ಅ. 18 ಕ್ಕೆ ತೆರೆ ಮೇಲೆ ಬರಲಿದೆ ದಿ ವಿಲನ್ | ಪ್ರೇಕ್ಷಕರ ಕುತೂಹಲಕ್ಕೆ ತೆರೆ ಬೀಳಲಿದೆ | ಯಾರು ನಿಜವಾದ ವಿಲನ್? ಹೇಗಿರಲಿದೆ ಶಿವಣ್ಣ- ಸುದೀಪ್ ಮುಖಾಮುಖಿ?  

ಬೆಂಗಳೂರು (ಅ. 04): ಆಡಿಯನ್ಸ್ ಮನಸ್ಸಿಗೆ ನುಗ್ಗಿ ಬಿಟ್ರೆ, ಅವ್ನ ದೇವರಾಗಿ ಬಿಡ್ತಾನೆ. - ‘ದಿ ವಿಲನ್ ’ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಶಿವರಾಜ್ ಕುಮಾರ್ ಇಷ್ಟು ಹೇಳಿ ನಕ್ಕರು.

ಅವರು ಹೀಗೆ ಹೇಳಿದ್ದು ‘ದಿ ವಿಲನ್’ ಚಿತ್ರದ ಮೊದಲ ಪತ್ರಿಕಾಗೋಷ್ಟಿಯಲ್ಲಿ. ಆ ಕಾರ್ಯಕ್ರಮದಲ್ಲಿ ಹೇಳಿದ ಮಾತುಗಳು ಇಲ್ಲಿವೆ.

ಒಂದೇ ದಿನ 2 ಅದ್ದೂರಿ ಸಿನಿಮಾ ರಿಲೀಸ್; ಬಾಕ್ಸಾಫೀಸ್ ಉಡೀಸ್ !

ನಾನೂ ಎಷ್ಟು ದಿನ ಅಂತ ಒಳ್ಳೆಯವನಾಗಿರಲಿ ಹೇಳಿ ಯಾರೂ ಇಲ್ಲಿ ಪಕ್ವ ಅಂತೇನು ಇಲ್ಲ. ಪ್ರತಿಯೊಬ್ಬರಲ್ಲೂ ಪಾಸಿಟಿವ್ ಮತ್ತು ನೆಗೆಟಿವ್ ಎರಡು ಗುಣ ಇರುತ್ತವೆ. ಪಾಸಿಟಿವ್ ಅಂತ ಎನಿಸಿಕೊಳ್ಳುವುದು ಯಾವಾಗ, ಅದೇ ವ್ಯಕ್ತಿಯಲ್ಲಿ ನೆಗೆಟಿವ್ ಗುಣ ಕಾಣುವುದು ಯಾವಾಗ ಅನ್ನೋದು ಮುಖ್ಯ. ಹಾಗೆಯೇ ಇಲ್ಲಿ ಪಾಸಿಟವ್ ಮತ್ತು ನೆಗೆಟಿವ್ ಆ್ಯಟಿಟ್ಯೂಡ್ ಇರುವ ಪಾತ್ರಗಳನ್ನು ಸೃಷ್ಟಿಸಿ, ನಿರ್ದೇಶಕ ಪ್ರೇಮ್ ಒಂದೊಳ್ಳೆ ಕತೆ ಹೆಣೆದಿದ್ದಾರೆ.

ವಿಲನ್‌ ಬಗ್ಗೆ ಗಲಾಟೆ ಮಾಡಿದ್ರೆ ತಾಯಾಣೆ ಥೇಟರ್‌ಗೆ ಬರಲ್ಲ!

