ಸಚಿವ ಡಿ.ಕೆ. ಶಿವಕುಮಾರ್ ರೆಸಾರ್ಟ್'ನಲ್ಲಿ ಇದ್ದ ಕಾರಣ ಐಟಿ ಅಧಿಕಾರಿಗಳು ರೆಸಾರ್ಟ್ ಮೇಲೆ ದಾಳಿ ಮಾಡಿದ್ದರು.

ರಾಮನಗರ(ಆ.03): ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಕಳೆದ 2 ದಿನಗಳಿಂದ ನಡೆಯುತ್ತಿರುವ ಆದಾಯ ತೆರಿಗೆ ಇಲಾಖೆಯ ದಾಳಿ ನಟ ಕಿಚ್ಚ ಸುದೀಪ್ ಅವರಿಗೂ ತಟ್ಟಿದೆ.

ನಟ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವ 'ರಾಜು ಕನ್ನಡ ಮೀಡಿಯಂ' ಚಿತ್ರದ ಚಿತ್ರೀಕರಣ ಈಗಲ್ಟ್'ನ್ ರೆಸಾರ್ಟ್'ನಲ್ಲಿ ನಡೆಯುತ್ತಿದೆ. ರೆಸಾರ್ಟ್ ಸುತ್ತಲೂ ಐಟಿ ಅಧಿಕಾರಿಗಳು ಹಾಗೂ ಪೊಲೀಸ್ ಸರ್ಪಕಾವಲಿದೆ. ಸಚಿವ ಡಿ.ಕೆ. ಶಿವಕುಮಾರ್ ರೆಸಾರ್ಟ್'ನಲ್ಲಿ ಇದ್ದ ಕಾರಣ ಐಟಿ ಅಧಿಕಾರಿಗಳು ರೆಸಾರ್ಟ್ ಮೇಲೆ ದಾಳಿ ಮಾಡಿದ್ದರು.

ಈ ಕಾರಣದಿಂದ ರೆಸಾರ್ಟ್'ಗೆ ಬರುವ ಎಲ್ಲ ವಾಹನಗಳನ್ನು ಪರಿಶೀಲಿಸಿ ಒಳಗೆ ಬಿಡುತ್ತಿದ್ದರು. ರಾಜುಕನ್ನಡಮೀಡಿಯಂಚಿತ್ರದ ಕಲಾವಿದರಿದ್ದಚಿತ್ರೀಕರಣದಮೂರುಕ್ಯಾರವಾನ್ಹಾಗೂ ಒಂದು ಬಸ್'ಅನ್ನು ಗಂಟೆಗೂ ಹೆಚ್ಚು ಕಾಲ ಪರಿಶೀಲಿಸಿ ಒಳಗೆ ಬಿಟ್ಟಿದ್ದಾರೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.