‘ಭಾರತ್’ ಚಿತ್ರದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿರುವ ಸಲ್ಮಾನ್ ಖಾನ್ ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದ ಕೆಲ ಅಂಶಗಳನ್ನು ಇಲ್ಲಿ ಉಲ್ಲೇಖ ಮಾಡಲೇಬೇಕು.

ಬಾಲ್ಯದಲ್ಲಿಯೇ ತಂದೆಯನ್ನು ಅಗಲುವ ಬಾಲಕ ನಮತರ ಬೆಳೆದು ದೊಡ್ಡವಾನದ ನಂತರದ ಜೀವನ ಈ ಕಥಾಹಂದರ ಇಟ್ಟುಕೊಂಡು ಭಾರತ್ ಸಿನಿಮಾ ಸಿದ್ಧವಾಗಿದೆ.

ಭಾರತ್ ಚಿತ್ರದ ಜತೆಜತೆಗೆ ಸಲ್ಮಾನ್ ಸಂಜಯ್ ಲೀಲಾ ಬನ್ಸಾಲಿ ಜತೆಗೂ ಕೆಲಸ ಮಾಡುತ್ತಿದ್ದಾರೆ. ಸಂದರ್ಶನದ ವೇಳೆ ಮಾಧ್ಯಮ ಸಂಸ್ಥೆ ಸಲ್ಮಾನ್ ರಿಲೇಶನ್ ಶಿಪ್ ಗಳ ಬಗ್ಗೆಯೂ ಪ್ರಶ್ನೆ ಮಾಡಿದೆ. ನಿಮಗೆ ಮಕ್ಕಳು ಬೇಕೆಂದರೆ ಏನು ಮಾಡುತ್ತೀರಿ ಎಂದೂ ಕೇಳಿದೆ.

ಇದಕ್ಕೆ  ಕೂಲ್ ಆಗಿಯೇ ಉತ್ತರ ನೀಡಿದ ಖಾನ್, ಹೌದು..‘ನನಗೆ ಮಕ್ಕಳು ಬೇಕು.. ಆದರೆ ತಾಯಿ ಬೇಕಿಲ್ಲ.. ಆದರೆ ಮಕ್ಕಳಿಗೆ ತಾಯಿ ಬೇಕು’ ಎಂದು ಡಿಪ್ಲೋಮ್ಯಾಟಿಕ್ ಉತ್ತರ ನೀಡಿದ್ದಾರೆ.