ಇದು ಅಂತಿಂಥ ವಿಷ್ಯ ಅಲ್ಲ, ಕೆ ಬಾಲಚಂದರ್ ನಾಲ್ಕು ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದೇಕೆ ನಟ ವಿಷ್ಣುವರ್ಧನ್?
ಆ ಕಾಲದಲ್ಲಿ ತಮಿಳು ನಿರ್ದೇಶಕ ಕೆ ಬಾಲಚಂದರ್ ಅವರಿಂದ ಆಫರ್ ಬರುವುದೇ ತುಂಬಾ ದೊಡ್ಡ ವಿಷಯವಾಗಿತ್ತು. ಅದನ್ನು ಒಪ್ಪಿಕೊಳ್ಳುವುದೋ ಬೇಡವೋ ಎಂದು ನಟ ವಿಷ್ಣುವರ್ಧನ್ ಯೋಚಿಸುತ್ತಿದ್ದರಂತೆ. ಕಾರಣ, ನಟ ವಿಷ್ಣುವರ್ಧನ್ ಅವರು ಆಗತಾನೇ ಕನ್ನಡ ಚಿತ್ರಂಗ ಪ್ರವೇಶಿಸಿದ್ದರು...
ತಮಿಳಿನ ಖ್ಯಾತ ನಿರ್ದೇಶಕರಾದ ಕೆ ಬಾಲಚಂದರ್ (K Balacjander) ಅವರು ಸಾಲುಸಾಲಾಗಿ ಕನ್ನಡದ ನಟ ವಿಷ್ಣುವರ್ಧನ್ (Vishnuvardhan) ಅವರಿಗೆ ನಾಲ್ಕು ಆಫರ್ ನೀಡಿದ್ದರು. ಆದರೆ, ನಟ ವಿಷ್ಣುವರ್ಧನ್ ಅವರು ಆಗ ಯಾವುದೇ ಅವಕಾಶವನ್ನೂ ಒಪ್ಪಲಿಲ್ಲ. ನಟ ವಿಷ್ಣು ಅವರು ಪುಟ್ಟಣ್ಣ ಕಣಗಾಲ್ ಮಾತು ಕೇಳಿ ಹಾಗೆ ಮಾಡಿದ್ದಾರೆ ಎಂದು ಆ ಸಮಯದಲ್ಲಿ ಗುಲ್ಲು ಎದ್ದಿತ್ತು. ಆದರೆ, ನಿಜವಾಗಿಯೂ ಅದರ ಹಿಂದಿನ ಅಸಲಿಯತ್ತೇನು? ಪುಟ್ಟಣ್ಣ ಹಾಗೆ ಹೇಳಿದ್ರಾ? ಯಾಕೆ ಹಾಗೆ ಹೇಳಿದ್ರು?
ಆ ಕಾಲದಲ್ಲಿ ತಮಿಳು ನಿರ್ದೇಶಕ ಕೆ ಬಾಲಚಂದರ್ ಅವರಿಂದ ಆಫರ್ ಬರುವುದೇ ತುಂಬಾ ದೊಡ್ಡ ವಿಷಯವಾಗಿತ್ತು. ಅದನ್ನು ಒಪ್ಪಿಕೊಳ್ಳುವುದೋ ಬೇಡವೋ ಎಂದು ನಟ ವಿಷ್ಣುವರ್ಧನ್ ಯೋಚಿಸುತ್ತಿದ್ದರಂತೆ. ಕಾರಣ, ನಟ ವಿಷ್ಣುವರ್ಧನ್ ಅವರು ಆಗತಾನೇ ಕನ್ನಡ ಚಿತ್ರಂಗ ಪ್ರವೇಶಿಸಿದ್ದರು. ಅವರಿಗೆ ಕನ್ನಡದಲ್ಲೂ ಸಾಕಷ್ಟು ಆಫರ್ ಇತ್ತು. ಆಗ ನಟ ವಿಷ್ಣು ಅವರು ಅದನ್ನು ಪುಟ್ಟಣ್ಣನವರಿಗೆ ಹೇಳಿ ಅವರ ಸಲಹೆ ಕೇಳಿದದ್ದರಂತೆ.
ದರ್ಶನ್ ಸಿನಿಮಾಗೋಸ್ಕರ 'ಮದಗಜ' ಮಹೇಶ್ ಅವ್ರ ಪರ ನಿಂತಿದಾರಾ? ಅಸಲಿ ಕಹಾನಿ ಇದು ನೋಡಿ!
