Asianet Suvarna News Asianet Suvarna News

ಹಿರಿಯ ಕಲಾವಿದರಿಗೆ ಖ್ಯಾತ ತೆಲುಗು ನಟನಿಂದ ಗೌರವ ಸಮರ್ಪಣೆ!

ಕನ್ನಡದ ಮೂವರು ದಿಗ್ಗಜರ ಸಮಾಧಿಗೆ ಹೂವು ಸಮರ್ಪಿಸಿ ನಮಿಸುವ ಮೂಲಕ ಬಹು ಬೇಡಿಕೆಯ ತೆಲುಗು ನಟ ಜಗಪತಿ ಬಾಬು ತಮ್ಮ ಕಲಾವಂತಿಕೆ ತೋರಿದ್ದಾರೆ. 

Jagapathi Babu offers respect to Ambareesh Rajkumar before Darshan Roberrt shooting
Author
Bangalore, First Published Aug 3, 2019, 9:05 AM IST
  • Facebook
  • Twitter
  • Whatsapp

ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟಜಗಪತಿ ಬಾಬು ಅವರು ಡಾ. ರಾಜ್‌ಕುಮಾರ್‌, ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಹಾಗೂ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ ಸಮಾಧಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿರ್ಮಾಪಕ ಉಮಾಪತಿ ಜತೆಗಿದ್ದರು.

ಸದ್ಯ ಜಗಪತಿ ಬಾಬು ಅವರು ದರ್ಶನ್‌ ನಟನೆಯ ‘ರಾಬರ್ಟ್‌’ ಚಿತ್ರದಲ್ಲಿ ಅಭಿನಯಿಸುವುದಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ. ಈ ಚಿತ್ರದಲ್ಲಿ ಅವರದ್ದು ಖಳನಾಯಕನ ಪಾತ್ರ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲೇ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣಕ್ಕೆ ಹಾಜರಾದ ಜಗಪತಿ ಬಾಬು ಪಕ್ಕದಲ್ಲಿರುವ ದಿಗ್ಗಜರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.

ರಾಬರ್ಟ್ ಲುಕ್‌ ಹಿಂದಿದೆ ಅಸಲೀ ಕಥೆ! Exclusive

ದಕ್ಷಿಣ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟ ಜಗಪತಿ ಬಾಬು. ನಾಯಕನಾಗಿ ಚಿತ್ರರಂಗ ಪ್ರವೇಶಿಸಿದವರು. ಖಳನಾಯಕನಾಗಿ ಮರು ಪ್ರವೇಶ ಮಾಡಿದ ಜಗಪತಿ ಬಾಬು ಈಗ ಅತ್ಯಂತ ಬ್ಯುಸಿ ನಟ. ಈಗಾಗಲೇ ಕನ್ನಡದಲ್ಲಿ ಸುದೀಪ್‌ ಅಭಿನಯದ ‘ಬಚ್ಚನ್‌’ ಹಾಗೂ ನಿಖಿಲ… ಕುಮಾರ್‌ ನಟನೆಯ ‘ಜಾಗ್ವಾರ್‌’ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ‘ರಾಬರ್ಟ್‌’ ಮೂಲಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

Follow Us:
Download App:
  • android
  • ios