ನಟ ಸುದೀಪ್ ಕೋಪಗೊಂಡು ಹುಚ್ಚ ವೆಂಕಟ್ ಅವರಿಗೆ ಶಿಕ್ಷೆಯಾಗುವ ತನಕ ಇನ್ನು ಮುಂದೆ ಕಾರ್ಯಕ್ರಮ ಆಯೋಜಿಸುವುದಿಲ್ಲ ಎಂದು ಟ್ವೀಟ್ ಸಹ ಮಾಡಿದ್ದರು.

ಬಿಗ್ ಬಾಸ್ ಮನೆಯಲ್ಲಿ ಅತಿಥಿಯಾಗಿ ಹೋದ ನಂತರ ಪ್ರಥಮ್ ಮೇಲೆ ಹಲ್ಲೆ ನಡೆಸಿದ್ದರು. ಪ್ರಥಮ್'ಗೆ ಹೊಡೆಯಲು ನಿರ್ಧರಿಸಿಕೊಂಡಿದ್ದೆ ಎಂದು ಸುವರ್ಣ ನ್ಯೂಸ್'ಗೆ ತಿಳಿಸಿದ್ದರು. ಈ ಅವಘಡ ನಡೆದ ನಂತರ ಕಾರ್ಯಕ್ರಮ ಆಯೋಜಕರಾದ ನಟ ಸುದೀಪ್ ಕೋಪಗೊಂಡು ಹುಚ್ಚ ವೆಂಕಟ್ ಅವರಿಗೆ ಶಿಕ್ಷೆಯಾಗುವ ತನಕ ಇನ್ನು ಮುಂದೆ ಕಾರ್ಯಕ್ರಮ ಆಯೋಜಿಸುವುದಿಲ್ಲ ಎಂದು ಟ್ವೀಟ್ ಸಹ ಮಾಡಿದ್ದರು.

ಈಗ ಆ ಘಟನೆಯ ನಂತರ ಹುಚ್ಚ ವೆಂಕಟ್ ಸುದೀಪ್ ಅವರನ್ನು ಸುವರ್ಣ ನ್ಯೂಸ್ ಮೂಲಕ ಕ್ಷಮೆ ಕೋರಿದ್ದಾರೆ. ' ನನಗಾಗಿ ನೀವು ಬಿಗ್ ಬಾಸ್ ಕಾರ್ಯಕ್ರಮದಿಂದ ಹಿಂದೆ ಸರಿಯಬೇಡಿ. ನಾನು ಮಾಡಿದ್ದು ತಪ್ಪು ಎನಿಸಿದ್ದಲ್ಲಿ ನಾನು ಕ್ಷಮೆ ಕೋರುತ್ತೇನೆ.ನಾನು ಹೊಡೆದಿರುವುದು ಕೆಟ್ಟ ವ್ಯಕ್ತಿಯನ್ನು ವಿನಾ ಒಳ್ಳೆಯ ವ್ಯಕ್ತಿಯನ್ನಲ್ಲ.ಕನ್ನಡ ಬಾವುಟದ ಬಗ್ಗೆ ಆತನಿಗೆ ಗೊತ್ತಿಲ್ಲ.ಹೆಣ್ಣು ಮಕ್ಕಳನ್ನು ನಿಂದಿಸುತ್ತಾನೆ. ನನ್ನ ಮುಂದೆಯೇ ಶಾಲಿನಿಯವರನ್ನು ತೆಗಳಿದ್ದ.ಬೇಕಾದರೆ ನೀವು ಕೂಡ ಆ ದೃಶ್ಯವನ್ನು ನೋಡಿ ಬೇಕಾದರೆ. ಇದನ್ನೆಲ್ಲ ನೋಡಿ ಹೇಗೆ ಸಹಿಸಿಕೊಂಡಿರಲು ಆಗುತ್ತೆ. ನೀವು ಬಿಗ್'ಬಾಸ್ ನೆಡಸಿಕೊಡಲಿಲ್ಲ ಅಂದ್ರೆ ನನಗೂ ಬೇಸರವಾಗುತ್ತದೆ. ನಿಮಗೆ ನೋವಾಗಿದ್ದರೆ ನಾನು ಕ್ಷಮೆ ಕೋರುತ್ತೇನೆ. ನೀವೆ ಪ್ರಥಮ್'ಗೆ ಪ್ರೋತ್ಸಾಹ ಕೊಟ್ಟರೆ ಜನ ತಪ್ಪು ತಿಳಿಯುತ್ತಾರೆ. ನಾನು ನಿಮ್ಮ ತಮ್ಮನ ರೀತಿ. ಇದನ್ನೇ ದೊಡ್ಡದು ಮಾಡದೆ ಕಾರ್ಯಕ್ರಮ ನಡೆಸಿಕೊಡಿ' ಎಂದು ಹುಚ್ಚ ವೆಂಕಟ್ ತಿಳಿಸಿದ್ದಾರೆ.