ಈಗಾಗಲೇ ಈ ಜೋಡಿ ದಾಂಪತ್ಯಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಈ ಗಾಳಿ ಸುದ್ದಿಗೆ ಪಿಗ್ಗಿಯ ಈ ನಡೆ ಮತ್ತಷ್ಟು ಪುಷ್ಟಿ ನೀಡಿದೆ.

ತನ್ನ ಸಹೋದರನ ಮಗಳು ಕೃಷ್ಣಾಳೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಪಿಗ್ಗಿ, ಮಗುವೆಂದರೆ ಆಸೆ, ಆದರೆ ಇನ್ನು 10 ವರ್ಷ ಅಮ್ಮನಾಗೋಲ್ಲ ಎಂಬುದಾಗಿಯೂ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಮಾದ್ಯಮದ ಮುಂದೆ ತುಸು ಹೆಚ್ಚಿಗೆ ಎನ್ನುವಷ್ಟು ಬಿಗುಮಾನ ತೋರುವ ಪ್ರಿಯಾಂಕಾ, ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಲು ಹಿಂದು ಮುಂದು ನೋಡುತ್ತಾರೆ. ಆದರೆ, ತಾನೇ ನಡೆಸುತ್ತಿರುವ ಸರ್ಕಾರೇತರ ಸಂಸ್ಥೆ ಬಗ್ಗೆ ಹೇಳಿ ಕೊಂಡಿದ್ದು, ಈ ಬಾಲಿವುಡ್ ಬೆಡಗಿ, 'ನನ್ನ ಸಂಸ್ಥೆ ಬಹಳ ಚಿಕ್ಕದು ಮತ್ತು ಸ್ವಯಂ ನಿಧಿಯಾದ್ದರಿಂದ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ. ರೋಹಿಂಗ್ಯಾಗಳಿಗೆ ಹಾಗೂ ದೇಶದೆಲ್ಲೆಡೆ  ನಾವು ಶಿಕ್ಷಣ ಪಡೆಯಲು ಅಸಾಧ್ಯವಾದ ಮಕ್ಕಳಿಗೆ ಸಹಾಯ ಮಾಡುತ್ತೇನೆ. ಇದನ್ನು 10 ವರ್ಷದಲ್ಲಿ ದೊಡ್ಡ ಯೋಜನೆಯಾಗಿ ಮಾಡಬೇಕೆಂದು ನನ್ನ ಆಸೆ,' ಎಂದು ಹೇಳಿಕೊಂಡಿದ್ದಾರೆ.