Asianet Suvarna News Asianet Suvarna News

ಹೃದಯಕ್ಕೆ ಕಿಚ್ಚು ಹಚ್ಚುವಂತಿದೆ ದೀಪಿಕಾಳ ಪದ್ಮಾವತಿ ಲುಕ್!

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಆಲೋಚನೆಯೇ ಹಾಗೆ. ಕಲ್ಪನೆಯ ಕನಸಿನ ಕನ್ಯೆ ತೆರೆಯಮೇಲೆ ಮೂಡಿಬಿಡುತ್ತಾಳೆ. ಈ ನಿರ್ದೇಶಕನ ಕೈಯ್ಯಲ್ಲಿ ಅರಳಿದ ದೀಪಿಕಾಳ ರಾಮ್​ ಲೀಲಾ, ಬಾಜೀ ರಾವ್ ಮಸ್ತಾನಿಯ ಲುಕ್ ನಂತರ ಇದೀಗ ರಾಣಿ ಪದ್ಮಾವತಿ ಲುಕ್. ನಿಜಕ್ಕೂ ದೀಪಕ ಸೌಂದರ್ಯ ಹೃದಯಕ್ಕೆ ಕಿಚ್ಚು ಹಚ್ಚುವಂತಿದೆ.

Its Tough to Take Eyes Off Deepika Padukone As Rani Padmavati

ಬೆಂಗಳೂರು (ಸೆ.21): ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಆಲೋಚನೆಯೇ ಹಾಗೆ. ಕಲ್ಪನೆಯ ಕನಸಿನ ಕನ್ಯೆ ತೆರೆಯಮೇಲೆ ಮೂಡಿಬಿಡುತ್ತಾಳೆ. ಈ ನಿರ್ದೇಶಕನ ಕೈಯ್ಯಲ್ಲಿ ಅರಳಿದ ದೀಪಿಕಾಳ ರಾಮ್​ ಲೀಲಾ, ಬಾಜೀ ರಾವ್ ಮಸ್ತಾನಿಯ ಲುಕ್ ನಂತರ ಇದೀಗ ರಾಣಿ ಪದ್ಮಾವತಿ ಲುಕ್. ನಿಜಕ್ಕೂ ದೀಪಕ ಸೌಂದರ್ಯ ಹೃದಯಕ್ಕೆ ಕಿಚ್ಚು ಹಚ್ಚುವಂತಿದೆ. ಬಿಡುಗಡೆಯಾಗಿರೋ ಪದ್ಮಾವತಿಯ ಎರಡು ಪೋಸ್ಟರ್​ಗಳು ವಾರೆ..!! ವಾ..!! ಎಂದು ಉದ್ಗಾರ ತೆಗೆಯುವಂತೆ ಮಾಡುತ್ತಿವೆ. ಮೈತುಂಬ ಒಡವೆ. ಅದ್ದೂರಿ ಪೋಷಾಕು, ಮುಖದಲ್ಲಿ ರಾಣಿಯ ರಾಜಗಾಂಭೀರ್ಯ. ರಾಣಿ ಪದ್ಮಾವತಿ ಆಗಲಿಕ್ಕೆ ದೀಪಿಕಾ ನಿಜಕ್ಕೂ ಅದೃಷ್ಟ ಮಾಡಿದ್ದಾಳೆಂದು ಮೊದಲ ನೋಟಕ್ಕೆ ಹೇಳಬಹುದು. ರಣವೀರ್ ಸಿಂಗ್ ಶಾಹೀದ್ ಕಪೂರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದು ಡಿಸೆಂಬರ್ 1ನೇ ತಾರೀಖು ಸಿನಿಮಾ ತೆರೆಕಾಣಲಿದೆ. ಅಲ್ಲಿಯವರೆಗೆ ಪದ್ಮಾವತಿಯ ಈ ಸೌಂಧರ್ಯವನ್ನ ನಿಮ್ಮ ಕಣ್ಣಲ್ಲಿ ಸೆರೆಯಾಗಿಸಿ.

Follow Us:
Download App:
  • android
  • ios