ಕುಡ್ಲದ ಬೆಡಗಿ ಶಿಲ್ಪಾ ಶೆಟ್ಟಿಗೆ ಜನ ಸೇವೆ ಮಾಡುವ ಮನಸ್ಸಾಗಿದೆಯಂತೆ. ಜನರು ಆರೋಗ್ಯಯುತ ಜೀವನ ನಡೆಸಲು ಸಹಾಯ ಮಾಡಬೇಕು ಎನ್ನುವ ಇರಾದೆಯಿದೆಯಂತೆ.

ನವದೆಹಲಿ (ಫೆ 17): ಕುಡ್ಲದ ಬೆಡಗಿ ಶಿಲ್ಪಾ ಶೆಟ್ಟಿಗೆ ಜನ ಸೇವೆ ಮಾಡುವ ಮನಸ್ಸಾಗಿದೆಯಂತೆ. ಜನರು ಆರೋಗ್ಯಯುತ ಜೀವನ ನಡೆಸಲು ಸಹಾಯ ಮಾಡಬೇಕು ಎನ್ನುವ ಇರಾದೆಯಿದೆಯಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚಿಗೆ ಯೋಗದ ಕಡೆ ಹೆಚ್ಚಿನ ಒಲವು ಹೊಂದಿರುವ ಶಿಲ್ಪಾ ಶೆಟ್ಟಿ Theshilpashetty.com ಎನ್ನುವ ಹೊಸ ವೆಬ್ ಸೈಟೊಂದನ್ನು ಲಾಂಚ್ ಮಾಡಿದ್ದಾರೆ. ಈ ವೆಬ್ ಸೈಟ್ ಮೂಲಕ ಹಣ ಮಾಡುವ ಆಸೆಯಿಲ್ಲ. ಬದಲಿಗೆ ಜನರಿಗೆ ಯೋಗದ ಬಗ್ಗೆ ಜಾಗೃತಿ ಮೂಡಿಸುತ್ತಾ, ಆರೋಗ್ಯಯುತ ಜೀವನ ನಡೆಸಲು ಸಹಾಯ ಮಾಡಬೇಕೆಂದಿದ್ದೇನೆ ಎಂದು ಹೇಳಿದ್ದಾರೆ.