ಅದಕ್ಕೆ ಪಟ್ಟಣ್ಣ ಅವರು 'ನೀನು ತಮಿಳು ಚಿತ್ರರಂಗಕ್ಕೆ ಹೋದರೆ ಖಂಡಿತ ತುಂಬಾ ದೊಡ್ಡ ನಟನಾಗಿ ಬೆಳೆಯುತ್ತೀಯಾ. ಅದರಲ್ಲಿ ಯಾವುದೇ ಸಂದೇಹ ಇಲ್ಲ. ತಮಿಳು ಅಂತಲ್ಲ, ನೀನು ಯಾವುದೇ ಭಾಷೆಗೆ ಹೋದರೂ ಅಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆಯುತ್ತೀಯ. ಆದರೆ, ಹೋಗುವುದು ಖಂಡಿತ ಬೇಡ. ಏಕೆಂದರೆ, ಇಲ್ಲಿ ಕನ್ನಡ ಚಿತ್ರರಂಗಕ್ಕೆ ನಿನ್ನಂತಹ ಹೀರೋನ ಅವಶ್ಯಕತೆ ಇದೆ. ಆದ್ದರಿಂದ ಇಲ್ಲೇ ಇರು ಅಂದಿದ್ದರಂತೆ. ಹೀಗಾಗಿ ವಿಷ್ಣು ಅವರು ಕೆ ಬಾಲಚಂದರ್ ಆಫರ್ ಅನ್ನು ರಿಜೆಕ್ಟ್ ಮಾಡಿದ್ದರಂತೆ.
ಬಳಿಕ, ಸಾಹಸಸಿಂಹ ಬಿರುದು ಪಡೆದು ನಟ ವಿಷ್ಣುವರ್ಧನ್ ಅವರು ಕನ್ನಡದಲ್ಲಿ ಅದೆಷ್ಟು ಮಿಂಚಿದರು, ಸೂಪರ್ ಸ್ಟಾರ್ ಆಗಿ ಮೆರೆದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂದು ನಟ ವಿಷ್ಣುವರ್ಧನ್ ಅವರನ್ನು ಇಲ್ಲಿ ಕನ್ನಡದಲ್ಲಿಯೇ ಉಳಿಸಿಕೊಳ್ಳದಿದ್ದರೆ ಬಹುಶಃ ವಿಷ್ಣು ಅವರು ತಮಿಳುನಾಡಿನಲ್ಲಿ ರಜನಿಕಾಂತ್ ಹಾಗು ಕಮಲಹಾಸನ್ ಅವರಂತೆ ಸೂಪರ್ ಸ್ಟಾರ್ ಆಗಿರುತ್ತಿದ್ದರೇನೋ!
ಎನೋ ಇದೆ, ಅಪರ್ಣಾ ಎದುರು ದರ್ಶನ್ ಅಂದು ಪುನೀತ್ ಬಗ್ಗೆ ಹೇಳಿದ್ದ ಮಾತು ಇಂದು ವೈರಲ್ ಆಗ್ತಿದ್ಯಲ್ಲ..!
ಆದರೆ, ಪುಟ್ಟಣ್ಣ ಕಣಗಾಲ್ ಅವರ ಬಾಯಲ್ಲಿ ವಿಧಿ ಅದನ್ನು ಹೇಳಿಸಿತು ಎಂಬಂತೆ, ನಟ ವಿಷ್ಣುವರ್ಧನ್ ಅವರು ಕನ್ನಡದಲ್ಲೇ ಉಳಿದು ಬರೋಬ್ಬರಿ ಎರಡು ನೂರು ಚಿತ್ರಗಳಲ್ಲಿ ಅಭಿನಯಿಸಿದರು. ವಿಷ್ಣುದಾದಾ, ದಾದಾ, ಸಾಹಸಸಿಂಹ, ಅಭಿನಯ ಭಾರ್ಗವ ಮೊದಲಾದ ಹೆಸರಿನಿಂದ ನಟ ವಿಷ್ಣುವರ್ಧನ್ ಅವರು ಖ್ಯಾತಿ ಪಡೆದಿದ್ದಾರೆ. ನಟಿ ಭಾರತಿಯವರನ್ನು ಮದುವೆಯಾಗಿದ್ದ ನಟ ವಿಷ್ಣುವರ್ಧನ್ ಅವರು, ತಮ್ಮ ಜೀವಿತದ ಕೊನೆಯ ಉಸಿರು ಇರೋವರೆಗೂ ಉತ್ತಮ ದಾಂಪತ್ಯ ನಡೆಸಿದ್ದರು.