ಬೆಂಗಳೂರು(ಸೆ.18): ನೀರ್ ದೋಸೆ ಗೆಲುವಿನ ಲಯದಲ್ಲಿರುವ ಜಗ್ಗೇಶ್, ಮತ್ತೊಂದು ದೋಸೆಯ ರುಚಿ ನೋಡಲು ಮುಂದಾಗಿದ್ದಾರೆ. ಮಸಾಲೆ ದೋಸೆ ಸೌಮ್ಯ ಎಂಬ ಹೊಸ ಚಿತ್ರದ ಟೈಟಲ್ ರಿಜಿಸ್ಟರ್ ಮಾಡಿದ್ದಾರೆ. 

Add Asianetnews Kannada as a Preferred SourcegooglePreferred

ನೀರ್ ದೋಸೆ ಚಿತ್ರದ ಮಸಾಲೆ ದೋಸೆ ಸೌಮ್ಯ ಡೈಲಾಗ್ ಸೂಪರ್ ಹಿಟ್ ಆಗಿದ್ದೇ ತಡ ನವರಸ ನಾಯಕ ಜಗ್ಗೇಶ್ 'ಮಸಾಲೆ ದೋಸೆ ಸೌಮ್ಯ' ಹಿಂದೆ ಬಿದ್ದಿದ್ದಾರೆ. ಕನ್ನಡ ಖ್ಯಾತ ನಟಿಯೊಬ್ಬರಿಗೆ ಟಾಂಗ್ ಕೊಡುವ ಸಲುವಾಗಿ ನೀರ್ ದೋಸೆ ಸಿನಿಮಾದಲ್ಲಿ ಮಸಾಲೆ ದೋಸೆ ಸೌಮ್ಯ ಡೈಲಾಗ್ ಬಳಸಲಾಗಿತ್ತು. 

ಜಗ್ಗೇಶ್ ಇದೇ ಹೆಸರಿನ ಸಿನಿಮಾ ಮಾಡ್ತಾರೆ ಅನ್ನೋದು ಸದ್ಯ ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿ ಬರುತ್ತಿರುವ ಸುದ್ಧಿ. ಮಸಾಲೆ ದೋಸೆ ಸೌಮ್ಯ ಟೈಟಲ್ ನ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಮಾಡಿರೋ ಜಗ್ಗೇಶ್ ಗುರುರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ಜಗ್ಗೇಶ್ ತಮ್ಮ ಟ್ವೀಟರ್ ಆಕೌಂಟ್ ನಲ್ಲಿ ಟ್ವೀಟ್ ಸಹ ಮಾಡಿದ್ದಾರೆ.