Asianet Suvarna News

ವಿನಯಾ ಪ್ರಸಾದ್ 7 ವರ್ಷದ ಸಂಸಾರಕ್ಕೆ ಅಸಮಾಧಾನ ತಂದದ್ದು ಇದೊಂದೇ ವಿಚಾರ!

ವೀಕೆಂಡ್ ವಿತ್ ರಮೇಶ್ ಸೀಸನ್-4 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪಂಚಭಾಷಾ ನಟಿ ವಿನಯ ಪ್ರಸಾದ್ ತನ್ನ ಮೊದಲ ಪತಿಯೊಂದಿಗಿದ್ದ ನೋವು-ನಲಿವು, ಅಸಮಾಧಾನ, ಅವರನ್ನು ಕಳೆದುಕೊಂಡ ರೀತಿ ಈ ಎಲ್ಲಾ ವಿಚಾರವನ್ನು ಮುಕ್ತವಾಗಿ ಜನರೊಂದಿಗೆ ಹಂಚಿಕೊಂಡಿದ್ದಾರೆ. 

Actress Vinaya Prasad in Zee kannada weekend with Ramesh
Author
Bangalore, First Published May 14, 2019, 11:50 AM IST
  • Facebook
  • Twitter
  • Whatsapp

ಸಿನಿ ಜರ್ನಿಯಲ್ಲಿ ಬಿಗ್ ಸಕ್ಸಸ್ ಕಂಡ ನಟಿ ಅಂದ್ರೆ ವಿನಯ ಪ್ರಸಾದ್. ನಟನೆ ಮಾತ್ರವಲ್ಲದೆ ನಿರೂಪಣೆ ಹಾಗೂ ಗಾಯನದ ಮೂಲಕ ಎಲ್ಲರ ಮನೆ ಗೆದ್ದಿದ್ದಾರೆ. ಆದರೆ ತಮ್ಮ ವೈಯಕ್ತಿಕ ಜೀವನದಲ್ಲಿ ಮಾತ್ರ ಅಷ್ಟೇ ಕಹಿ ಘಟನೆಗಳನ್ನು ಎದುರಿಸಿದ್ದಾರೆ. 

1988 ರಲ್ಲಿ ಸಂಕಲನಕಾರ ಹಾಗೂ ನಿರ್ದೇಶಕರಾದ ಮೊದಲ ಪತಿ ವೈಲಾಯ ಕೃಷ್ಣ ಪ್ರಸಾದ್ ರನ್ನು ಪ್ರೀತಿಸಿ  ಮದುವೆಯಾದರು. ಈ ಸುಖಮಯ ದಾಂಪತ್ಯ ಜೀವನ ಕೆಲ ವರ್ಷಗಳಷ್ಟೇ ನಡೆಯಿತು. ಆನಂತರ ಪ್ರಸಾದ್ ರನ್ನು ಕಳೆದುಕೊಳ್ಳುತ್ತಾರೆ. 

'ನಾನು ಮಾಡಿದ ದೊಡ್ಡ ತಪ್ಪಿದು': ಪ್ರಕಾಶ್ ಬೆಳವಾಡಿ

‘ಮಧ್ವಾಚಾರ್ಯ’ ಚಿತ್ರದ ವೇಳೆ ವಿನಯಾರಿಗೆ ಪ್ರಸಾದ್ ಗುಣ ನೋಡಿ ಫುಲ್ ಲವ್ ಆಗಿತ್ತಂತೆ. ಅಲ್ಲಿಂದ ಅರಳಿತು ಪ್ರೀತಿಯ ಅಲೆ. ವೃತಿ ಜೀವನದಲ್ಲಿ ದೊಡ್ಡ ಸಕ್ಸಸ್ ಕಂಡ ವಿನಯಾರಿಗೆ ಮದುವೆಯಾದ ಮೇಲೂ ಕೆಲಸ ಮಾಡುವ ಆಸೆ ಇತ್ತು. ಅಷ್ಟೇ ಅಲ್ಲದೇ ಪತ್ನಿಯನ್ನು ಮನೆಯಲ್ಲಿ ಕೂರಿಸುವ ಗಂಡ ಕಂಡರೆ ವಿನಯರಿಗೆ ಇಷ್ಟವಿಲ್ಲ. ತಾನು  ಜೀವನದಲ್ಲಿ ಇಷ್ಟಪಟ್ಟ ಗುಣವೆಲ್ಲಾ ಪ್ರಸಾದ್ ನಲ್ಲಿ ಕಂಡು ಇಬ್ಬರು ಪ್ರೀತಿಸಿ ಮದುವೆಯಾದರು. ಆದರೆ ಕೆಲವೊಮ್ಮೆ ಸಣ್ಣ ಪುಟ್ಟ ಮಾತುಳಿಂದ ಇಬ್ಬರ ನಡುವೆ ಮನಸ್ತಾಪ ಆಗಿರುವುದುಂಟು. ಅದರಲ್ಲೂ ಮದುವೆಯಾದ ನಂತರ ನೋಡಿದವರೆಲ್ಲಾ ಪ್ರಸಾದ್ ರನ್ನು ವಿನಯ ಗಂಡ ಎಂದೇ ಪರಿಚಯ ಮಾಡಿಕೊಡುತ್ತಿದ್ದರು. ಈ ವಿಚಾರದ ವೇಳೆ ಆಗುತ್ತಿದ್ದ ಮಾತುಗಳಿಂದ ಇವರಿಬ್ಬರ ನಡುವೆ ಅಸಮಾಧಾನ ಉಂಟಾಗುತ್ತಿತ್ತು. 

ಪ್ರಸಾದ್ ಹಾಗೂ ವಿನಯಾ ಇವರಿಗೆ ಟ್ಯಾಲೆಂಟೆಡ್ ಮಗಳಿದ್ದಾಳೆ ಅವರೇ ಪ್ರಥಮಾ. ಝೀ ಕನ್ನಡ ವಾಹಿನಿಯಲ್ಲಿ ಸೀರಿಯಾ ಮಾಡುತ್ತಾ ಕೆಲವೊಂದು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

Independence day ದಿನ ಹುಟ್ಟಿದ ರಾಜ್ ಪುತ್ರನಿಗೆ ರಾಘವೇಂದ್ರ ಎಂದು ಹೆಸರಿಡಲು ಕಾರಣ ಇಲ್ಲಿದೆ!

Follow Us:
Download App:
  • android
  • ios