ಪ್ರೇಮ್ ಮೊದಲಿನಂತಿಲ್ಲ. ಸಾಕಷ್ಟು ಬದಲಾಗಿದ್ದಾರೆ. ವಯಸ್ಸಾಯಿತಲ್ಲ, ಅದಕ್ಕೆ ತಕ್ಕಂತೆ ಅವರಿಗೆ ಕತೆ ಹೇಳುವ ರೀತಿಯೂ ಸಿದ್ಧಿಸಿದೆ. ತುಂಬಾ ಒಳ್ಳೆಯ ಪಾತ್ರಗಳನ್ನೇ ಸೃಷ್ಟಿಸಿದ್ದಾರೆ. ಇಲ್ಲಿ ಯಾರು ಹೆಚ್ಚು ಇಲ್ಲ, ಯಾರು ಕಮ್ಮಿಯೂ ಇಲ್ಲ. ಅಷ್ಟು ಮಹತ್ವ ಇರುವ ಎರಡು ಪಾತ್ರಗಳು, ಅದರ ಸುತ್ತ ಕತೆಯನ್ನು ಸಾಗಿಸುವ ಮತ್ತಷ್ಟು ಪಾತ್ರಗಳು ಅಲ್ಲಿವೆ.

ಟೀಸರ್ ಬಂದ ನಂತ್ರ ಅಭಿಮಾನಿಗಳು ಸೃಷ್ಟಿಸಿರುವ ವಿವಾದ ಇದೆಯಲ್ಲ, ಅದು ಸರಿ ಅಲ್ಲ. ಅವ್ನಾ ಇವ್ನಾ ಅಂತ ನೋಡುವುದು ತಪ್ಪು. ನಾನೂ ಕೂಡ ಎಷ್ಟು ದಿನ ಅಂತ ಒಳ್ಳೆಯವನಾಗಿರಲಿ ಹೇಳಿ, ನಿಮ್ಗೇನಾದ್ರೂ ಆ ಪಾತ್ರ ಮನಸ್ಸಿಗೆ ನುಗ್ಗಿ ಬಿಟ್ರೆ, ಆ ಪಾತ್ರವೇ ದೇವರಾಗಿ ಬಿಡುತ್ತೆ. ಅಷ್ಟು ಮಾತ್ರವೇನಾನು ಹೇಳಬಲ್ಲೆ. ಆದರಾಚೆ, ವಿವಾದಗಳು ಅನಗತ್ಯ.

ಎಲ್ಲರೂ ಜೋಗಿ ಆಗೋದಿಲ್ಲ...

ಪ್ರೇಮ್ ಇಲ್ಲೂ ಒಂದು ತಾಯಿ-ಮಗನ ಸೆಂಟಿಮೆಂಟ್ ಇಟ್ಟಿದ್ದಾರೆ. ಆದ್ರೆ, ಈ ಚಿತ್ರದಲ್ಲಿರುವ ತಾಯಿಗೆ ಮಗ ಯಾರು ಅಂತ ನಾನು ಹೇಳೋದಿಲ್ಲ. ತುಂಬಾ ಎಮೋಷನಲ್ ಆಗಿ ಬಂದಿದೆ ಆ ತಾಯಿ-ಮಗನ ಸೆಂಟಿಮೆಂಟ್. ಅಷ್ಟು ಮಾತ್ರವೇ ಹೇಳುತ್ತೇನೆ. ತುಂಬಾ ಕ್ಲೆವರ್ ಆಗಿ ಕ್ಲೈಮ್ಯಾಕ್ಸ್ ಮಾಡಿದ್ದಾರೆ. 

#VillainYaru ಊಹಿಸಿ, ಕಿಚ್ಚನ ಚ್ಯಾಲೆಂಜ್ ಸ್ವೀಕರಿಸ್ತೀರಾ?

ಹಾಗಂತ ಇಲ್ಲಿನ ತಾಯಿ-ಮಗನ ಸೆಂಟಿಮೆಂಟ್ ಮತ್ತೊಂದು ಜೋಗಿ ಚಿತ್ರದ ಹಾಗೆ ಆಗುತ್ತಾ ಅಂತಲೂ ನಂಗೇನು ಅನಿಸೋದಿಲ್ಲ. ತಾಯಿ-ಮಗನ ಸೆಂಟಿಮೆಂಟ್ ಕತೆ ಅಂದಾಕ್ಷಣ ಎಲ್ಲವೂ ಜೋಗಿ ಆಗೋದಿಲ್ಲ. ಆದ್ರೂ ಯಾಕಾಗಬಾರದು ಅಂತಲೂ ನಂಗನಿಸುತ್ತೆ. ಯಾಕಂದ್ರೆ ಪ್ರೇಮ್ ತುಂಬಾ ಮೆಚ್ಯುರ್ ಆಗಿದ್ದಾರೆ. ನಮ್ಮನೆಲ್ಲ ಹೇಗಾದ್ರೂ ತೋರಿಸಬಹುದು ಅಂತ ಅನ್ಕೊಂಡಿದ್ದಾರೆ. ಹೇಗೂ ನಾನು ಸಿಗ್ತೀನಿ ಅಂತ ಏನೇನೋ ಗೆಟಪ್ ಹಾಕಿಸ್ತಾರೆ.

