ಬಾಲಿವುಡ್ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಅವರ ಇತ್ತೀಚಿನ ಸ್ಟೇಜ್ ಶೋ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅವರ ಈ ವರ್ತನೆ ಓವರ್ ಆ್ಯಕ್ಟಿಂಗ್ ಅಂತ ಹಲವರು ಟೀಕಿಸಿದ್ದಾರೆ.

ಬಾಲಿವುಡ್ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಅಹಮದಾಬಾದ್‌ನಲ್ಲಿ ನಡೆದ ಲೈವ್ ಶೋ ಒಂದರಲ್ಲಿ ಪರ್ಫಾರ್ಮ್ ಮಾಡುವಾಗ ತಲೆ ಮೇಲೆ ನೀರು ಸುರಿದುಕೊಂಡಿದ್ದಾರೆ. ಇದೇ ವೇಳೆ, ಮೈಕ್ ಕೆಳಗಿಳಿಸಿದರೂ ಹಾಡು ಮಾತ್ರ ನಿಂತಿಲ್ಲ. ಇದರಿಂದ ಅವರು ಲೈವ್ ಆಗಿ ಹಾಡದೆ, ಕೇವಲ ಲಿಪ್‌ಸಿಂಕ್ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗಿದ್ದಾರೆ.

Add Asianetnews Kannada as a Preferred SourcegooglePreferred

ಬಾಲಿವುಡ್ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಅವರ ಇತ್ತೀಚಿನ ಸ್ಟೇಜ್ ಶೋ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಚಿತ್ರದ ಹಾಡುಗಳಿಂದ ಸದ್ಯ ಸುದ್ದಿಯಲ್ಲಿರುವ ಜಾಸ್ಮಿನ್, ಅಹಮದಾಬಾದ್‌ನಲ್ಲಿ ನಡೆದ ಲೈವ್ ಕಾರ್ಯಕ್ರಮವೊಂದರಲ್ಲಿ ಮಾಡಿದ ಪರ್ಫಾರ್ಮೆನ್ಸ್ ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ವೇದಿಕೆ ಮೇಲೆ ಹಾಡು ಹೇಳುವಾಗ ಜೋಶ್‌ನಲ್ಲಿ ತಮ್ಮ ತಲೆ ಮೇಲೆ ನೀರು ಸುರಿದುಕೊಂಡಿದ್ದು, ಅವರ ಈ ವರ್ತನೆ ಓವರ್ ಆ್ಯಕ್ಟಿಂಗ್ ಅಂತ ಹಲವರು ಟೀಕಿಸಿದ್ದಾರೆ.

ಏಪ್ರಿಲ್ 19ರಂದು ನಡೆದ ಈ ಕಾರ್ಯಕ್ರಮದಲ್ಲಿ ಜಾಸ್ಮಿನ್ ತಮ್ಮ ಹಿಟ್ ಹಾಡು 'ಶರಾರತ್' ಅನ್ನು ಹಾಡುತ್ತಿದ್ದರು. ಹಾಡಿನ ಮಧ್ಯೆ, ಜೋಶ್ ಹೆಚ್ಚಾದಂತೆ ಜಾಸ್ಮಿನ್ ಕೈಯಲ್ಲಿದ್ದ ಮೈಕ್ ಕೆಳಗಿಳಿಸಿದರು. ಆದರೆ, ಹಾಡು ಮಾತ್ರ ಬ್ಯಾಕ್‌ಗ್ರೌಂಡ್‌ನಲ್ಲಿ ಪ್ಲೇ ಆಗ್ತಾನೇ ಇತ್ತು. ಇದನ್ನ ನೋಡಿದ ಜನ, ಜಾಸ್ಮಿನ್ ಲೈವ್ ಆಗಿ ಹಾಡುತ್ತಿಲ್ಲ, ಕೇವಲ ಲಿಪ್‌ಸಿಂಕ್ (ತುಟಿ ಚಲನೆ) ಮಾಡುತ್ತಿದ್ದಾರೆ ಅಂತ ಆರೋಪಿಸಿದ್ದಾರೆ. "ಲೈವ್ ಶೋ ಅಂತ ದುಡ್ಡು ಕೊಟ್ಟು ಟಿಕೆಟ್ ತಗೊಂಡ್ರೆ, ಇವರು ಬಂದು ಆ್ಯಕ್ಟಿಂಗ್ ಮಾಡ್ತಾರೆ" ಅಂತ ಹಲವರು ಕಾಮೆಂಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

View post on Instagram

ಜಾಸ್ಮಿನ್ ವಿರುದ್ಧ ಟ್ರೋಲ್

ಗಾಯಕಿಯ ಡ್ರೆಸ್ಸಿಂಗ್ ಸ್ಟೈಲ್ ಮತ್ತು ವೇದಿಕೆ ಮೇಲಿನ ವರ್ತನೆಯನ್ನು ಇಟ್ಟುಕೊಂಡು ಸಾವಿರಾರು ಟ್ರೋಲ್‌ಗಳು ಹರಿದಾಡುತ್ತಿವೆ. "ಎರಡು ಹಾಡು ಹಿಟ್ ಆಗ್ತಿದ್ದಂತೆ ಓವರ್ ಆ್ಯಕ್ಟಿಂಗ್ ಜಾಸ್ತಿಯಾಗಿದೆ" ಮತ್ತು "ಹಾಡೋಕೆ ನೀರು ಸಾಕಾಗಿಲ್ವಾ?" ಎಂಬಂತಹ ಕಾಮೆಂಟ್‌ಗಳು ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ತುಂಬಿಹೋಗಿವೆ. ಆದರೆ, ಕೆಲ ಅಭಿಮಾನಿಗಳು ಜಾಸ್ಮಿನ್ ಅವರ ಸ್ಟೇಜ್ ಎನರ್ಜಿ ಮತ್ತು ಪರ್ಫಾರ್ಮೆನ್ಸ್‌ಗೆ ಬೆಂಬಲವನ್ನೂ ಸೂಚಿಸಿದ್ದಾರೆ. ಸಲ್ಮಾನ್ ಖಾನ್ ಅಭಿನಯದ 'ಕಿಕ್' ಚಿತ್ರದ 'ಯಾರ್ ನಾ ಮಿಲೇ' ಹಾಡಿನ ಮೂಲಕ ಜಾಸ್ಮಿನ್ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದ್ದರು.