ರಾಜಕೀಯ ಹಾಗೂ ಸಿನಿಮಾ ವಿಚಾರದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ಜಗ್ಗೇಶ ಯಾವಾಗಲೂ ಮುಂದು. ಅಭಿಮಾನಿಗಳ ಹುಟ್ಟುಹಬ್ಬಕ್ಕೆ, ಮದುವೆಗೆ ಶುಭ ಹಾರೈಸುತ್ತಾರೆ. ರಾಜಕೀಯ ವಿಚಾರಗಳ ಬಗ್ಗೆ ನಿಲುವನ್ನು ವ್ಯಕ್ತಪಡಿಸುತ್ತಾರೆ. 

ಅನಾವಶ್ಯ ವಿಚಾರಗಳ ಬಗ್ಗೆ ಟ್ಯಾಗ್ ಮಾಡಿ ಅಭಿಪ್ರಾಯ ತಿಳಿಸಿ ಎಂದು ಎಳೆಯುವವರ ಬಗ್ಗೆ ಜಗ್ಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಈ ರೀತಿ ಮಾಡಿದ್ರೆ ಬ್ಲಾಕ್ ಮಾಡಬೇಕಾಗುತ್ತದೆ ಎಂದಿದ್ದಾರೆ. 

" ನಾನು ನನ್ನ ಅಭಿಮಾನಿಗಳು ಚಿತ್ರರಂಗದ ಅಭಿಪ್ರಾಯ ವಿಚಾರ ವಿನಿಮಯಕ್ಕೆ ಸೇತುವೆ ಈ ಟ್ವಿಟರ್ ಖಾತೆ! ಇಲ್ಲಿ ಅನಾವಶ್ಯಕ ಕಂಡವರ ವಿಚಾರ ಟ್ಯಾಗ್ ಮಾಡಿ ಪ್ರಚಾರಕ್ಕೆ ಯತ್ನಿಸುವುದು ನಾನು ಸಹಿಸಲ್ಲ. ವಿನಂತಿ ಮುಂದುವರೆದರೆ ನಾನು ಬ್ಲಾಕ್ ಮಾಡುವೆ. ಪರರ ಸಂತೋಷ ಬಯಸುವ ನನ್ನ ಶ್ರೇಷ್ಟವಾಗಿ ಬಳಸಿಕೊಳ್ಳಿ. ಪ್ರೀತಿಗೆ ಗೌರವಿಸುವಿರಿ ಎಂದು ಭಾವಿಸುವೆ!" ಎಂದು ಬರೆದುಕೊಂಡಿದ್ದಾರೆ.