ಬೆಂಗಳೂರು (ನ. 17): ಬಾಲಿವುಡ್ ನಲ್ಲಿ ಮದುವೆ ಪರ್ವ ಶುರುವಾಗಿದೆ. ದೀಪಿಕಾ- ರಣವೀರ್ ಮದುವೆ ಮುಗಿಯಿತು. ಇನ್ನು ಪ್ರಿಯಾಂಕ- ಜಿಕ್ ಜೋನ್ಸ್ ಮದುವೆಗೆ ದಿನಗಣನೆ ಆರಂಭವಾಗಿದೆ. ಎಲ್ಲರ ಚಿತ್ರ ಜೋಧಪುರ ಅರಮನೆಯತ್ತ ನೆಟ್ಟಿದೆ. 

ಮದುವೆಗೆ ಕೆಲವೇ ದಿನಗಳು ಬಾಕಿ; ಪಿಗ್ಗಿಗೆ ಗೊತ್ತಾಯ್ತು ನಿಕ್ ರಹಸ್ಯ!

ಈಗಾಗಲೇ ಪ್ರಿವೆಡ್ಡಿಂಗ್ ಸೆಲಬ್ರೇಶನ್ ಶುರುವಾಗಿದೆ. ಪ್ರಿಯಾಂಕ ತನ್ನ ಸ್ನೇಹಿತೆಯರಿಗೆ ಬ್ಲಾಚುಲರ್ ಪಾರ್ಟಿ ಕೊಟ್ಟಾಗಿದೆ. ಅತ್ತ ನಿಕ್ ಕೂಡಾ ಬ್ಯಾಚುಲರ್ ಪಾರ್ಟಿ ಎಂಜಾಯ್ ಮಾಡಿದ್ದಾರೆ. 

ಗರ್ಲ್‌ಫ್ರೆಂಡ್‌ಗಿಂತ ಮೊಬೈಲೇ ಹೆಚ್ಚಾಯ್ತಾ ? ಅಲಿಯಾ ಅತ್ತರೂ ಕೇರ್ ಮಾಡದ ರಣವೀರ್!

ಇತ್ತ ಜೋಧಪುರದಲ್ಲಿ ಮದುವೆ ತಯಾರಿ ಶುರುವಾಗಿದೆ. ಪ್ರಿಯಾಂಕ ತಾಯಿ ಜೋಧಪುರಕ್ಕೆ ಬಂದಿಳಿದಿದ್ದಾರೆ. ಮದುವೆ ತಯಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.  ‘ಇದು ನಮ್ಮ ನೆಚ್ಚಿನ ನಗರಿ. ಹಾಗಾಗಿ ಮದುವೆಗೆ ಈ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದೇವೆ’ ಎಂದು ಹೇಳಿದ್ದಾರೆ. ಹತ್ತಿರದ ಬಂಧುಗಳು, ಆತ್ಮೀಯ ಸ್ನೇಹಿತರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿದೆ. ಚಿತ್ರರಂಗದ ಸ್ನೇಹಿತರಿಗಾಗಿ ಪ್ರತ್ಯೇಕ ಸಮಾರಂಭ ಆಯೋಜಿಸಲಾಗಿದೆ.