ಇತ್ತೀಚಿಗಷ್ಟೆ ವಿಚ್ಚೇದಿತ ಹೆಂಡತಿ ಸುಸಾನ್ ಖಾನ್ ಜೊತೆ ಓಡಾಡಿಕೊಂಡಿದ್ದರು ಮತ್ತೇ ಯಾರನ್ನು ವಿವಾಹವಾಗುತ್ತಾರೆ ಅಂತಿದ್ದೀರಾ.

ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಮತ್ತೆ ಮದುವೆಯಾಗುತ್ತಿದ್ದಾರೆ. ಇದೇನಪ್ಪ ಇತ್ತೀಚಿಗಷ್ಟೆ ವಿಚ್ಚೇದಿತ ಹೆಂಡತಿ ಸುಸಾನ್ ಖಾನ್ ಜೊತೆ ಓಡಾಡಿಕೊಂಡಿದ್ದರು ಮತ್ತೇ ಯಾರನ್ನು ವಿವಾಹವಾಗುತ್ತಾರೆ ಅಂತಿದ್ದೀರಾ. ಹೃತಿಕ್ ಮದುವೆಯಾಗುತ್ತಿರುವುದು ಮತ್ಯಾರನ್ನು ಅಲ್ಲ ಮೊದಲ ಪತ್ನಿ ಸುಸಾನ್ ಖಾನ್ ಅವರನ್ನೇ. ಪುನಃ ಅವರನ್ನೇ ಮರು ಮದುವೆಯಾಗುತ್ತಿದ್ದಾರೆ. ಕೆಲವು ದಿನಗಳಿಂದ ಮಕ್ಕಳ ಜೊತೆ ವಿಚ್ಚೇದಿತ ದಂಪತಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವ ಕಾರಣ ಮತ್ತೆ ವಿವಾಹವಾಗಲಿದ್ದಾರೆ ಎಂಬ ಗುಸುಗುಸು ಬಾಲಿವುಡ್ ಮಂದಿಯ ಬಾಯಲ್ಲಿ ಹರಿದಾಡುತ್ತಿದೆ.