ಹೊಸ ಜೋಡಿ ಹನಿಮೂನ್, ಅದೂ ಇದೂ ಅಂತ ಹಲವು ದಿನ ಸುತ್ತಾಟ ನಡೆಸುತ್ತಾರೆ ಎಂದೇ ಹಲವರು ಭಾವಿಸಿದ್ದರು. ಆದರೆ, ಅದಕ್ಕೆ ತದ್ವಿರುದ್ಧವಾಗಿ ಈ ಇಬ್ಬರೂ ಮತ್ತೆ ತಮ್ಮತಮ್ಮ ವೃತ್ತಿಯ ಕಡೆ ಗಮನ ಹರಿಸಿದ್ದರು. ಆದರೆ ಇದೀಗ ಈ ಜೋಡಿ ಪ್ರಕೃತಿ ಹಳ್ಳಿಯ ಪರಿಸರದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ವಿಡಿಯೋ ನೋಡಿ!
ಹೊಸ ಜೋಡಿ ಪ್ರಕೃತಿ ನೋಟಕ್ಕೆ ಶರಣಾಗಿದ್ದಾರೆ!
ನಿರೂಪಕಿ, ನಟಿ ಹಾಗೂ ನವವಿವಾಹಿತೆ ಅನುಶ್ರೀ (Anchor Anushree) ಅವರು ಇತ್ತೀಚೆಗಷ್ಟೇ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟು ಹೊಸ ಜೀವನ ನಡೆಸುತ್ತಿದ್ದಾರೆ. ಮದುವೆಯಾದ ಬಳಿಕ ಒಂದೇ ವಾರಕ್ಕೆ ಈ ಜೋಡಿ ತಮ್ಮತಮ್ಮ ಕೆಲಸಗಳಿಗೆ ಮರಳಿ ಹಲವರಿಗೆ ಅಚ್ಚರಿ ಹುಟ್ಟಿಸುವಂತೆ ಮಾಡಿದ್ದರು. ಆದರೆ, ಈಗ ಕೆಲಸದ ಮಧ್ಯೆ ಗ್ಯಾಪಲ್ಲಿ ಹಳ್ಳಿಗೆ ಹೋಗಿ ಅಲ್ಲಿ ಟ್ರಾಕ್ಟರ್ ಹಾಗೂ ಕಾರಿನಲ್ಲಿ ಜಮೀನಿನಲ್ಲಿ ಸುತ್ತಾಡುತ್ತ ಪ್ರಕೃತಿಯಲ್ಲಿ ಎಂಜಾಯ್ ಮಾಡುತ್ತ ಕಾಲ ಕಳೆದಿದ್ದಾರೆ.
ಜೋರು ಮಳೆಯಲ್ಲಿ ಕಾರಿನಲ್ಲಿ ಕುಳಿತಿದ್ದಾರೆ ಇಬ್ಬರೂ!
ಟ್ರಾಕ್ಟರ್‌ನಲ್ಲಿ ಸ್ವಲ್ಪ ಸುತ್ತಾಡಿದ ಬಳಿಕ ಜೋರು ಮಳೆಯಲ್ಲಿ ಕಾರಿನಲ್ಲಿ ಕುಳಿತಿದ್ದಾರೆ ಇಬ್ಬರೂ. ಅದೇ ವೇಳೆ ಗಂಡ ರೋಷನ್ (Anchor Anushree Husband Roshan) ಹೆಂಡ್ತಿ ಅನುಶ್ರೀಗೆ ಪ್ರೀತಿಯಿಂದ ಎರಡು ಸೀಬೆ ಹಣ್ಣುಗಳನ್ನು ಕೊಟ್ಟಿದ್ದಾರೆ. ಅದೆಷ್ಟು ಫ್ರೆಶ್ ಆಗಿದೆ ಎಂದರೆ ಅಲ್ಲೇ ಎಲ್ಲೋ ಮರದಿಂದ ಆಗತಾನೇ ಕಿತ್ತು ಅನುಶ್ರೀ ಅವರಿಗೆ ನೀಡದ್ದಾರೆ ರೋಷನ್. ಅದನ್ನು ಅಷ್ಟು ನಿಖರವಾಗಿ ಹೇಗೆ ಹೇಳಬಹುದು ಎಂದರೆ, ರೋಷನ್ ಅವರು ಕೈಯಾರೆ ಅದನ್ನು ತಮ್ಮ ಹೆಂಡತಿಗೆ ಕೊಡುವಾಗ ಆ ಸೀಬೆ ಹಣ್ಣಿನಿಂದ (ಮಲೆನಾಡಿನಲ್ಲಿ ಅದನ್ನು ಪೇರಲ ಹಣ್ಣು ಎಂದು ಕರೆಯುತ್ತಾರೆ) ನೀರು ತೊಟ್ಟಿಕ್ಕುತ್ತಿತ್ತು.
