ಮುಂಬೈ (ಸೆ. 04): ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ವೇಳೆ ಏಕ್‌ ಪ್ಯಾರ್‌ ಕಾ ನಗ್ಮಾ ಹೈ ಎಂದು ಥೇಟ್‌ ತನ್ನಂತೆ ಹಾಡಿ, ರಾತ್ರೋರಾತ್ರಿ ಸೂಪರ್‌ ಸ್ಟಾರ್‌ ಆಗಿರುವ ರಾನು ಮೊಂಡಲ್‌ ಪ್ರಸಿದ್ಧಿ ಕೊನೆವರೆಗೂ ನಿಲ್ಲುವುದಿಲ್ಲ ಎಂದು ಲತಾ ಮಂಗೇಶ್ಕರ್‌ ಹೇಳಿದ್ದಾರೆ.

ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ರಾನು ಮಂದಾಲ್; ಯಾರೀಕೆ?

ನನ್ನ ಹೆಸರು ಹಾಗೂ ಕೆಲಸದಿಂದ ಯಾರಿಗಾದರೂ ಒಳ್ಳೆಯದಾದರೆ ಅದು ನನ್ನ ಅದೃಷ್ಠ. ಆದರೆ ಅನುಕರಣೆ ವಿಶ್ವಾಸಾರ್ಹವೂ ಅಲ್ಲ, ಯಶಸ್ಸಿನ ಮೆಟ್ಟಿಲೂ ಅಲ್ಲ. ಹಲವು ಮಕ್ಕಳು ನನ್ನ ಹಾಡುಗಳನ್ನು ಚೆನ್ನಾಗಿ ಹಾಡಿದ್ದಾರೆ. ಆದರೆ ಅವರೆಲ್ಲಾ ಎಲ್ಲಿ ಹೋದರು? ನನಗೆ ಸುನಿಧಿ ಚೌಹಾಣ್‌ ಹಾಗೂ ಶ್ರೇಯಾ ಘೋಷಾಲ್‌ ಬಿಟ್ಟರೆ ಬೇರೆ ಯಾರೂ ಗೊತ್ತಿಲ್ಲ. ಗಾಯಕರು ಸ್ವಂತಿಕೆ ಉಳಿಸಿಕೊಳ್ಳಬೇಕು. ಅದಕ್ಕೆ ನನ್ನ ಸಹೋದರಿ ಆಶಾ ಭೋಸ್ಲೆ ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.