಿಗಳ ವರ್ತನೆ ಸಹಿಸಿದ ಐಶ್ವರ್ಯಾ ಅತ್ತೆ ಅವರ ಮೇಲೆ ರೇಗಾಡಿದ್ದರು. ಅದು ಈಗ ಮತ್ತೆ ರಿಪೀಟ್ ಆಗಿದೆ. 

ಕೆಲ ದಿನಗಳ ಹಿಂದಷ್ಟೇ ಆಮೀರ್ ಖಾನ್ ಪುತ್ರಿ ಇರಾ ಖಾನ್ ಹಾಗೂ ಫಿಟ್‌ನೆಸ್ ಟ್ರೈನರ್‌ ನೂಪುರ್ ಶಿಖರೆ ಅವರ ಮದುವೆ ಆರತಕ್ಷತೆ ಮುಂಬೈನಲ್ಲಿ ಬಹಳ ಅದ್ದೂರಿಯಾಗಿ ನಡೆದಿತ್ತು. ಈ ಸಮಾರಂಭದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಕತ್ರೀನಾ ಕೈಫ್,  ಜಯಾ ಬಚ್ಚನ್ ಕುಟುಂಬ ಸೇರಿದಂತೆ ಬಹುತೇಕ ಇಡೀ ಬಾಲಿವುಡ್‌ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಅದೇ ರೀತಿ ಜಯಾ ಬಚ್ಚನ್ ಕೂಡ ತಮ್ಮ ಪುತ್ರಿ ಶ್ವೇತಾ ಬಚ್ಚನ್ ಹಾಗೂ ಸೋನಾಳಿ ಬೇಂದ್ರೆ ಜೊತೆ ಈ ಸಮಾರಂಭಕ್ಕೆ ಆಗಮಿಸಿದ್ದರು.

ನಾವು ಜೊತೆಯಾಗಿಲ್ಲ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡ ಅಭಿಷೇಕ್ ಬಚ್ಚನ್

ಈ ಸೆಲೆಬ್ರಿಟಿ ಮದುವೆಗೆ ಬಂದವರನ್ನೆಲ್ಲಾ ಪಪಾರಾಜಿಗಳು ಕರೆದು ಫೋಟೋ ವೀಡಿಯೋ ಮಾಡಿಕೊಳ್ಳುತ್ತಿದ್ದರು. ಅದೇ ರೀತಿ ಜಯಾ ಬಚ್ಚನ್ ಕೂಡ ಅಲ್ಲಿಗೆ ಆಗಮಿಸುತ್ತಿದ್ದಂತೆ ಪಪಾರಾಜಿಗಳು ಬೊಬ್ಬೆ ಹೊಡೆಯಲು ಶುರು ಮಾಡಿದ್ದು, ಇದನ್ನು ನೋಡಿದ ಜಯಾ ಅಲ್ಲೂ ಗೊಣಗಲು ಶುರು ಮಾಡಿದ್ದಾರೆ. ಪಪಾರಾಜಿಗಳು ಜಯಾಗೆ ಇಲ್ಲಿ ನಿಲ್ಲಿ ಅಂತ ಹೇಳಿದ್ದು, ಇದನ್ನು ಕೇಳಿದ ಜಯಾ ಇವರು ನಮಗೆ ಕಲಿಸಿಕೊಡಲು ಬರುತ್ತಿದ್ದಾರೆ ಎಂದು ಗೊಣಗಾಡಿದ್ದಾರೆ. 'ಕ್ಯಾಯಾ ಇದರ್ ಆಂಗಲ್ ಹಮ್ ಕೋ ಸಿಖಾ ರಹಾ ಹೈ ಎಂದಿದ್ದಾರೆ. ಬಳಿಕ ಅವರು ನಗುತ್ತಲೇ ಮುಂದೆ ಸಾಗಿದ್ದಾರೆ. ಆದರೆ ವೀಡಿಯೋ ನೋಡಿದ ಜನ ಮಾತ್ರ ಜಯಾ ಬಚ್ಚನ್‌ರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ. 