ಅಂಥಾ ಪ್ರಯೋಗವನ್ನು ಇಲ್ಲೂ ಮಾಡಿದ್ದಾರೆ. ಟೀಸರ್, ಪೋಸ್ಟರ್‌ನಲ್ಲಿ ರಿವೀಲ್ ಆದ ಮೂನಾರ್ರ್ಲ್ಕು ಆ ಗೆಟಪ್‌ಗಳು ಐದ್ಹತ್ತು ನಿಮಿಷದಲ್ಲಿ ಮಾತ್ರ ಬಂದು ಹೋಗುತ್ತವೆ. 

ಅದ್ದೂರಿಯಾಗಿದೆ ವಿಲನ್ ಟೀಸರ್, ಶಿವಣ್ಣ ಅಬ್ಬರ, ಸುದೀಪ್ ಪಂಚ್

ಮುಖಾಮುಖಿಯೂ ಇರಬೇಕು ಮಜಾ ಇರುತ್ತೆ

ಸುದೀಪ್ ಮತ್ತು ನಾನು ಫಸ್ಟ್ ಟೈಮ್ ಒಂದಾಗಿ ಅಭಿನಯಿಸಿದ್ದೇವೆ. ಚಿತ್ರ ಹೇಗೆ ಬಂದಿದೆಯೋ ಅಂತ ನಂಗೂ ಕುತೂಹಲ ಇದೆ. ಸಿನಿಮಾ ಮಾಡಿದ ರೀತಿಯೇ ಇಲ್ಲಿ ವಿಶೇಷ. ಹತ್ತು ಸೀನ್ ಗಳಲ್ಲಿ ಹೇಳುವುದನ್ನು ಒಂದು ಸೀನ್‌ನಲ್ಲಿ ತೋರಿಸಲು ಹೊರಟಿದ್ದಾರೆ ಪ್ರೇಮ್.

ಸುದೀಪ್ ಮತ್ತು ನಾನು ಎಷ್ಟು ಸೀನ್‌ಗಳಲ್ಲಿ ಮುಖಾಮುಖಿ ಆಗುತ್ತೇವೆ ಅನ್ನೋದು ನಂಗೂ ಗೊತ್ತಿಲ್ಲ. ಆದ್ರೆ ಯಾರೋ ಒಬ್ಬರು ಇಡೀ ಚಿತ್ರದಲ್ಲಿ ಕಾಣಿಸಿಕೊಂಡ್ರೆ ಪ್ರೇಕ್ಷಕರಿಗೂ ಬೋರ್ ಆಗುತ್ತೆ. ಹಾಗಾಗಿ ಪ್ರೇಮ್ ತುಂಬಾ ಜಾಣ್ಮೆಯಿಂದ ಆ ಪಾತ್ರ ಕ್ರಿಯೇಟ್ ಮಾಡಿದ್ದಾರೆ. ಒಂದಷ್ಟು ಕಾಲ ನಾನು, ಮತ್ತಷ್ಟು ಕಾಲ ಸುದೀಪ್ ಚಿತ್ರದಲ್ಲಿ ಬಂದು ಹೋಗುವುದು ಮಾಮೂಲು. ಆದ್ರೆ ಇಬ್ಬರು ಮುಖಾಮುಖಿ ಆದಾಗ ಏನಾಗುತ್ತೆ, ಹೇಗಿರುತ್ತೆ ಆ ಸನ್ನಿವೇಶ ಅನ್ನೋದು ವಿಶೇಷ.