ಸಿದ್ಧಾರ್ಥ್ ಮಲೋತ್ರಾ ಜೊತೆ ಜಾಹ್ನವಿ ರೊಮ್ಯಾನ್ಸ್?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 20, Aug 2018, 3:25 PM IST
Janhvi Kapoor to act with  Sidharth Malhotra in Dostana 2?
Highlights

  • ಜಾಹ್ನವಿ- ಸಿದ್ಧಾರ್ಥ್ ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾ? 
  • ದಢಕ್ ಚಿತ್ರದ ಯಶಸ್ಸಿನ ನಂತರ ಇನ್ನೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ ಜಾಹ್ನವಿ  
  • ದೋಸ್ತಾನಾ-2 ತೆರೆಗೆ ಬರಲಿದೆಯಾ? 

ಮುಂಬೈ (ಆ. 20): ದಢಕ್ ಚಿತ್ರದ ಯಶಸ್ಸಿನ ನಂತರ ಜಾಹ್ನವಿ ಕಪೂರ್,  ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಿಂದ ಹೊರ ಬಿದ್ದಿದೆ. 

ದೋಸ್ತಾನ - 2 ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ಜಾಹ್ನವಿ- ಸಿದ್ಧಾರ್ಥ್ ಅಭಿನಯಿಸಲಿದ್ದಾರೆ ಎನ್ನಲಾಗಿದೆ. 

ನಿರ್ದೇಶಕ ಕರಣ್ ಜೋಹರ್ ದೋಸ್ತಾನ ಚಿತ್ರದ ಮೂಲಕ ಜಾನ್ ಅಬ್ರಾಹಂ, ಅಭಿಶೇಕ್ ಬಚ್ಚನ್ ಹಾಗೂ ಪ್ರಿಯಾಂಕ ಚೋಪ್ರಾರನ್ನು ಹಾಕಿಕೊಂಡು ದೋಸ್ತಾನ ಚಿತ್ರವನ್ನು ಮಾಡಿದ್ದರು. ಇದು ಸಿಕ್ಕಾಪಟ್ಟೆ ಹಿಟ್ ಆಗಿತ್ತು. ದಶಕಗಳ ನಂತರ ದೋಸ್ತಾನ -2 ಮಾಡಲು ಮುಂದಾಗಿದ್ದಾರೆ. ಜಾಹ್ನವಿ- ಸಿದ್ಧಾರ್ಥ್ ರನ್ನು ಫೈನಲೈಸ್ ಮಾಡಿದ್ದಾರೆ ಎನ್ನಲಾಗಿದೆ. ಸ್ಕ್ರಿಪ್ಟ್ ಕೂಡಾ ಸಿದ್ಧವಾಗಿದೆ. ಮೂರನೇ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. 

loader