ದಿ ಆರ್ಚೀಸ್ ಪ್ರೀಮಿಯರ್‌: ಮೊಮ್ಮಗ ಅಗಸ್ತ್ಯ ನಂದನ ಖುಷಿಯ ಕ್ಷಣದಲ್ಲೂ ತಾಳ್ಮೆ ಕಳ್ಕೊಂಡ ಜಯಾ ಬಚ್ಚನ್‌

ಇವರ ಜೊತೆ ಅಮಿತಾಭ್ ಬಚ್ಚನ್ ಹೇಗೆ ವಾಸ ಮಾಡುತ್ತಿದ್ದಾರೋ ಏನೋ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಅವರು ಪ್ರತಿ ಬಾರಿಯೂ ಸಿಡಿ ಸಿಡಿ ಅಂತ ಸಿಡಿಯುತ್ತಲೇ ಇರುತ್ತಾರೆ ಅವರು ಯಾವಾಗ ಸರಿ ಹೋಗುತ್ತಾರೋ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಇನ್ನು ಕೆಲವರು ಐಶ್ವರ್ಯಾ ರೈ ಅದ್ಹೇಗೆ ಇವರನ್ನು ಇಷ್ಟು ದಿನ ಸಹಿಸಿಕೊಂಡರೋ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 

ಐಶ್ವರ್ಯಾರನ್ನು ಜಯಾ ಹೊಗಳ್ತಿದ್ದಂತೆಯೇ ನಾದಿನಿ ಶ್ವೇತಾ ಬಚ್ಚನ್‌ಗೆ ಇದೇನಾಯ್ತು? ಹಳೆಯ ವಿಡಿಯೋ ವೈರಲ್‌!

ಆದರೆ ಜಯಾ ಬಚ್ಚನ್ ಅವರಿಗೆ ಪ್ರಸ್ತುತ 75 ವರ್ಷಗಳಾಗಿದ್ದು, ಸಹಜವಾಗಿ ಸಿಟ್ಟು ಕೋಪಗಳು ಕೈ ಮೀರಿ ಹೋಗುತ್ತವೆ. ಮನಸ್ಸು ವಯಸ್ಸು ಯಾವುದು ಕೈಗೆ ಸಿಗದ ಈ ವಯಸ್ಸಿನ ಬಹುತೇಕರ ವರ್ತನೆ ಹೀಗೆಯೇ ಇದೆ. ಆದರೆ ನೆಟ್ಟಿಗರು ಮಾತ್ರ ಆಕೆಯ ವರ್ತನೆಯನ್ನು ಸಹಜವೆಂಬಂತೆ ತೆಗೆದುಕೊಳ್ಳದೇ ಕಿಡಿಕಾರಿದ್ದಾರೆ.

ಇತ್ತೀಚಿನ ಕೆಲ ತಿಂಗಳುಗಳಿಂದ  ಬಚ್ಚನ್ ಕುಟುಂಬ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ದೂರವಾಗುತ್ತಿದ್ದಾರೆ ಎಂದು ಸಾಕಷ್ಟು ಸುದ್ದಿಗಳು ಹರಿದಾಡಿದ್ದವು.  ಇದರ ಮಧ್ಯೆ ಐಶ್ವರ್ಯಾ ರೈ ಹಾಗೂ ಅಭಿಷೇಕ್, ಜಯಾ ಬಚ್ಚನ್ ಹಾಗೂ ಅಮಿತಾಭ್ ಬಚ್ಚನ್ ಅವರು ವಾಸವಿರುವ ನಿವಾಸ ಜಲ್ಸಾದಿಂದ ಹೊರಬಂದು ವಾಸಿಸುತ್ತಿದ್ದಾರೆ ಎಂದು ಕೂಡ ಸುದ್ದಿಯಾಗಿತ್ತು. 

ನಾನೇನು ಕಿವುಡಿ ಅಲ್ಲ...: ಪಾಪರಾಜಿಗಳನ್ನು ನೋಡಿ ಸಿಡುಕಿದ ಜಯಾ ಬಚ್ಚನ್, ವಿಡಿಯೋ ವೈರಲ್

 
 
 
 
 
 
 
 
 
 
 
 
 
 
 

A post shared by Voompla (@voompla)

 

Follow Us:
Download App:
  • android
  • ios