ಇನ್ನು ಕೆಲವೇ ದಿನಗಳಲ್ಲಿ ‘ದಿ ವಿಲನ್’ ತೆರೆಗಪ್ಪಳಿಸಿಲಿದ್ದಾನೆ. ಆದರೆ ವಿಲನ್ ಯಾರೆಂಬುವುದು ಈವರೆಗೆ ಚಿದಂಬರ ರಹಸ್ಯ. ಇನ್ನೊಂದು ಟೀಸರ್ ಬಿಡುಗಡೆಯಾಗಲಿದೆ.   #VillainYaru ಹ್ಯಾಷ್ ಟ್ಯಾಗ್ ಬಳಸಿ ನೀವು ಕೂಡಾ ಊಹಿಸಿ, ಯಾರು ವಿಲನ್ ಅಂತಾ, ಶಿವಣ್ಣನಾ? ಕಿಚ್ಚನಾ?  

ಶಿವಣ್ಣ ಮತ್ತು ಕಿಚ್ಚ ಜತೆಯಾಗಿ ನಟಿಸಿರುವ ‘ದಿ ವಿಲನ್’ನ ಟೀಸರ್‌ಗಳು ನಾಡಿದಾದ್ಯಂತ ಈಗಾಗಲೇ ಕಿಚ್ಚು ಹಚ್ಚಿದೆ. ವಿಲನ್ ಯಾರೆಂಬ ಪ್ರಶ್ನೆ ಸಿನಿಪ್ರಿಯರಲ್ಲಿ ಹುಚ್ಚು ಎಬ್ಬಿಸಿರುವುದು ಸುಳ್ಳಲ್ಲ.

ಈ ಚಿತ್ರದ ಇಬ್ಬರು ನಾಯಕರಾದ ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅವರ ಪಾತ್ರಗಳ ಟೀಸರ್‌ಗಳನ್ನು ಬೇರೆ ಬೇರೆಯಾಗಿಯೇ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಎರಡೂ ಟೀಸರ್‌ಗಳಿಗೂ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದರೂ ಸುದೀಪ್ ಹಾಗೂ ಶಿವಣ್ಣ ಅವರನ್ನು ಟೀಸರ್‌ನಲ್ಲೇ ಜತೆಯಾಗಿ ನೋಡುವ ಕುತೂಹಲಕ್ಕೆ ಮಾತ್ರ ಈವರೆಗೆ ನಿರ್ದೇಶಕ ಪ್ರೇಮ್ ಉತ್ತರ ಕೊಟ್ಟಿಲ್ಲ. ಆ ಕಾರಣಕ್ಕೆ ಅಕ್ಟೋಬರ್ 1 ಕ್ಕೆ ಮತ್ತೊಂದು ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ. 

ಈ ಟೀಸರ್ ನಲ್ಲಿ ನಿರ್ದೇಶಕರು #VillainYaru ಎಂಬ ಪ್ರಶ್ನೆಗೆ ಉತ್ತರ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ; ಅಂಥ ಕುತೂಹಲದ ಕ್ಲೂಗಳನ್ನು ಟೀಸರ್‌ನಲ್ಲಿ ಪ್ರೇಮ್ ಸೇರಿಸಿದ್ದಾರೆಂಬ ಸುದ್ದಿಯನ್ನು www.suvarnanews.comವರದಿ ಮಾಡಿತ್ತು. ಆದರೆ ಅದಕ್ಕೆ ಪ್ರತಿಕ್ರಿಸಿರುವ ಕಿಚ್ಚ, ಸಾಧ್ಯವೇ ಇಲ್ಲ! ಎಂದು ಚ್ಯಾಲೆಂಜ್ ಕೂಡಾ ಮಾಡಿದ್ದಾರೆ. 

Scroll to load tweet…

ಆ.1 ರಂದು ಬಿಡುಗಡೆಯಾಗುವ ಟೀಸರ್‌ನಲ್ಲಿ ವಿಲನ್ ಬಗ್ಗೆ ಕ್ಲೂ ಬಿಟ್ಟುಕೊಡುತ್ತಾರೋ ಇಲ್ವೋ ಗೊತ್ತಿಲ್ಲ. ಸಿನಿಮಾ ಅ.18 ರಂದು ತೆರೆಗೆ ಬರುತ್ತಿದೆ. ಆ ಬಳಿಕವಂತೂ ವಿಲನ್ ಯಾರೆಂದು ಗೊತ್ತಾಗಲಿದೆ. 

ಆದರೆ ಅಭಿಮಾನಿಗಳಿಗೊಂದು ಸಖತ್ ವೇದಿಕೆಯನ್ನು ಸುವರ್ಣಣ್ಯೂಸ್ ಒದಗಿಸುತ್ತಿದೆ. ಕೈಯಲ್ಲಿ ಫೋನ್ ಎತ್ಕೊಳ್ಳಿ, #VillainYaru ಎಂಬ ಹ್ಯಾಷ್ ಟ್ಯಾಗ್‌ನೊಂದಿಗೆ ನೀವು ಭಾವಿಸುವ ವಿಲನ್ ಯಾರು ಎಂದು ಟ್ವೀಟ್ ಮಾಡಿ. .@suvarnanewstv