ಅಕ್ಕನ ಮದುವೆಯಲ್ಲಿ ಭರ್ಜರಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದ ಕಿರೀಟಿ ಈಗ, ಸ್ಯಾಂಡಲ್ ವುಡ್ ಗೆ ಅದ್ದೂರಿಯಾಗಿ ಎಂಟ್ರಿ ಕೊಡೋದಿಕ್ಕೆ ರೆಡಿಯಾಗಿದ್ದಾನೆ.
ಬೆಂಗಳೂರು(ನ.19): ಬಳ್ಳಾರಿಯ ಗಣಿ ಧಣಿ ಜನಾರ್ದನ ರೆಡ್ಡಿ ಕೋಟಿ ವೆಚ್ಚದಲ್ಲಿ ಮಗಳ ಮದುವೆ ಮಾಡಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ರು..ಈಗ ಜನಾರ್ದನ ರೆಡ್ಡಿ ಮಗ ಕಿರೀಟಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡೋದಿಕ್ಕೆ ಅದ್ದೂರಿ ವೇದಿಕೆ ಸಜ್ಜಾಗಿದೆ.
ಅಕ್ಕನ ಮದುವೆಯಲ್ಲಿ ಭರ್ಜರಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದ ಕಿರೀಟಿ ಈಗ, ಸ್ಯಾಂಡಲ್ ವುಡ್ ಗೆ ಅದ್ದೂರಿಯಾಗಿ ಎಂಟ್ರಿ ಕೊಡೋದಿಕ್ಕೆ ರೆಡಿಯಾಗಿದ್ದಾನೆ.
ದ್ವಿತೀಯ ಪಿಯುಸಿ ಮುಗಿಸಿರೋ ಕಿರೀಟಿ ಚಿತ್ರರಂಗಕ್ಕೆ ಬರೋದಿಕ್ಕೆ ಸಾಕಷ್ಟು ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ.
ಆಕ್ಟಿಂಗ್ ಕ್ಲಾಸ್, ಡಾನ್ಸಿಂಗ್ , ಕರಾಟೆ, ಕುದುರೆ ಸವಾರಿ ಹಾಗೂ ಸ್ಟಂಟ್ ಮಾಡುವುದರಲ್ಲಿ ತರಬೇತಿ ಪಡೆದಿದ್ದಾರಂತೆ. ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ ಜನಾರ್ದನ ರೆಡ್ಡಿ ಮಗ ಕಿರೀಟಿಯನ್ನ ಬಹಳ ಗ್ರ್ಯಾಂಡ್ ಆಗಿ ಕನ್ನಡ ಚಿತ್ರರಂಗಕ್ಕೆ ಲಾಂಚ್ ಮಾಡೋದಿಕ್ಕೆ ಪ್ಲಾನ್ ಮಾಡಿದ್ದಾರೆ.
ಸದ್ಯದಲ್ಲೇ ಜನಾರ್ದನ ರೆಡ್ಡಿ ಮಗನ ಸಿನಿಮಾಕ್ಕೆ ಯಾರು ಆಕ್ಷನ್ ಕಟ್ ಹೇಳ್ತಾರೆ, ಹೀರೋಯಿನ್ ಯಾರು? ಕಥೆ ಎಂತಂಹದ್ದು ಅನ್ನೋದು ಸ್ವಲ್ಪ ದಿನಗಳಲ್ಲಿ ಗೋತ್ತಾಗಲಿದೆ.
