Published : Apr 22 2017, 08:53 PM IST| Updated : Apr 11 2018, 01:04 PM IST
Share this Article
FB
TW
Linkdin
Whatsapp
ನಗರದಲ್ಲಿ ಶನಿವಾರ ಸುದ್ದಿಗೋ ಷ್ಠಿಯಲ್ಲಿ ಸಿನಿಮಾ ಶೈಲಿಯಲ್ಲೇ ಮಾತನಾ ಡಿದ ಅವರು, ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ನಾನು ಜೀವಿಸುತ್ತಿದ್ದೇನೆ. ಸರ್ಕಾರ ನಗರದ ಸ್ವಚ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕರ ಹಿತಾಸಕ್ತಿ ಕಾಯಬೇಕು, 35 ಸಾವಿರ ಪೌರಕಾರ್ಮಿಕರನ್ನು ಕಾಯಂ ಗೊಳಿಸಬೇಕು ಎಂದು ಒತ್ತಾಯಿಸಿದರು.
ಮೈಸೂರು(ಏ.23): ಮುಂದಿನ ಚುನಾವಣೆ ವೇಳೆಗೆ ‘ಹುಚ್ಚ ವೆಂಕಟ್ ಸೇನೆ'ಯ ರಾಜಕೀಯ ಪಕ್ಷ ಎಲ್ಲೆಡೆ ತಲೆ ಎತ್ತ ಲಿದ್ದು ನನ್ನ ಅನು ಯಾಯಿಗಳು ಸ್ಪರ್ಧಿಸಲಿ'ದ್ದಾರೆ. ಭವಿಷ್ಯದಲ್ಲಿ ನಾನು ಪ್ರಧಾನ ಮಂತ್ರಿಯೂ ಆಗಬಹುದು ಎಂದು ನಟ ಹುಚ್ಚ ವೆಂಕಟ್ ಹೇಳಿಕೊಂಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋ ಷ್ಠಿಯಲ್ಲಿ ಸಿನಿಮಾ ಶೈಲಿಯಲ್ಲೇ ಮಾತನಾ ಡಿದ ಅವರು, ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ನಾನು ಜೀವಿಸುತ್ತಿದ್ದೇನೆ. ಸರ್ಕಾರ ನಗರದ ಸ್ವಚ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕರ ಹಿತಾಸಕ್ತಿ ಕಾಯಬೇಕು, 35 ಸಾವಿರ ಪೌರಕಾರ್ಮಿಕರನ್ನು ಕಾಯಂ ಗೊಳಿಸಬೇಕು ಎಂದು ಒತ್ತಾಯಿಸಿದರು. ‘ಪೊರ್ಕಿ ಹುಚ್ಚ ವೆಂಕಟ್' ಸಿನಿಮಾ ಏ.28 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಾಯಕ, ನಿರ್ದೇಶಕರೂ ಆಗಿರುವ ವೆಂಕಟ್ ಮಾಹಿತಿ ನೀಡಿದರು. ನನ್ನ ತಾಯಿ ಯಾವಾಗಲೂ ಪೊರ್ಕಿ ಎಂದು ಕರೆಯುತ್ತಿದ್ದರು. ಆದ್ದರಿಂದ ಪೊರ್ಕಿ ಹುಚ್ಚ ವೆಂಕಟ್ ಎಂದು ಚಿತ್ರಕ್ಕೆ ಹೆಸರಿಡಲಾಗಿದೆ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.