ನಾನು ಬಹಳಷ್ಟುಜನಕ್ಕೆ ಫೂಲ್‌ ಮಾಡಿದ್ದೇನೆ. ಆದರೆ, ನನಗೇ ಕಾಗೆ ಹಾರಿಸಿದ್ದು ನಮ್ಮ ತಾಯಿ. ಬಹುಶಃ ಅದೇ ನಾನು ಮೊದಲ ಬಾರಿಗೆ ಫೂಲ್‌ ಆಗಿದ್ದು ಅನಿಸುತ್ತದೆ. ನಾನು ಆಗಲೇ ಎದ್ದೇಳು ಮಂಜುನಾಥ. ಸೂರ್ಯ ಹುಟ್ಟಿದ ಮೇಲೆ ಹಾಸಿಗೆಯಿಂದ ಎದ್ದೇಳುವ ಸೋಮಾರಿಯಾಗಿದ್ದೆ.
ಬೆಂಗಳೂರು(ಎ.01): ನಾನು ಬಹಳಷ್ಟುಜನಕ್ಕೆ ಫೂಲ್ ಮಾಡಿದ್ದೇನೆ. ಆದರೆ, ನನಗೇ ಕಾಗೆ ಹಾರಿಸಿದ್ದು ನಮ್ಮ ತಾಯಿ. ಬಹುಶಃ ಅದೇ ನಾನು ಮೊದಲ ಬಾರಿಗೆ ಫೂಲ್ ಆಗಿದ್ದು ಅನಿಸುತ್ತದೆ. ನಾನು ಆಗಲೇ ಎದ್ದೇಳು ಮಂಜುನಾಥ. ಸೂರ್ಯ ಹುಟ್ಟಿದ ಮೇಲೆ ಹಾಸಿಗೆಯಿಂದ ಎದ್ದೇಳುವ ಸೋಮಾರಿಯಾಗಿದ್ದೆ.
ನಮ್ಮ ಅಮ್ಮ ಒಮ್ಮೆ ಇದ್ದಕ್ಕಿದಂತೆ ಬಂದು ‘ಲೋ ಮಗ ಇನ್ನು ಮಲ್ಗಿದ್ದಿಯಾ. ಮನೆ ಮುಂದೆ ಬಂದ್ ನೋಡು ಯಾರ್ ಬಂದಿದ್ದಾರೆ ಅಂತ' ಅಂತ ಹೇಳಿದ್ದಾಗ ‘ಯಾರ್ ಹೇಳಮ್ಮ' ಅಂತ ಬೆಲ್ಶೀಟ್ ಹೊದ್ದುಕೊಂಡೇ ಕೇಳಿದ. ‘ಅಯ್ಯೋ ದಡ್ಡ. ಪರಿಮಳಾ ಬಂದಿದ್ದಾಳೆ ಕಣೋ. ಒಡವೆ, ಹಣ, ಬಟ್ಟೆಎಲ್ಲ ಎತ್ತಿಕೊಂಡು ಮನೆ ಬಿಟ್ಟು ಓಡಿ ಬಂದಿದ್ದಾಳೆ. ಯಾರಾದ್ರು ನೋಡ್ತಾರೆ. ಬೇಗ ಹೋಗಿ ಮನೆ ಒಳಗೆ ಕರೆದುಕೊಂಡು ಬಾ' ಅಂದಿದ್ದೇ ತಡ ಬನೀನು, ಚಡ್ಡಿನಲ್ಲೇ ಮನೆ ಹೊರಗೆ ಓಡಿದೆ. ಯಾಕೆಂದರೆ ನಾನು- ಪರಿಮಳಾ ಮದುವೆ ಆದ ಮೇಲೆ ಅವರ ತಂದೆ ಮಗಳನ್ನು ಬಲವಂತವಾಗಿ ವಾಪಸ್ಸು ಪಾಂಡಿಚೆರಿಗೆ ಅಪಹರಿಸಿಕೊಂಡು ಹೋಗಿ ಬಚ್ಚಿಟ್ಟಿದ್ದರು. ಅವಳನ್ನು ನನ್ನಿಂದ ದೂರ ಮಾಡಿ ಒಂದು ವರ್ಷ ಎಂಟು ತಿಂಗಳಾಗಿತ್ತು. ಹೀಗಾಗಿ ಎದ್ದು ಬಿದ್ದು ಹೊರಗೆ ಬಂದು ನೋಡಿದ್ರೆ, ಯಾರು ಇಲ್ಲ! ಸಿಕ್ಕಾಪಟ್ಟೆಸಿಟ್ಟು ಬಂತು. ಇನ್ನೇನು ಬೈಯಬೇಕು ಅನ್ನುಷ್ಟರಲ್ಲಿ ‘ಏಪ್ರಿಲ್ ಫೂಲ್' ಅಂತ ಜೋರಾಗಿ ನಕ್ಕರು.
