ಮದುವೆಗೆ ಕೆಲವೇ ದಿನಗಳು ಬಾಕಿ; ನಿಕ್ ಬಿಚ್ಚಿಟ್ರು ಶಾಕಿಂಗ್ ನ್ಯೂಸ್! | ಮದುವೆಗೂ ಮುನ್ನವೇ ನಿಕ್ ಜೋನ್ಸ್ ಬಿಚ್ಚಿಟ್ಟರು ರಹಸ್ಯ | ವಿಚಾರ ಗೊತ್ತಿದ್ದೂ ಪ್ರಿಯಾಂಕ ಒಪ್ಪಿಕೊಂಡ್ರಾ? 

ಬೆಂಗಳೂರು (ನ. 17): ಪ್ರಿಯಾಂಕ- ನಿಕ್ ಜೋನ್ಸ್ ಮದುವೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಮದುವೆ ಸಂಭ್ರಮ ಮನೆ ಮಾಡಿದೆ. ಈ ಸಂದರ್ಭದಲ್ಲಿ ನಿಕ್ ಜೋನ್ಸ್ ತಮ್ಮ ವೈಯಕ್ತಿಕ ಜೀವನದ ಕಹಿ ಸತ್ಯವೊಂದನ್ನು ಹೊರ ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

View post on Instagram

ನಾನು 13 ನೇ ವಯಸ್ಸಿನಿಂದ ಟೈಪ್ 1 ಡಯಾಬಿಟೀಸ್ ನಿಂದ ಬಳಲುತ್ತಿದ್ದೇನೆ. ನಾನು ಇದ್ದಕ್ಕಿದ್ದ ಹಾಗೆ 100 ಪೌಂಡ್ ತೂಕ ಕಳೆದುಕೊಂಡ. ಡಾಕ್ಟರ್ ಬಳಿ ಹೋಗಿ ಚೆಕ್ ಅಪ್ ಮಾಡಿಸಿದಾಗ ನನಗೆ ಡಯಾಬಿಟೀಸ್ ಇದೆ ಎಂದು ಗೊತ್ತಾಯಿತು. ಆಗ ನಾನು ಎಡ ಭಾಗದ ಪೋಟೋದಲ್ಲಿರುವಂತೆ ಇದ್ದೆ ಎಂದು ಹೇಳಿದ್ದಾರೆ. 

ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸುತ್ತೇನೆ. ವರ್ಕೌಟ್ ಮಾಡುತ್ತೇನೆ. ಪೌಷ್ಟಿಕಾಂಶಯುಕ್ತ ಆಹಾರವನ್ನು ತೆಗೆದುಕೊಳ್ಳುತ್ತೇನೆ. ನಿರಂತರವಾಗಿ ಬ್ಲಡ್ ಚೆಕ್ ಅಪ್ ಮಾಡಿಸುತ್ತೇನೆ. ಆಹಾರದಲ್ಲಿ ನಿಯಂತ್ರಣದಲ್ಲಿರುತ್ತೇನೆ. ನನಗೆ ಬೆಂಬಲ ನೀಡುತ್ತಿರುವ ನನ್ನ ಕುಟುಂಬದವರಿಗೆ, ಪ್ರೀತಿ ಪಾತ್ರರಿಗೆ ಎಲ್ಲರಿಗೂ ನಾನು ಋಣಿ ಎಂದು ನಿಕ್ ಜೋನ್ಸ್ ಹೇಳಿದ್ದಾರೆ.