Asianet Suvarna News Asianet Suvarna News

ಜೂಲಿಗೆ ಶಾಕ್ ಕೊಟ್ಟವಳು

How Angelina Jolie Told Brad Pitt She Wanted a Divorce

ತ್ತೀಚೆಗೆ ಆಸ್ಕರ್ ಗೆದ್ದಾಗ ನಟ ಲಿಯೋನಾರ್ಡೋ ಡಿಕ್ಯಾಪ್ರಿಯೋಗೆ ಪತ್ರಕರ್ತರು  ಒಂದು ಪ್ರಶ್ನೆ ಮುಂದಿಟ್ಟರು. ‘ಬದುಕಿನಲ್ಲಿ ಎಲ್ಲವನ್ನೂ ಗಳಿಸಿಬಿಟ್ಟಿರಿ. ಹೆಂಡತಿಯನ್ನು ಬಿಟ್ಟು. ನಿಮ್ಮ ಮದುವೆ ಯಾವಾಗ?’. ಡಿಕ್ಯಾಪ್ರಿಯೋ ನಗುತ್ತಾ, ‘ಹುಡುಕುತ್ತಲೇ ಇದ್ದೇನೆ. ಏಂಜಲೀನಾ ಜೂಲಿಯಂಥವಳು ಸಿಗಲಿಲ್ಲ’ ಎಂದಿದ್ದನ್ನು ಯಾರೂ ಮರೆತಿಲ್ಲ.

ಡಿಕ್ಯಾಪ್ರಿಯೋ ಮಾತ್ರವಲ್ಲ, ಬಹುಶಃ ಯಾರಿಗೂ ಹೊಟ್ಟೆಕಿಚ್ಚು  ತರಿಸುವ ದಾಂಪತ್ಯ ಪಿಟ್ ಮತ್ತು ಜೂಲಿಯದ್ದು. ಆಸ್ಕರ್ ವಿಜೇತ ನಟಿ ಏಂಜಲೀನಾ ಜೂಲಿಗೆ ಅದು ಮೂರನೇ ಮದ್ವೆ, ಬ್ರಾಪಿಗೆ ಇದು ಎರಡನೇ ಮದ್ವೆ ಅನ್ನೋದು ಮರೆತು ಹೋಗುವಷ್ಟು  ಅವರು ಪ್ರೀತಿಸಿದ್ದೂ ನಿಜ. ಆದರೆ, ಹಾಲಿವುಡ್'ನ ಈ ಸಂಸಾರದಲ್ಲೀಗ ವಿಚ್ಛೇದನದ ಬಿರುಗಾಳಿ ಎದ್ದು ಎಲ್ಲರಿಗೂ ಆಘಾತ ತಂದಿದೆ. ಅಷ್ಟಕ್ಕೂ ಈ ಡೈವೋರ್ಸ್'ಗೆ ಯಾರು ಕಾರಣ ಅಂತ  ಹುಡುಕಿದರೆ ಪೆಕ್ತ ಆಗೋದು ಮೂರನೇ ವ್ಯಕ್ತಿ! ಆಕೆಯೊಬ್ಬಳು ನಟಿ!

ಮರಿಯ ಕಾಟಿಲ್ಲಾರ್ ಎಂಬ  ಪ್ರೆಂಚ್ ನಟಿ ಇವರಿಬ್ಬರ ವಿಚ್ಛೇದನಕ್ಕೆ ಕಾರಣವಂತೆ. ಯಾರೀಕೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಇದೇ ನವೆಂಬರ್'ನಲ್ಲಿ ಬಿಡುಗಡೆ ಆಗ್ತಿರುವ ‘ಏಲ್ಲೀ’ನಲ್ಲಿ ಬ್ರಾಂಡ್ ಫಿಟ್ ಜೊತೆ ನಟಿಸುತ್ತಿದ್ದಾಳೆ. ‘ಏಲ್ಲೀ’ ಎರಡನೇ ವಿಶ್ವ ಯುದ್ಧದ ವೇಳೆ ನಡೆಯುವ ಒಂದು ಪ್ರೇಮದ ಕತೆ. ಉತ್ತರ ಆಫ್ರಿಕಾ ಗೂಢಚಾರಿಯೊಬ್ಬ ಬ್ರಾಡ್, ಫ್ರೆಂಚ್ ಹೋರಾಟಗಾರ್ತಿಯಾಗಿ ಮರಿಯನ್ ಅಭಿನಯಿಸುತ್ತಿದ್ದಾಳೆ. ಒಂದೂವರೆ ವರ್ಷದಿಂದ  ಒಂದೂವರೆ ವರ್ಷದಿಂದ ಈ ಚಿತ್ರವನ್ನು ಆಫ್ರಿಕ ಖಂಡದಲ್ಲಿ ಚಿತ್ರೀಕರಿಸಲಾಗಿದೆ. ಇಬ್ಬರು ಸುದೀರ್ಘವಾಗಿ ಚುಂಬಿಸಿಕೊಳ್ಳುವ ನಾಲ್ಕು ದೃಶ್ಯಗಳು ಈಚಿತ್ರದಲ್ಲಿವೆ. ಎಷ್ಟೋ ವೇಳೆ ವೀಕೆಂಡ್ ನಲ್ಲಿ ಮನೆಗೆ ವಾಪಸಾದರೂ ಬ್ರಾಡ್ ಫಿಡ್ ಮಾತ್ರ ಮನೆಗೆ ಹೋಗುತ್ತಿರಲಿಲ್ಲ. ಮರಿಯ ಜೊತೆ ಆಫ್ರಿಕಾ  ಸುತ್ತಾಟದಲ್ಲಿ ಕಾಲ ಕಳೆಯುತ್ತಿದ್ದರು ಎನ್ನುವ ದೂರು ಜೂಲಿಯದ್ದು.