ಪತಿ ರೋಷನ್ ಜೊತೆ ಹಿಲ್ ಲೊಕೇಶನ್‌ಗಳಲ್ಲಿ ಅನುಶ್ರೀ ಅವರು ಸುತ್ತಾಟ ನಡೆಸುತ್ತಿದ್ದಾರೆ. ಅಲ್ಲಿ ಗಂಡ-ಹೆಂಡತಿ ಜೋಡಿಯಾಗಿ ಹೊಸ ಹುರುಪಲ್ಲಿ ಬೆಟ್ಟದ ಮೇಲೆ. ಹೊಲ-ಗದ್ದೆಗಳಲ್ಲಿ ಓಡಾಡುತ್ತಿದ್ದಾರೆ. ಟ್ರಾಕ್ಟರ್‌ನಲ್ಲಿ ಹತ್ತಿಕೊಂಡು ಹೋಗುತ್ತಾ, ಪ್ರಕೃತಿಯನ್ನು ಎಂಜಾಯ್ ಮಾಡುತ್ತಾ ಇದ್ದಾರೆಈ ನವ ಜೋಡಿ!
ಮಡಿಕೇರಿ ಮೂಲದ ರೋಶನ್!
ಇತ್ತೀಚೆಗಷ್ಟೆ ನಟಿ ಅನುಶ್ರೀ ಹಾಗೂ ಮಡಿಕೇರಿ ಮೂಲದ ರೋಶನ್ ಅವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಂಸಾರ ಶುರುವಿಟ್ಟುಕೊಂಡಿದ್ದಾರೆ. ಮದುವೆಯಾದ ಸ್ವಲ್ಪೇ ದಿನಕ್ಕೇ ಅನುಶ್ರೀ ಹಾಗೂ ಪತಿ ಇಬ್ಬರೂ ತಮ್ಮತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡು ಹಲವರ ಹುಬ್ಬೇರಿಸಿದ್ದರು.
ಕಾರಣ, ಮದುವೆಯಾದ ಹೊಸ ಜೋಡಿ ಹನಿಮೂನ್, ಅದೂ ಇದೂ ಅಂತ ಹಲವು ದಿನ ಸುತ್ತಾಟ ನಡೆಸುತ್ತಾರೆ ಎಂದೇ ಹಲವರು ಭಾವಿಸಿದ್ದರು. ಆದರೆ, ಅದಕ್ಕೆ ತದ್ವಿರುದ್ಧವಾಗಿ ಈ ಇಬ್ಬರೂ ಮತ್ತೆ ತಮ್ಮತಮ್ಮ ವೃತ್ತಿಯ ಕಡೆ ಗಮನ ಹರಿಸಿದ್ದರು. ಆದರೆ ಇದೀಗ ಹೊಸ ಜೋಡಿ ಪ್ರಕೃತಿ ನೋಟಕ್ಕೆ ಶರಣಾಗಿದ್ದಾರೆ. ಹಳ್ಳಿಯ ಪರಿಸರದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
