ಮುಂಬೈ[ಮಾ.23]: ನಟ ವಿವೇಕ್‌ ಒಬೇರಾಯ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಪಿಎಂ ನರೇಂದ್ರ ಮೋದಿ’ ಚಲನ ಚಿತ್ರದ ಟ್ರೈಲರ್‌ನಲ್ಲಿ ತಮ್ಮ ಹೆಸರನ್ನು ಬಳಕೆ ಮಾಡಿಕೊಂಡಿರುವುದಕ್ಕೆ ಹಿರಿಯ ಗೀತ ರಚನೆಕಾರ ಜಾವೇದ್‌ ಅಖ್ತರ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಚಿತ್ರಕ್ಕೆ ತಾವು ಯಾವುದೇ ಗೀತೆಗಳನ್ನು ಬರೆದುಕೊಟ್ಟಿಲ್ಲ. ಆದಾಗ್ಯೂ ಟ್ರೈಲರ್‌ನಲ್ಲಿ ಗೀತರಚನೆಕಾರರಾದ ಪ್ರಸೂನ್‌ ಜೋಶಿ, ಸಮೀರ್‌, ಅಭೇಂದ್ರಕುಮಾರ್‌ ಉಪಾಧ್ಯಾಯ, ಸರದಾರ್‌, ಪರ್ರಿ ಜಿ ಮತ್ತು ಲವ್‌ರಾಜ್‌ ಜತೆಗೆ ತಮ್ಮ ಹೆಸರು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.

‘ಪಿಎಂ ನರೇಂದ್ರ ಮೋದಿ’ ಏಪ್ರಿಲ್ 5 ರಂದು ಬಿಡುಗಡೆಯಾಗಲಿದ್ದು, ಈಗಾಗಲೇ ಸಾಮಾಜಿಕ ಜಾಲಾತಾಣಗಳಲ್ಲಿ ಟ್ರೈಲರ್ ಭಾರೀ ಸೌಂಡ್ ಮಾಡುತ್ತಿದೆ.