ಮರಿಯಳನ್ನು ಮೋಹಿಸಲು ಶುರುಮಾಡಿದ ಮೇಲೆ ಬ್ರಾ, ಜೂಲಿ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ  ತೊಡಗಿಸಿ ಕೊಂಡಿರುವುದನ್ನೂ ಬಿಟ್ಟಿದ್ದಾರೆ. ಮದ್ವೆಗೂ ಮುನ್ನವೇ ಇವರಿಬ್ಬರೂ ‘ಜೂಲಿ- ಫಿಟ್ ಫೌಂಡೇಶನ್’ ಹುಟ್ಟುಹಾಕಿದ್ದರು. ಆಫ್ರಿಕದಲ್ಲಿನ ಬಡ್ಕೃನ, ಚಿಲಿಯ ಭೂಕಂಪದ ಸಂತ್ರಸ್ತರು ಮತ್ತು ಗ್ರೀಕ್ ವಲಸೆ ವೇಳೆಯ ನಿರಾಶ್ರಿತರ ಬೆಳಕಾಗಿದ್ದ ಈ ಸಂಸ್ಥೆಯನ್ನು ಜೂಲಿ ಹಲವು ತಿಂಗಳಿಂದ ಒಬ್ಬಂಟಿಯಾಗಿ ಮುನ್ನಡೆಸುತ್ತಿದ್ದಾರೆ. ವಿಯೆಟ್ನಾಂ, ಕಾಂಬೋಡಿಯಾ, ಇಥಿಯೋಪಿಯಾ, ನಮೀಬಿಯಾ ಹಾಗೂ ಫ್ರಾನ್ಸನ ಅನಾಥ ಮಕ್ಕಳನ್ನು ಈ ದಂಪತಿ ದತ್ತು ತೆಗೆದುಕೊಂಡಿತ್ತು. ಈ ಮಕ್ಕಳನ್ನೂ ಪಿಟ್ ತಿರಸ್ಕಾರದಿಂದ ನೋಡುತ್ತಿದ್ದಾರೆ.

ಪಿಟ್'ನ ವಿಚಿತ್ರ ವರ್ತನೆಗಳಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವುದು ಜೂಲಿಯ ಮತ್ತೊಂದು ದೂರು. ಪಿಟ್ ಮನೆಯಲ್ಲಿದ್ದಾಗ ವಿಪರೀತ ಕುಡಿದು, ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಿದ್ದಂರಂತೆ. ಹೀಗಾಗಿ ವಿಚ್ಛೇದನ ಪಡೆದು ಮಕ್ಕಳನ್ನು ಪ್ರೇಕ್ಯಕವಾಗಿ ಪಾಲನೆ ಮಾಡುವ ಹೊಣೆಯನ್ನು ತಾವೇ ಹೊರುವುದಾಗಿ ನಟಿ ಹೇಳಿ ಕೊಂಡಿದ್ದಾಳೆ

ಅಂದಹಾಗೆ, ಜೂಲಿ ಈಗ ಮಾಜಿ ಪತಿಯಿಂದ ಜೀವನಾಂಶವನ್ನೂ ಬಯಸುತ್ತಿಲ್ಲ. ಈ ನಟಿ ದುಡಿದಿದ್ದೇ ಸಾಕಷ್ಟಿದೆ.  1072 ಕೋಟಿ ಆಸ್ತಿಯಿದೆ. ಈಕೆಯ ಫ್ರೆಂಚ್ ಎಸ್ಟ್'ಟ್'ನಲ್ಲಿ ಕೋಟ್ಯಂತರ ರೂಪಾಯಿ ಲಾಭ ತರುವ ದ್ರಾಕ್ಷಿ ಬೆಳೆಯೇ ಜೀವನ ನಿರ್ವಹಣೆಗೆ ಸಾಕು.

Follow Us:
Download App:
  • android
  • ios